BJP vs Congress | ರಾಜಸ್ಥಾನದಲ್ಲಿ ಕಾಂಗ್ರೆಸ್ ಚಿಂತನಾ ಸಭೆ : ಟ್ವಿಟ್ಟರ್ ನಲ್ಲಿ ಬಿಜೆಪಿ ವ್ಯಂಗ್ಯ

1 min read
Congress padayatre bjp vs congress tweet war saaksha tv

BJP vs Congress | ರಾಜಸ್ಥಾನದಲ್ಲಿ ಕಾಂಗ್ರೆಸ್ ಚಿಂತನಾ ಸಭೆ : ಟ್ವಿಟ್ಟರ್ ನಲ್ಲಿ ಬಿಜೆಪಿ ವ್ಯಂಗ್ಯ

ಬೆಂಗಳೂರು :  ರಾಜಸ್ಥಾನದಲ್ಲಿ ಕಾಂಗ್ರೆಸ್ ಚಿಂತನಾ ಸಭೆಯ ಬಗ್ಗೆ ರಾಜ್ಯ ಬಿಜೆಪಿ ಘಟಕ ವ್ಯಂಗ್ಯವಾಡಿದೆ. ಈ ಕುರಿತು  ಬಿಜೆಪಿ ಟ್ವೀಟ್ ಮಾಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕಾಲೆಳೆದಿದೆ. Congress think-tank in Rajasthan BJP irony on Twitter

ಬಿಜೆಪಿ ತನ್ನ ಟ್ವಿಟ್ಟರ್ ನಲ್ಲಿ…

ರಾಜಸ್ಥಾನದಲ್ಲಿ ಕಾಂಗ್ರೆಸ್ ಚಿಂತನಾ ಸಭೆ ನಡೆಯುತ್ತಿದೆ. ರಾಹುಲ್ ಗಾಂಧಿಗೆ ಮತ್ತೆ ಎಐಸಿಸಿ ಪಟ್ಟ ಕಟ್ಟುವಂತೆ ಚರ್ಚೆ ನಡೆಯುತ್ತಿದೆ. ಇದೇ ವೇಳೆ ಸಿದ್ದರಾಮಯ್ಯ ಬಣ ಡಿಕೆಶಿ ವಿರುದ್ಧ ಒಳಸಂಚು ನಡೆಸುತ್ತಿದೆ. ಭ್ರಷ್ಟಾಧ್ಯಕ್ಷ ರಿಗೆ ರಮ್ಯಾ ಮಂಗಳಾರತಿ ಮಾಡಿದರೆ, ಸಿದ್ದರಾಮಯ್ಯ ಆಪ್ತರು ರಮ್ಯಾ ಪರ ನಿಲ್ಲುತ್ತಿದ್ದಾರೆ.

ಇಷ್ಟು ದಿನಗಳ‌ ಕಾಲ “ಅಂತರ್ಧಾನ” ಸ್ಥಿತಿಯಲ್ಲಿದ್ದ ರಮ್ಯಾ ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸುತ್ತಾ ಹಠಾತ್ ಪ್ರತ್ಯಕ್ಷರಾಗಿದ್ದಾರೆ. ಈ ಅನಿರೀಕ್ಷಿತ ದಾಳಿಯ ಹಿಂದೆ #ಮೀರ್‌ಸಾದಿಕ್‌ ಕೈವಾಡವಿದೆ. ಡಿಕೆಶಿ ಅವರೇ, ನಿಮ್ಮ ವಿರೋಧಿ ಶಕ್ತಿಗಳ ಕೈ ಮೇಲಾಗುತ್ತಿದೆಯೇ?

ಮಾಜಿ ಸಚಿವ ಮಹಾದೇವಪ್ಪ ಅವರು ರಮ್ಯಾ ಪರ‌ ಬ್ಯಾಟ್ ಬೀಸಿದ್ದಾರೆಯೇ‌ ಹೊರತು ಡಿಕೆಶಿ ಪರವಲ್ಲ! ಮಹಾದೇವಪ್ಪ, ಸಿದ್ದರಾಮಯ್ಯ ಅತ್ಯಾಪ್ತರಲ್ಲೋರ್ವರು. ಸಿದ್ದರಾಮಯ್ಯ ಆಪ್ತರೆಲ್ಲಾ ರಮ್ಯಾ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ಇದೆಲ್ಲ ಏನನ್ನು ಸೂಚಿಸುತ್ತದೆ? ಮೀರ್‌ಸಾದಿಕ್‌ ‌ಬಣ ಡಿಕೆಶಿಯನ್ನು ಹರಕೆಯ ಕುರಿಯಾಗಿಸಲು ಹೊರಟಿದೆಯೇ?

ಡಿಕೆಶಿ ಅವರೇ, ನಿಮ್ಮ ವಿರುದ್ಧ ಈಗ ನಡೆಯುತ್ತಿರುವುದು ಮೀರ್‌ಸಾದಿಕ್ ಬಣದ ಸಂಚು. ಕಾಂಗ್ರೆಸ್ ಪಕ್ಷದಲ್ಲಿ ನಿಮ್ಮನ್ನು ಹಾಗೂ ನಿಮ್ಮ ತಂಡವನ್ನು ರೌಡಿಪಟ್ಟಿಗೆ ಸೇರಿಸುವ ತಂತ್ರ ನಡೆಯುತ್ತಿದೆ ಎಂದು ಬಿಜೆಪಿ ಬರೆದುಕೊಂಡಿದೆ. Congress think-tank in Rajasthan BJP irony on Twitter

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd