ADVERTISEMENT
Friday, August 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬಂಟ್ವಾಳದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ, ಮತ್ತೆ ಅಧಿಕಾರಕ್ಕೆ ತರಲು ಕೈ ನಾಯಕರ ಜಪ..!

Kariyappa N by Kariyappa N
January 7, 2021
in Newsbeat, Politics, Samagra karnataka, ರಾಜ್ಯ
congress
Share on FacebookShare on TwitterShare on WhatsappShare on Telegram

ಮಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ನಡೆದ ಬೆನ್ನಲ್ಲೇ ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ಮುಂದಾಗಿರುವ ಕಾಂಗ್ರೆಸ್ ನಾಯಕರು, ಹೋರಾಟ, ಸಂಘಟನೆ, ಸಂಕಲ್ಪ ಮೂಲಕ ಕಾಂಗ್ರೆಸ್ ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರಲು ಶಪಥ ಮಾಡಿದ್ದಾರೆ.
ಲಾಕ್‍ಡೌನ್ ತೆರವು ಬಳಿಕ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಕಾಂಗ್ರೆಸ್ ಪಕ್ಷದ ಮೈಸೂರು ವಿಭಾಗದ ಸಮಾವೇಶ ನಡೆಸಲಾಯಿತು.

ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು  8548998564

Related posts

reliance-jio-launches-jio-prime-membership-10th-anniversary-price-lock-guarantee-kannada

1 ವರ್ಷದ ಬೆಲೆ ಖಾತರಿಯೊಂದಿಗೆ ಜಿಯೋ ಪ್ರೈಮ್ ಅನ್ನು ಮರು ಪರಿಚಯಿಸಿದ ಜಿಯೋ

August 21, 2026
kataka-and-other-5-zodiac-signs-financial-gains-shukra-budha-conjunction-kannada

ಕಟಕ ಸೇರಿ ಈ 5 ರಾಶಿಯವರಿಗೆ ಕುಬೇರನ ಕೃಪೆ ಕೋಟ್ಯಾಧಿಪತಿಯಾಗುವ ಭಾಗ್ಯ..!

August 21, 2026

ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564

ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನಿಮ್ಮೆಲ್ಲರ ಬಯಕೆಯಂತೆ ನನಗೆ ಪಕ್ಷದ ಅಧ್ಯಕ್ಷ ಜವಾಬ್ದಾರಿ ವಹಿಸಿದ್ದಾರೆ. ಇದು ಹುದ್ದೆಯಲ್ಲ, ಅಧಿಕಾರವಲ್ಲ, ಬದಲಿಗೆ ಜವಾಬ್ದಾರಿ ಎಂದು ಹೇಳಿದ್ದೇನೆ. ಕೊರೋನಾ ಸಂದರ್ಭದಲ್ಲಿ ನೀವೆಲ್ಲ ಸೇರಿ ಮಾನವೀಯತೆಯಿಂದ ಆಡಳಿತ ಪಕ್ಷಕ್ಕಿಂತ ಹೆಚ್ಚಿನ ಕೆಲಸ ಮಾಡಿದ್ದೀರಿ. ಸೋನಿಯಾ ಗಾಂಧಿ ಅವರು ನಮಗೆ ಪತ್ರ ಬರೆದಿದ್ದು, ಬೇರೆ ರಾಜ್ಯಗಳಿಗಿಂತ ಉತ್ತಮ ಕಾರ್ಯ ಮಾಡಿದ್ದೀರಿ ಎಂದು ಅಭಿನಂದಿಸಿದ್ದಾರೆ.

dks
ಡಿ.28 ರಂದು ಪಕ್ಷದ ಸಂಸ್ಥಾಪನಾ ದಿನದಂದು ಈ ಸಭೆ ಬಗ್ಗೆ ಘೋಷಣೆ ಮಾಡಿದ್ದೇವು. ನಾವು ಕಾಂಗ್ರೆಸ್ ಪಕ್ಷವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎಂಬುದನ್ನು ಚರ್ಚಿಸಿದ್ದೇವೆ. ಅನೇಕ ನಾಯಕರು ಸಲಹೆ ನೀಡಿದ್ದಾರೆ. ಕೋರ್ ಕಮಿಟಿ ಮಾಡಲು ಸಲಹೆ ನೀಡಿದ್ದಾರೆ.
ಈ ವರ್ಷ ಹೋರಾಟದ, ಸಂಘಟನೆ ವರ್ಷ ಅಂತಾ ಈಗಾಗಲೇ ನಾವು ಘೋಷಿಸಿದ್ದೇವೆ. ರಾಜ್ಯ ಮಟ್ಟದ ಸಮಸ್ಯೆಗಳು ನಮಗೆ ಗೊತ್ತಿವೆ. ಅದರ ಬಗ್ಗೆ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಆದರೆ ಇಲ್ಲಿ ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಬೇಕಿದೆ. ನಿನ್ನೆ ನೀವೆಲ್ಲಾ ಗಮನಿಸಿದ್ದೀರಿ. ಬೆಂಗಳೂರಿನಲ್ಲಿ ಹಲವು ನಾಯಕರೆಲ್ಲ ಸೇರಿ, ಅಲ್ಲಿನ ಸಮಸ್ಯೆ ಮುಂದಿಟ್ಟುಕೊಂಡು ಹೋರಾಟ ಮಾಡಿದ್ದೇವೆ. ಅದೇ ರೀತಿ ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ನಿಮ್ಮದೇ ಆದ ಸಮಸ್ಯೆಗಳನ್ನು ಗುರುತಿಸಿ ಹೋರಾಟ ಮಾಡಬೇಕಿದೆ. ಚಿಕ್ಕಮಗಳೂರು, ಉಡುಪಿ, ಮೈಸೂರು ವಿಚಾರಗಳು ಬೇರೆ-ಬೇರೆ ಇರುತ್ತವೆ. ಶಾಸಕರ ವಿಚಾರ ಬೇರೆ ಇರುತ್ತೆ. ಇದಕ್ಕನುಗುಣವಾಗಿ ಸಂಘಟನೆ ಮಾಡಲು ಇಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಲ್ಲಿರುವ ಅಧ್ಯಕ್ಷರುಗಳು ನಿಮ್ಮ ವಿಚಾರ ತಿಳಿಸಲು ಅವಕಾಶ ಮಾಡಿಕೊಡಲಾಗುತ್ತದೆ. ನಿಮ್ಮ ನಾಯಕತ್ವವನ್ನು ನಾವು ಪರೀಕ್ಷೆ ಮಾಡುತ್ತಿದ್ದೇವೆ. ಇದು ದೆಹಲಿಯಿಂದ ಬಂದಿರುವ ಆದೇಶ ಎಂದು ತಿಳಿಸಿದರು.

150 ಕ್ಷೇತ್ರಗಳಲ್ಲಿ ಪ್ರವಾಸ ಮಾಡಲು ನಿರ್ಧಾರ
ಈ ವರ್ಷ 100 ರಿಂದ 150 ಕ್ಷೇತ್ರಗಳಲ್ಲಿ ಪ್ರವಾಸ ಮಾಡಲು ನಿರ್ಧರಿಸಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಮಾಸ್ ಬೇಸ್ ನಿಂದ ಕೇಡರ್ ಬೇಸ್ ಮಾಡಬೇಕು ಅಂತಾ ಹೇಳಿದ್ದೇವೆ. ಹೈಕಮಾಂಡ್ ಮೊದಲು ಪಂಚಾಯ್ತಿ ಹಾಗೂ ವಾರ್ಡ್ ಮಟ್ಟದ ಸಮಿತಿ ಮಾಡಬೇಕು ಎಂದು ಸೂಚಿಸಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.


ಎಲ್ಲ ಪಂಚಾಯ್ತಿಗೂ ಪಕ್ಷದಿಂದ ಅರ್ಜಿ ಪುಸ್ತಕ ನೀಡುತ್ತಿದ್ದು, ಅವುಗಳನ್ನು ತುಂಬಿ ಮತ್ತೆ ಪಕ್ಷಕ್ಕೆ ಸಲ್ಲಿಸಬೇಕು. ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ನೀಡುತ್ತೇವೆ. ಶಾಸಕರ ಮನೆಯಲ್ಲೋ, ನಾಯಕರ ಮನೆಯಲ್ಲೋ ಕೂತುಕೊಂಡು ಇದನ್ನು ತುಂಬಬೇಡಿ. ಆಯಾ ಪಂಚಾಯ್ತಿಗೆ ಹೋಗಿ ಅಲ್ಲೇ ಇದನ್ನು ತುಂಬಬೇಕು. ಈ ಬಗ್ಗೆ ನಾವು ಮಾಹಿತಿ ಪಡೆಯುತ್ತೇವೆ.
ಪ್ರಜಾಪ್ರತಿನಿಧಿ ಎಂಬ ಬೂತ್ ಮಟ್ಟದ ಸಮಿತಿ ರಚನೆಗೂ ನಾವು ಮುಂದಾಗಿದ್ದೇವೆ. ನಾನು ಈ ಹಿಂದೆ ಹೇಳಿದ್ದೇನೆ. ಕಾರ್ಯಕರ್ತರ ಧ್ವನಿ ಕೆಪಿಸಿಸಿ ಅಧ್ಯಕ್ಷರ ಧ್ವನಿಯಾಗಬೇಕು. ಆ ನಿಟ್ಟಿನಲ್ಲಿ ಪಕ್ಷ ಕಟ್ಟಲು ನಾವು ಸಜ್ಜಾಗಬೇಕು. ಇದಕ್ಕೆ ನಿಮ್ಮ ಸಹಕಾರ ಬೇಕು.

ಯುದ್ಧ ಸಂದರ್ಭದಲ್ಲಿ ಶಸ್ತ್ರಾಭ್ಯಾಸ ಬೇಡ
ರಾಜಕಾರಣದ ಯುದ್ಧ ಸಂದರ್ಭದಲ್ಲಿ ಶಸ್ತ್ರಾಭ್ಯಾಸ ಮಾಡುವುದಲ್ಲ. ಪೂರ್ವ ಸಿದ್ಧತೆ ಬೇಕು. ಅದು ವ್ಯವಸಾಯ ಇದ್ದ ಹಾಗೆ. ವ್ಯವಸಾಯದಲ್ಲಿ ಮಳೆ ಬಂದಾಗ ಹೊಲ ಉತ್ತು, ಬೀಜ ಬಿತ್ತಿ, ಗೊಬ್ಬರ ಹಾಕಿ, ಕಳೆ ಕಿತ್ತು ಆಮೇಲೆ ಬೆಳೆ ಕಟಾವು ಮಾಡಲಾಗುತ್ತದೆ. ಹಾಗೆ ಈಗಿನಿಂದಲೇ ಪಂಚಾಯ್ತಿ ಮಟ್ಟದಿಂದ ಸಂಸತ್ತಿನವರೆಗೂ ಪಕ್ಷ ಕಟ್ಟಬೇಕು. ನಾವು ಮೊದಲು ಕಾರ್ಯಕರ್ತರು. ಆಮೇಲೆ ನಾಯಕರು. ಅದಕ್ಕಾಗಿ ನಾವು ಕೆಳಗೆ ಕೂತು, ಮಾತನಾಡುವವರು ವೇದಿಕೆ ಮೇಲೆ ಬರಲು ಅವಕಾಶ ಮಾಡಿಕೊಡಲಾಗಿದೆ. ದೆಹಲಿ ನಾಯಕರೊಂದಿಗೆ ಚರ್ಚಿಸಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಡಿಕೆಶಿ ತಿಳಿಸಿದರು.
ಬೇರೆ ಪಕ್ಷಗಳ ವಿಚಾರ ಬೇರೆ ಸಮಯದಲ್ಲಿ ಚರ್ಚೆ ಮಾಡೋಣ. ಈಗ ನಮ್ಮ ಗಮನ ಪಕ್ಷ ಸಂಘಟನೆ ಮಾಡುವುದರ ಬಗ್ಗೆ ಇರಲಿ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾರ್ಯಕರ್ತರು ಶಕ್ತಿ ಮೀರಿ ಕೆಲಸ ಮಾಡಿದ್ದು, ನಮಗೆ ಸಮಾಧಾನಕರ ಫಲಿತಾಂಶ ಬಂದಿದೆ. ಬಿಜೆಪಿಯವರು ತಾವೇ ಗೆದ್ದಿರುವಂತೆ ನಂಬರ್ ಕೊಟ್ಟುಕೊಳ್ಳುತ್ತಿದ್ದಾರೆ. ನಾನು ಜಿಲ್ಲಾ ಕಾಂಗ್ರೆಸ್ ನಿಂದ ಮಾಹಿತಿ ಪಡೆದು, ನಮ್ಮ ಪಕ್ಷ ಎಷ್ಟು ಪಂಚಾಯಿತಿಗಳಲ್ಲಿ ಗೆದ್ದಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ನಿಖರವಾಗಿ ತಿಳಿಸುತ್ತೇನೆ.
ನಮ್ಮ ಪಕ್ಷದಿಂದ ದೂರ ಹೋದವರನ್ನು ಮತ್ತೆ ಪಕ್ಷಕ್ಕೆ ಸೆಳೆಯಲು ಕಾರ್ಯಕ್ರಮ ರೂಪಿಸಬೇಕು. ಕಾಂಗ್ರೆಸ್ ಎಲ್ಲ ವರ್ಗಕ್ಕೂ ಸೇರಿದ ಆಸ್ತಿ. ಹೀಗಾಗಿ ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಮುಂದಿನ ಪಂಚಾಯ್ತಿ, ಬೂತ್ ಹಾಗೂ ಬ್ಲಾಕ್ ಸಮಿತಿಯಲ್ಲಿ ಅವಕಾಶ ನೀಡಬೇಕು. ಎಲ್ಲ ಸಮಾಜವನ್ನೂ ಪ್ರತಿನಿಧಿಸಬೇಕು. ಈ ನಿಟ್ಟಿನಲ್ಲಿ ಹೊಸ ಸಮಿತಿಗಳನ್ನು ರಚನೆ ಮಾಡಿ. ಸಾಮಾಜಿಕ ಜಾಲತಾಣ ಬಹಳ ಮುಖ್ಯವಾಗಿದ್ದು, ಎಲ್ಲ ಸಮಿತಿಗಳು ಇದಕ್ಕೆ ಆದ್ಯತೆ ನೀಡಬೇಕು ಎಂದರು.
ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬಂತೆ ನಾವು ಒಂದು ಸಮಿತಿಯಲ್ಲಿದ್ದವರಿಗೆ ಮತ್ತೊಂದು ಸಮಿತಿಯಲ್ಲಿ ಜವಾಬ್ದಾರಿ ನೀಡುವುದಿಲ್ಲ. ಈ ಬಗ್ಗೆ ಮಾರ್ಗದರ್ಶನಗಳನ್ನು ನಿಮಗೆ ಕಳುಹಿಸಿಕೊಡುತ್ತೇವೆ. ಪಕ್ಷದ ಸಿದ್ಧಾಂತ ಹಾಗೂ ಗುರಿಯನ್ನು ನಾವು ಯಾವಾಗ ಮರೆಯುತ್ತೇವೋ ಆಗ ನಾವು ಸೋಲನುಭವಿಸುತ್ತೇವೆ ಎಂದು ಪಂಡಿತ್ ಜವಾಹರಲಾಲ್ ನೆಹರು ಅವರು ಹೇಳಿದ್ದಾರೆ. ಏನೇ ಒತ್ತಡ ಇದ್ದರೂ ನಾವು ನಮ್ಮ ಸಿದ್ಧಾಂತ ಬಿಡಬಾರದು. ಕಾಂಗ್ರೆಸ್ ಪಕ್ಷಕ್ಕೆ ಸಿದ್ಧಾಂತವೇ ಅಡಿಪಾಯ.
ಅವಕಾಶಗಳು ನಿಮ್ಮ ಮನೆ ಬಾಗಿಲಿಗೆ ಹುಡುಕಿಕೊಂಡು ಬರುವುದಿಲ್ಲ. ನೀವೇ ಅವಕಾಶ ಸೃಷ್ಟಿ ಮಾಡಿಕೊಂಡು ಮುಂದೆ ಸಾಗಬೇಕು ಎಂದು ಇಂದಿರಾಗಾಂಧಿ ಅವರು ಹೇಳಿದ್ದಾರೆ. ಅದೇ ರೀತಿ ಈ ವರ್ಷದಲ್ಲಿ ನಾವು ಹೋರಾಟ ಮಾಡಬೇಕು.

ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.

ಸಿದ್ದರಾಮಯ್ಯ ಅವರು, ಎಸ್.ಆರ್ ಪಾಟೀಲ್ ಅವರು, ಬೇರೆ ನಾಯಕರು ಎಲ್ಲಿಗೆ ಬರಬೇಕೋ ಅಲ್ಲಿಗೆ ಬರುತ್ತಾರೆ. ಮೊದಲ ಹಂತದಲ್ಲಿ, ನಾವು ಎಲ್ಲಿ ಸೋತಿದ್ದೇವೋ, ಎಲ್ಲಿ ನಮಗೆ ಶಾಸಕರಿಲ್ಲವೋ ಆ ಕ್ಷೇತ್ರದತ್ತ ಗಮನ ಹರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: BantwalCongress party organizationd k shivakumarkpccSiddaramaiah
ShareTweetSendShare
Join us on:

Related Posts

reliance-jio-launches-jio-prime-membership-10th-anniversary-price-lock-guarantee-kannada

1 ವರ್ಷದ ಬೆಲೆ ಖಾತರಿಯೊಂದಿಗೆ ಜಿಯೋ ಪ್ರೈಮ್ ಅನ್ನು ಮರು ಪರಿಚಯಿಸಿದ ಜಿಯೋ

by admin
August 21, 2026
0

  * ಆಗಸ್ಟ್‌ 20 ರಿಂದ ಜಿಯೋ ಪ್ರೈಮ್ ಲಭ್ಯ * ಜಿಯೋ 10ನೇ ವರ್ಷದ ಅಂಗವಾಗಿ ವಿಶೇಷ ಸದಸ್ಯತ್ವ * ಜಿಯೋದ ಪ್ರಸ್ತುತ ಉದ್ಯಮದ ಪ್ರಮುಖ...

kataka-and-other-5-zodiac-signs-financial-gains-shukra-budha-conjunction-kannada

ಕಟಕ ಸೇರಿ ಈ 5 ರಾಶಿಯವರಿಗೆ ಕುಬೇರನ ಕೃಪೆ ಕೋಟ್ಯಾಧಿಪತಿಯಾಗುವ ಭಾಗ್ಯ..!

by admin
August 21, 2026
0

ಕಟಕ ಸೇರಿ ಈ 5 ರಾಶಿಯವರಿಗೆ ಕುಬೇರನ ಕೃಪೆ ಕೋಟ್ಯಾಧಿಪತಿಯಾಗುವ ಭಾಗ್ಯ..! ತುಲಾ ರಾಶಿಯಲ್ಲಿ ಶುಕ್ರ ಹಾಗೂ ಬುಧ ಒಂದೇ ಸ್ಥಾನದಲ್ಲಿ ಸಂಚಾರ ಮಾಡಲಿವೆ. ಕುಂಭ ರಾಶಿ...

cognizant-launches-talent-accelerator-program-hires-489-b-school-graduates-kannada

ಟೆಕ್ ಹಿನ್ನೆಲೆ ಇಲ್ಲದವರಿಗೂ ಕಾಗ್ನಿಜೆಂಟ್‌ನಲ್ಲಿ ಉದ್ಯೋಗ, ಐಐಎಂ ಬೆಂಗಳೂರು ಸೇರಿ 58 ಸಂಸ್ಥೆಗಳ ಪದವೀಧರರ ನೇಮಕ

by admin
August 21, 2026
0

ಬೆಂಗಳೂರು: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮತ್ತು ತಂತ್ರಜ್ಞಾನ ಸೇವೆ ಒದಗಿಸುವ ಜಾಗತಿಕ ಮಟ್ಟದ ಮುಂಚೂಣಿ ಸಂಸ್ಥೆ ಕಾಗ್ನಿಜೆಂಟ್ ಭಾರತದಲ್ಲಿ ತನ್ನ ಹೊಸ ಟ್ಯಾಲೆಂಟ್ ಆಕ್ಸಿಲರೇಟರ್ ಕಾರ್ಯಕ್ರಮವನ್ನು ಆರಂಭಿಸಿದೆ....

jeep-compass-85th-anniversary-edition-launched-in-india-price-features-kannada

ಜೀಪ್ 85ನೇ ವಾರ್ಷಿಕೋತ್ಸವ: ಭಾರತದಲ್ಲಿ ಕೇವಲ 85 ಗ್ರಾಹಕರಿಗೆ ಸಿಗಲಿದೆ ‘ಕಾಂಪಾಸ್’ನ ಈ ಸ್ಪೆಷಲ್ ಎಡಿಷನ್ ಎಸ್‌ಯುವಿ!

by admin
August 21, 2026
0

ಬೆಂಗಳೂರು: ಜಗತ್ತಿನ ಖ್ಯಾತ ಎಸ್‌ಯುವಿ ತಯಾರಕ ಕಂಪನಿ ಜೀಪ್ ತನ್ನ 85ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಈ ಸಂಭ್ರಮವನ್ನು ಇಮ್ಮಡಿಗೊಳಿಸಲು ಕಂಪನಿಯು ಭಾರತದಲ್ಲಿ ತನ್ನ ಅತ್ಯಂತ ಜನಪ್ರಿಯ ಜೀಪ್...

swiggy-launches-guru-24x7-ai-business-partner-for-restaurant-owners-kannada

ಹೋಟೆಲ್ ಮಾಲೀಕರಿಗೆ ಸ್ವಿಗ್ಗಿಯಿಂದ ಹೊಸ ಗಿಫ್ಟ್, ಬಂತು 24×7 ಕೆಲಸ ಮಾಡುವ ಎಐ ಬಿಸಿನೆಸ್ ಪಾರ್ಟ್ನರ್! ಏನಿದು ‘ಗುರು’?

by admin
August 21, 2026
0

ಭಾರತದ ಪ್ರಮುಖ ಆನ್‌ಲೈನ್ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಸ್ವಿಗ್ಗಿ ತನ್ನ ಹೋಟೆಲ್ ಹಾಗೂ ರೆಸ್ಟೋರೆಂಟ್ ಪಾಲುದಾರರಿಗಾಗಿ ಹೊಚ್ಚಹೊಸ ತಂತ್ರಜ್ಞಾನವೊಂದನ್ನು ಪರಿಚಯಿಸಿದೆ. ಹೋಟೆಲ್ ಉದ್ಯಮವನ್ನು ಮತ್ತಷ್ಟು ಸುಲಭ ಮತ್ತು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram