Congress | ಜನತೆ ಬಯ್ಯುತ್ತಿರುವುದು ಬೆಂಗಳೂರನ್ನಲ್ಲ, ನಿಮ್ಮ ಸರ್ಕಾರದ ದುರಾಡಳಿತವನ್ನ
ಬೆಂಗಳೂರು : ಧಾರಾಕಾರ ಮಳೆಯಿಂದಾಗಿ ಬೆಂಗಳೂರು ಕೆರೆಯಂತಾಗಿದೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರನ್ನ ಟ್ರೋಲ್ ಮಾಡಲಾಗುತ್ತಿದೆ.
ಈ ಬಗ್ಗೆ ಸಚಿವ ಮುನಿರತ್ನ ಅಸಮಾಧಾನ ಹೊರಹಾಕಿದ್ದು, ಬೆಂಗಳೂರು ವಾಸಕ್ಕೆ ಯೋಗ್ಯವಲ್ಲ ಎನ್ನುವ ಅಯೋಗ್ಯ ಜನರು ಬೆಂಗಳೂರಿಗೆ ಬರಬಾರದು.
ಇವರನ್ನು ಬೆಂಗಳೂರಿಗೆ ಬನ್ನಿ ಎಂದು ಯಾರನ್ನು ಕರೆದಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರಲ್ಲೇ ಇದ್ದು, ಬೆಂಗಳೂರಿನ ಅನ್ನವನ್ನೇ ತಿಂದು, ನಂತರ ಬೆಂಗಳೂರಿಗೆ ಬೈಯ್ಯುತ್ತಿದ್ದಾರೆ.

ಈ ರೀತಿಯಾಗಿ ಯಾರು ಬೈಯ್ಯುತ್ತಿದ್ದಾರೋ ಅವರಿಂದಲೇ ಬೆಂಗಳೂರು ಹಾಳಾಗಿದೆ ಎಂದು ಕಿಡಿಕಾರಿದರು.
ಸಚಿವರ ಈ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ಕಿಡಿಕಾರಿದ್ದು, ನಾಪತ್ತೆಯಾಗಿದ್ದವರು ಹೇಳಿಕೆ ಕೊಡಲಷ್ಟೇ ಹೊರಬಂದಿರುವ ಸಚಿವ ಮುನಿರತ್ನರವರೇ, ತಾವೂ ಬೆಂಗಳೂರಿಗೆ ವಲಸೆ ಬಂದವರಲ್ಲವೇ ?
ಜನತೆ ಬಯ್ಯುತ್ತಿರುವುದು ಬೆಂಗಳೂರನ್ನಲ್ಲ, ನಿಮ್ಮ ಸರ್ಕಾರದ ದುರಾಡಳಿತವನ್ನ, ನಿಮ್ಮ ನಿರ್ಲಕ್ಷ್ಯವನ್ನ.
ನೆರೆ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರ ಎದುರು ನಿಂತು ಇದೇ ಮಾತುಗಳನ್ನು ಹೇಳಿ ‘ಶೌರ್ಯ ಪ್ರದರ್ಶನ’ ಮಾಡಬಲ್ಲಿರಾ ಎಂದು ಪ್ರಶ್ನಿಸಿದೆ.