Bangalore | ರಾಜ್ಯದಲ್ಲಿ ಸರಕಾರದ ದುರಾಡಳಿತ ಹೆಚ್ಚಾಗಿದೆ : ಎಂ.ಡಿ ಲಕ್ಷ್ಮಿನಾರಾಯಣ

1 min read
congress leader MD Lakshminarayana slams bjp govt saaksha tv

Bangalore | ರಾಜ್ಯದಲ್ಲಿ ಸರಕಾರದ ದುರಾಡಳಿತ ಹೆಚ್ಚಾಗಿದೆ : ಎಂ.ಡಿ ಲಕ್ಷ್ಮಿನಾರಾಯಣ

ಬೆಂಗಳೂರು : ಬೆಲೆ ಏರಿಕೆ ಹಾಗೂ ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರಕಾರದ ದುರಾಡಳಿತವನ್ನು ಜನರ ಮನೆ ಮನೆಗೆ ತಲುಪಿಸುವ ಮೂಲಕ ಜಾಗೃತಿ ಮೂಡಿಸಲಿದ್ದೇವೆ. ಸಚಿವ ಈಶ್ವರಪ್ಪನವರನ್ನು ಮಂದುವರೆಸಿದಲ್ಲಿ ರಾಜ್ಯದ ಜನರೇ ಬುದ್ದಿ ಕಲಿಸಿಲಿದ್ದಾರೆ ಎಂದು ಕೆಪಿಸಿಸಿ ಓಬಿಸಿ ಘಟಕದ ಅಧ್ಯಕ್ಷರಾದ ಎಂ.ಡಿ ಲಕ್ಷ್ಮಿನಾರಾಯಣ ಹೇಳಿದರು.

ನಗರದ ಯಶವಂತಪುರ ವಿಧಾನಸಭಾ ವ್ಯಾಪ್ತಿಯಲ್ಲಿ ಬಾಲ್‌ರಾಜ್‌ ಗೌಡ್‌ ಎಸ್‌ ಅವರ ಉಸ್ತುವಾರಿಯಲ್ಲಿ ನಡೆದಂತ ನಮ್ಮ ನಡಿಗೆ ಜನರ ಕಡೆಗೆ – ಸದಸ್ಯತ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದಲ್ಲಿ ಸರಕಾರದ ದುರಾಡಳಿತ ಹೆಚ್ಚಾಗಿದೆ. ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿದ್ದಾಗ ಕೆ.ಜೆ ಜಾರ್ಜ್‌ ಅವರ ಮೇಲೆ ಹರಿಹಾಯ್ದಿದ್ದ ಪಕ್ಷದವರು ಈಗ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಆತ್ಮಹತ್ಯೆ ನಂತರ ಸಂತೋಷ್‌ ಮೊಬೈಲ್‌ನಿಂದ ಬಂದಂತಹ ಮೇಸೇಜ್‌ನಲ್ಲಿ ಸಚಿವ ಈಶ್ವರಪ್ಪನವರ ಹೆಸರು ಇದೆ. ಅಲ್ಲದೆ, ಅವರ ಮೇಲೆ ಏಫ್‌ಐಆರ್‌ ಕೂಡಾ ದಾಖಲಾಗಿದೆ. ಈ ಹಿನ್ನೆಲೆಯಲಿ ಈಗಾಗಲೇ ರಾಜೀನಾಮೆ ಕೊಡಬೇಕಾಗಿತ್ತು. ಭಂಡತನ ತೋರಿಸುತ್ತಿರುವ ಸಚಿವ ಈಶ್ವರಪ್ಪನವರು 2019 ರಿಂದ ಇಲ್ಲಿಯವರೆಗೆ ನೀಡಿರುವ ಅನುದಾನದ ಬಗ್ಗೆ ನ್ಯಾಯಾಧೀಶರಿಂದ ತನಿಖೆ ಮಾಡಿಸಿದಲ್ಲಿ ಹಗರಣದ ತೀವ್ರತೆ ತಿಳಿಯಲಿದೆ. ರಾಜೀನಾಮೆ ನೀಡದೇ ಇದ್ದಲ್ಲಿ ರಾಜ್ಯದ ಮತದಾರರು ಸ್ಪಷ್ಟವಾದ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

congress leader MD Lakshminarayana slams bjp govt  saaksha tv

ಯಶವಂತಪುರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಬಾಲ್‌ರಾಜ್‌ ಗೌಡ.ಎಸ್‌ ಮಾತನಾಡಿ ಬೆಂಗಳೂರು ವ್ಯಾಪ್ತಿಯಲ್ಲಿರುವ ಅತಿದೊಡ್ಡ ವಿಧಾನಸಭಾ ಕ್ಷೇತ್ರವಾಗಿರುವ ಯಶವಂತಪುರದಲ್ಲಿ ನಮ್ಮ ನಡಿಗೆ ಜನರ ಕಡೆಗೆ ಎನ್ನುವ ಕಾರ್ಯಕ್ರಮದ ಮೂಲಕ ಜನರ ಮನೆ ಮನೆಗೆ ಬಿಜೆಪಿಯ ದುರಾಡಳೀತ ಹಾಗೂ ಬೆಲೆ ಏರಿಕೆಯಂತಹ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲದೇ, ಇದೇ ಸಂಧರ್ಭದಲ್ಲಿ ಕಾಂಗ್ರೆಸ್‌ ಸದಸ್ಯತ್ವ ಕಾರ್ಯಕ್ರಮವನ್ನೂ ನಡೆಸಲಾಗುತ್ತಿದ್ದು, ಹೆಚ್ಚಿನ ಜನರನ್ನು ಸದಸ್ಯರನ್ನಾಗಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.

ಬಿಜೆಪಿಯ ದುರಾಡಳಿತದಿಂದ ಜನರು ಬೇಸತ್ತು ಹೋಗಿದ್ದು ಮುಂದಿನ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ ನತ್ತ ಒಲವು ತೋರಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ನಿಶಾಲ್‌ ಚಾರಿಟೇಬಲ್‌ ಟ್ರಸ್ಟ್‌ನ ನಿರ್ದೇಶಕ ನಿಖಿಲ್‌ ಗೌಡ ಎಸ್‌.ಬಿ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. congress leader MD Lakshminarayana slams bjp govt

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd