Congress | ಬಿಜೆಪಿಯ ಸುಳ್ಳುಗಳಿಗೆ ‘ಸತ್ಯ’ವೇ ದೇಶ ಬಿಟ್ಟು ಓಡಿ ಹೋಗಲಿದೆ
ಬೆಂಗಳೂರು : ಬಿಜೆಪಿ ಹೇಳುವ ಸುಳ್ಳುಗಳಿಗೆ ‘ಸತ್ಯ’ವೇ ಕಂಗೆಟ್ಟು ದೇಶ ಬಿಟ್ಟು ಓಡಿ ಹೋಗಲಿದೆ ಎಂದು ರಾಜ್ಯ ಕಾಂಗ್ರೆಸ್ ಘಟಕ ವ್ಯಂಗ್ಯವಾಡಿದೆ.
ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿರುವ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತ ಎಂದು ಬಿಜೆಪಿ ನಾಯಕರು ಹೇಳಿದ್ದರು.
ಈ ಸಂಬಂಧ ಟ್ವಿಟ್ಟರ್ ನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಮೊಟ್ಟೆ ಎಸೆದಿದ್ದು ಕಾಂಗ್ರೆಸ್ ಕಾರ್ಯಕರ್ತ ಎಂಬ ಕಾಗಕ್ಕ ಗುಬ್ಬಕ್ಕನ ಕತೆ ಕಟ್ಟಿರುವ ಬಿಜೆಪಿ ಉತ್ತರಿಸಬೇಕು.
![congress 'Truth' will run away from BJP's lies saakshatv](http://saakshatv.com/wp-content/uploads/2021/01/congress-min-300x169.jpg)
ಅವರು ಕಾಂಗ್ರೆಸ್ ಕಾರ್ಯಕರ್ತರೇ ಆಗಿದ್ದರೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಠಾಣೆಯಿಂದ ಜಾಮೀನು ಕೊಟ್ಟು ಕರೆತಂದಿದ್ದೇಕೆ? ಕಾಂಗ್ರೆಸ್ ಕಾರ್ಯಕರ್ತನಾಗಿದ್ದರೆ ಆತ ಅಪ್ಪಚ್ಚು ರಂಜನ್ಗೇಕೆ ಆಪ್ತನಾಗಿದ್ದಾನೆ.
ಬಿಜೆಪಿ ಹೇಳುವ ಸುಳ್ಳುಗಳಿಗೆ ‘ಸತ್ಯ’ವೇ ಕಂಗೆಟ್ಟು ದೇಶ ಬಿಟ್ಟು ಓಡಿ ಹೋಗಲಿದೆ! ಕಾರಿಗೆ ಮೊಟ್ಟೆ ಎಸೆದವರು ಕಾಂಗ್ರೆಸ್ನವರು ಎಂಬ ಕಟ್ಟುಕತೆ ಸೃಷ್ಟಿಸುವ ಮುನ್ನ ಉತ್ತರಿಸಿ. ಈ ವ್ಯಕ್ತಿಯೊಂದಿಗೆ ಅಪ್ಪಚ್ಚು ರಂಜನ್ ಅವರಿಗೆ ಏನು ಕೆಲಸ? ಸ್ಥಳೀಯ ಕಾಂಗ್ರೆಸ್ ಮುಖಂಡರಿಗೇ ಪರಿಚಯವಿಲ್ಲದ ಆತ ಕಾಂಗ್ರೆಸ್ ಕಾರ್ಯಕರ್ತನಾಗುವುದು ಹೇಗೆ ಎಂದು ಪ್ರಶ್ನಿಸಿದೆ.