ಮೈಸೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಾಂಗ್ರೆಸ್ ಶಾಸಕರು ಮುಗಿಬಿದ್ದಿದ್ದಾರೆ. ಎರಡು ರಾಜ್ಯಗಳ ಮುಖ್ಯಮಂತ್ರಿಗಳು ನಿಮ್ಮ ಬೆನ್ನಿಗಿದ್ದಾರೋ, ಕಾಲ ಕೆಳಗೆ ಇದ್ದಾರೋ ಗೊತ್ತಿಲ್ಲ. ಏನು ಬೇಕಾದರೂ ಮಾಡಬಹುದು ಅಂದುಕೊಳ್ಳಬೇಡಿ. ಕಾನೂನಿನ ಅಡಿಯಲ್ಲಿ ಕೆಲಸ ಮಾಡಿ ಎಂದು ಹುಣಸೂರು ಕಾಂಗ್ರೆಸ್ ಶಾಸಕ ಎಚ್.ಪಿ.ಮಂಜುನಾಥ್ ಕಿಡಿಕಾರಿದ್ದರೆ, ರೋಹಿಣಿ ಸಿಂಧೂರಿ ಐಎಸ್ಎಸ್ ಪಾಸ್ ಮಾಡಿದ್ದಾರಾ ? ಇಲ್ಲವಾ ? ಎಂಬುದೇ ಅನುಮಾನ ಮೂಡಿಸಿದೆ. ನಿಜವಾಗಿಯೂ ಪರಿಶ್ರಮದಿಂದ ಪಾಸ್ ಆಗಿದ್ದಾರಾ ? ಅಥವಾ ಪ್ರಭಾವ ಬಳಸಿ ಪಾಸ್ ಆಗಿದ್ದಾರಾ ಎಂಬುದು ಖಚಿತವಾಗಬೇಕಿದೆ ಎಂದು ಕಾಂಗ್ರೆಸ್ ಎಂಎಲ್ಸಿ ರಘು ಆಚಾರ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಶಾಸಕರು, ಕೆಡಿಪಿ ಸಭೆಯಲ್ಲಿ ಶಾಸಕರು, ಜನಪ್ರತಿನಿಧಿಗಳು ಅಧಿಕಾರಿಗಳನ್ನು ಪ್ರಶ್ನಿಸುವುದು ಸಹಜ. ಹುಣಸೂರಿನ ಅಭಿವೃದ್ಧಿ ಕೆಲಸಗಳ ವಿಷಯಕ್ಕೆ ಸಂಬAಧಿಸಿದAತೆ ನಾನು ಪ್ರಶ್ನೆ ಮಾಡಿದ್ದು ನಿಜ. ಅದನ್ನು ಅನುಪಾಲನಾ ವರದಿಯಲ್ಲಿ ಸೇರಿಸಿ ಮುಂದಿನ ಸಭೆಯಲ್ಲಿ ಉತ್ತರಿಸುವುದು ಪದ್ಧತಿ. ಆದರೆ ನಾನು ಪ್ರಶ್ನೆ ಮಾಡಿದ್ದಕ್ಕೆ ಇದೀಗ ಹಗೆತನ ಸಾಧಿಸಲು ಮುಂದಾಗಿದ್ದಾರೆ ಎಂದು ಮಂಜುನಾಥ್ ಆರೋಪಿಸಿದರು.
ನನಗೆ ಡಿಸಿ ಬರೆದಿರುವ ಪತ್ರವನ್ನು ಸೋಷಿಯಲ್ ಮೀಡಯಾದಲ್ಲಿ ಹರಿಯಬಿಟ್ಟಿದ್ದಾರೆ.

ನನಗೆ ಪತ್ರ ಬರೆದಿರುವುದು ಕಾನೂನುಬಾಹಿರ ಕ್ರಮ. ಸಭೆ ವಿಚಾರಗಳ ಬಗ್ಗೆ ಜಿಲ್ಲಾಧಿಕಾರಿ ಶಾಸಕರಿಗೆ ಪತ್ರ ಬರೆಯುವಂತಿಲ್ಲ. ಈ ವಿಚಾರದಲ್ಲಿ ಸರ್ವಾಧಿಕಾರಿಯಂತೆ ವರ್ತಿಸಿದ್ದು, ಹಿಟ್ಲರಿಸಂ ಮಾಡುತ್ತಿದ್ದಾರೆ. ಕಾನೂನು ತಜ್ಞರ ಸಲಹೆ ಪಡೆದು ಅವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಚ್ಚರಿಕೆ ನೀಡಿದರು.ನನಗೆ ಬರೆದಿರುವ ಪತ್ರದಲ್ಲಿ ನನ್ನ ವೈಯಕ್ತಿಕ ಸ್ಥಿರಾಸ್ತಿಯ ಭೂಪರಿವರ್ತನೆ ವಿಚಾರವನ್ನೂ ಪ್ರಸ್ತಾಪಿಸಿದ್ದೀರಿ. ಅದನ್ನು ಪ್ರಸ್ತಾಪಿಸುವ ಅಗತ್ಯವಾದರೂ ಏನಿತ್ತು? ಬ್ಲಾಕ್ಮೇಲ್ ಮಾಡುವ ಉದ್ದೇಶದಿಂದ ನನಗೆ ಪತ್ರ ಬರೆಯಲಾಗಿದೆ ಎಂಬುದು ಸ್ಪಷ್ಟ. ಈ ಮೂಲಕ ನನಗೆ ಪರೋಕ್ಷವಾಗಿ ಬೆದರಿಕೆ ಹಾಕಿದ್ದೀರಿ. ನಿಮ್ಮ ಜಮೀನಿಗೆ ಸಂಬAಧಿಸಿದ ದಾಖಲೆಗಳು ನನ್ನ ಬಳಿಕ ಇದೆ ಎಂಬ ಎಚ್ಚರಿಕೆ ನೀಡಿದ್ದೀರಿ. ಬಾಯಿ ಮುಚ್ಚಿಕೊಂಡಿರಬೇಕು ಎಂಬ ಸಂದೇಶವನ್ನು ಈ ಪತ್ರದ ಮೂಲಕ ಕೊಟ್ಟಿದ್ದೀರಿ. ಈ ರೀತಿಯ ಗೊಡ್ಡು ಬೆದರಿಕೆ ತಂತ್ರಕ್ಕೆ ನಾನು ಮಣಿಯಲ್ಲ ಎಂದು ಹುಣಸೂರು ಶಾಸಕ ಮಂಜುನಾಥ್ ತಿರುಗೇಟು ನೀಡಿದರು.
ಐಎಎಸ್ ಪಾಸ್ ಮಾಡಿರುವ ಬಗ್ಗೆ ಅನುಮಾನ..!
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಐಎಎಸ್ ಪಾಸ್ ಮಾಡಿರುವ ಬಗ್ಗೆ ಅನುಮಾನವಿದೆ. ನಿಜವಾಗಿಯೂ ಪಾಸ್ ಆಗಿದ್ದರೆ ಆಡಳಿತದ ಬಗ್ಗೆ ಸಾಮಾನ್ಯ ಜ್ಞಾನವಾದರೂ ಇರಬೇಕಲ್ವಾ ಎಂದು ಕಾಂಗ್ರೆಸ್ ಎಂಎಲ್ಸಿ ರಘು ಆಚಾರ್ ತರಾಟೆಗೆ ತೆಗೆದುಕೊಂಡಿದ್ದಾರೆ.

ರೋಹಿಣಿ ಸಿಂಧೂರಿ ಎರಡು ದಿನಗಳಲ್ಲಿ ಕ್ಷಮೆಯಾಚಿಸಬೇಕು. ಪತ್ರವನ್ನು ನಿಮ್ಮ ಕಚೇರಿಯವರು ಬಹಿರಂಗಪಡಿಸಿದ್ದಾ ಅಥವಾ ನೀವೇ ಬಹಿರಂಗಪಡಿಸಿದ್ದಾ ಎಂಬುದು ಗೊತ್ತಾಬೇಕು. ಈ ವಿಷಯವನ್ನು ಪರಿಷತ್ನಲ್ಲೂ ಪ್ರಸ್ತಾಪಿಸುತ್ತೇನೆ ಎಂದು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








