Mekedatu padayatre | ನಮ್ಮ ಹಕ್ಕಿಗಾಗಿ ಹೋರಾಟ ನಿರಂತರ : ಸಿದ್ದರಾಮಯ್ಯ
ಬೆಂಗಳೂರು : ಮೇಕೆದಾಟು ಯೋಜನೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಭಾನುವಾರ ರಾಮನಗರದಿಂದ ಆರಂಭವಾದ ಕಾಂಗ್ರೆಸ್ ಪಾದಯಾತ್ರೆ ಬಿಡದಿಗೆ ಕೊನೆಗೊಂಡಿತ್ತು. ಇಂದು ಬಿಡದಿಯಿಂದ ಪಾದಯಾತ್ರೆ ಆರಂಭವಾಗಿದೆ.
ಈ ಪಾದಯಾತ್ರೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವಾರು ಮಂದಿ ಭಾಗಿಯಾಗಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ನೀರಿಗಾಗಿ ನಡಿಗೆ ಪಾದಯಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಜನಸಾಗರವೇ ಹರಿದು ಬರುತ್ತಿದೆ.
ಕಾವೇರಿ ನಮ್ಮ ಹಕ್ಕು, ನಮ್ಮ ಹಕ್ಕಿಗಾಗಿ ಹೋರಾಟ ನಿರಂತರವಾಗಿರಲಿದೆ. ಮಾಜಿ ಸಚಿವ ಜಯಚಂದ್ರ ಸೇರಿದಂತೆ ತುಮಕೂರು ಜಿಲ್ಲೆಯ ಮುಖಂಡರು, ಕಾರ್ಯಕರ್ತರು ಜೊತೆ ಇಂದಿನ ನಡಿಗೆ ಎಂದು ಬರೆದುಕೊಂಡಿದ್ದಾರೆ.
Congress mekedatu padayatre 2nd day siddaramaiah tweet