Congress | “ಕಬ್ಬಿಣದ ಕಾಲುಗಳ ವ್ಯಕ್ತಿ” ಭಾರತಕ್ಕೆ ಗರಬಡಿಸಿದ್ದಾನೆ
ಬೆಂಗಳೂರು : ಮುಂಬೈ – ಗಾಂಧಿನಗರ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಡಿಕ್ಕಿ ಹೊಡೆದು ರೈಲಿನ ಮುಂಭಾಗಕ್ಕೆ ಹಾನಿಯಾಗಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದೆ.
ರಾಜ್ಯ ಕಾಂಗ್ರೆಸ್ ತನ್ನ ಟ್ವಿಟ್ಟರ್ ನಲ್ಲಿ..
ಕಾಂಗ್ರೆಸ್‌ನದ್ದು – ಭಾರತ್ ಜೋಡೋ ಯಾತ್ರೆ. ಬಿಜೆಪಿಯದ್ದು – ಭಾರತ್ ತೋಡೋ ಜಾತ್ರೆ.
ಉದ್ಘಾಟಣೆಯಾದ ಒಂದೇ ವಾರದಲ್ಲಿ ವಂದೇ ಭರತ್ ಎಕ್ಸ್‌ಪ್ರೆಸ್ ಮುಖ ಒಡೆದುಕೊಂಡಿದೆ!
“ಕಬ್ಬಿಣದ ಕಾಲುಗಳ ವ್ಯಕ್ತಿ” ಭಾರತಕ್ಕೆ ಗರಬಡಿಸಿದ್ದಾನೆ.

ಪುಲ್ವಾಮ ದಾಳಿಯಲ್ಲಿ 44 ಭಾರತೀಯ ಯೋಧರ ದೇಹಗಳು ಛಿದ್ರವಾಗಿ ಬಿದ್ದಿದ್ದಾಗ ಮೋಜಿನ ಫೋಟೋಶೂಟ್‌ಗೆ ಪೋಸ್ ಕೊಡ್ತಿದ್ದ ಮೋದಿ. ಈ ವಿಚಾರವನ್ನು ಏಕೆ ಹೇಳ್ತಿಲ್ಲ ಬಿಜೆಪಿ?
ನಿರುದ್ಯೋಗ ಐತಿಹಾಸಿಕ ಮಟ್ಟದಲ್ಲಿದೆ. ರೂಪಾಯಿ ಮೌಲ್ಯ ಐತಿಹಾಸಿಕ ಮಟ್ಟದಲ್ಲಿ ಕುಸಿದಿದೆ.
ಹಸಿವಿನ ಸೂಚ್ಯಂಕದಲ್ಲಿ ಭಾರತ ಐತಿಹಾಸಿಕ ಕುಸಿತ ಕಂಡಿದೆ. ಬೆಲೆ ಏರಿಕೆ ದಾಖಲೆ ಸೃಷ್ಟಿಸುತ್ತಿದೆ.
ಕೋವಿಡ್, ಪ್ರವಾಹದಿಂದ ರೈತರು ಕಂಗೆಟ್ಟಿದ್ದಾರೆ ಎಂದು ಬರೆದುಕೊಂಡಿದೆ.