ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ CM ಬದಲಾವಣೆ ವಿಚಾರ ಮತ್ತೊಮ್ಮೆ ತಲೆ ಎತ್ತಿದೆ. ಕುಣಿಗಲ್ ಶಾಸಕ ರಂಗನಾಥ್ ತಮ್ಮ ಹಿಂದಿನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರುದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಂಗನಾಥ್ ಅವರು, ನಮ್ಮ ಕಾರ್ಯಕರ್ತರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು CM ಆಗಬೇಕು ಅಂತ ಹೇಳ್ತಾರೆ. ಅವರ ಮಾತುಗಳಲ್ಲಿ ಅರ್ಥ ಇದೆ. ನಾನೂ ಕೂಡಾ ಡಿಕೆಶಿ CM ಆಗ್ತಾರೆ ಅಂತ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಅವರು ಮುಂದುವರೆದು, ಸರ್ಕಾರದಲ್ಲಿ ಗೊಂದಲ ಉಂಟು ಮಾಡುವ ಹೇಳಿಕೆ ಕೊಡಬಾರದು ಅನ್ನೋದು ಸರಿ. ಆದ್ರೆ, ಕೆಲವು ವಿಷಯಗಳಲ್ಲಿ ನನಗೂ ಅಸಮಾಧಾನ ಇದೆ ಎಂದು ಹೇಳಿದರು.
ಈ ಹೇಳಿಕೆ ಮತ್ತೆ ಕಾಂಗ್ರೆಸ್ ಪಾಳಯದ ಒಳ ಕಲಹವನ್ನು ಬೆಳಕಿಗೆ ತಂದಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಚಟುವಟಿಕೆಗೆ ಇನ್ನಷ್ಟು ಬಣ್ಣ ಹಚ್ಚುವ ಸಾಧ್ಯತೆ ಇದೆ.








