ದಿಲ್ಲಿ ಚುನಾವಣಾ ಫಲಿತಾಂಶ ಕಾಂಗ್ರೆಸ್ ಪಕ್ಷದೊಳಗಿನ ಭಿನ್ನ ಮತ, ಬೇಗುದಿಯನ್ನು ಹೆಚ್ಚಿಸಿದೆ.
ಹಿರಿಯ ನಾಯಕರು ಬಹಿರಂಗವಾಗಿಯೇ ಕೆಲವು ನಾಯಕರ ಧೋರಣೆಯನ್ನು ಟೀಕಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ಜೈರಾಂ ರಮೇಶ್ ಟ್ವಿಟರ್ ನಲ್ಲಿ, ನಾವು ಅಧಿಕಾರ ಕಳೆದುಕೊಂಡು ವರ್ಷ ಆರಾಗಿದ್ದರೂ, ಕೆಲವು ನಾಯಕರು ಇನ್ನೂ ಅಧಿಕಾರದಲ್ಲಿರುವಂತೆ ವರ್ತಿಸುತ್ತಿದ್ದಾರೆ. ಅವರೆಲ್ಲಾ ಆತ್ಮವಿಮರ್ಶೆ ಮಾಡಿಕೊಳ್ಳಬೇಕೆಂದು ಟ್ವೀಟ್ ಮಾಡಿದ್ದಾರೆ.
ಇನ್ನೊಬ್ಬ ಮಾಜಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಟ್ವೀಟ್ ಮಾಡಿ ದಿಲ್ಲಿ ಚುನಾವಣಾ ಫಲಿತಾಂಶ ಕಾಂಗ್ರೆಸ್ ಪಾಲಿಗೆ ನಿರಾಶಾದಾಯಕ. ಜನರನ್ನು ತಲುಪಲು ನಾವು ಹೊಸ ಧ್ಯೇಯ, ಹೊಸ ಕಾರ್ಯತಂತ್ರದೊಂದಿಗೆ ಹೊಸ ದಿಕ್ಕಿನಲ್ಲಿ ಸಾಗಬೇಕಿದೆ ಎಂದಿದ್ದಾರೆ.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರಿ, ಶರ್ಮಿಷ್ಠ ಮುಖರ್ಜಿ ಬಿಜೆಪಿಯನ್ನು ಸೋಲಿಸಲು ನಾವು ಬೇರೆಯವರಿಗೆ ಹೊರಗುತ್ತಿಗೆ ನೀಡಿದ್ದೇವೆಯೇ? ಇಲ್ಲ ಎಂದಾದರೆ ನಾವು ನಮ್ಮ ಸೋಲಿನ ಬಗ್ಗೆ ಯೋಚಿಸದೆ ಅಪ್ ನ ವಿಜಯಕ್ಕೆ ಏಕೆ ಸಂತೋಷಪಡಬೇಕು? ಹೌದು ಎಂದಾದರೆ ನಾವು ನಮ್ಮ ‘ಅಂಗಡಿಯನ್ನು’ ಮುಚ್ಚುವುದು ಒಳ್ಳೆಯದಲ್ಲವೇ ಎಂದು ಟ್ವೀಟ್ ಮಾಡಿ ಅಪ್ ಗೆಲುವಿಗೆ ಸಂತೋಷ ವ್ಯಕ್ತಪಡಿಸಿದ ಮಾಜಿ ಸಚಿವ ಪಿ.ಚಿದಂಬರಂನ್ನು ತರಾಟೆಗೆ ತೆಗೆದುಕೊಂಡಿದ್ದರು.
84 ರೂಪಾಯಿಗೆ ಪೆಟ್ರೋಲ್ ಸಿಗಲೇಬೇಕು- ಆಗಸ್ಟ್ 4ಕ್ಕೆ ಪ್ರಧಾನಿ ನಿವಾಸ ಮುತ್ತಿಗೆ ಹಾಕಲಿರುವ ಕೇಜ್ರಿವಾಲ್:ರಾಹುಲ್ ಗಾಂಧಿ ಹಾದಿಯಲ್ಲಿ ಕೇಜ್ರಿವಾಲ್!
ನವದೆಹಲಿ: ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ವಿರೋಧಿಸಿ ಆಮ್ ಆದ್ಮಿ ಪಾರ್ಟಿ ಭಾರಿ ಹೋರಾಟಕ್ಕೆ ಕರೆ ನೀಡಿದೆ. ಆಗಸ್ಟ್ 4 ರಂದು ದೆಹಲಿಯ ಮಾಜಿ...








