ಧಾರವಾಡ : ನಾಳೆ ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ಹಿನ್ನೆಲೆ ಧಾರವಾಡದಲ್ಲಿ ಕಲಾವಿದನೊಬ್ಬ ಮರಳಿನಲ್ಲಿ ರಾಮಮಂದಿರ ನಿರ್ಮಾಣ ಮಾಡಿದ್ದಾರೆ. ನಗರದ ಕೆಲಗೇರಿ ಗಾಯತ್ರಿಪುರ ಕಲಾವಿದ ಮಂಜುನಾಥ ಹಿರೇಮಠ ಅವರು ಜನಜಾಗೃತಿ ಸಂಘ ಹಾಗೂ ದೊಡ್ಡ ನಾಯಕನಕೊಪ್ಪದ ನಿವಾಸಿಗಳ ಸಹಯೋಗದಲ್ಲಿ ದೊಡ್ಡ ನಾಯಕನ ಕೊಪ್ಪದ ಬಸ್ ನಿಲ್ದಾಣದ ಹತ್ತಿರ ರಾಮಮಂದಿರ ನಿರ್ಮಾಣ ಮಾಡಲಾಗಿದೆ.
ಒಂದು ಟಿಪ್ಪರ್ ಮರಳು ಬಳಸಿ ಸುಮಾರು ಆರು ಅಡಿ ಎತ್ತರ ಹತ್ತು ಅಡಿ ಅಗಲ ರಾಮಮಂದಿರ ಕಲಾಕೃತಿ ರಚಿಸಲಾಗಿದೆ. ಬೆಳಿಗ್ಗೆ 5.30 ರಿಂದ ಪ್ರಾರಂಭಿಸಿ 10 ಗಂಟೆ ಸುಮಾರಿಗೆ ರಾಮಮಮಂದಿರ ಕಲಾಕೃತಿ ರಚನೆ ಕಾರ್ಯ ಮುಗಿಸಲಾಗಿದೆ. ಕಲಾಕೃತಿ ನಿರ್ಮಾಣದ ಬಳಿಕ ದೊಡ್ಡನಾಯಕನ ಕೊಪ್ಪದ ನಿವಾಸಿಗಳು ಎಲ್ಲರೂ ಸೇರಿ ಆರತಿ ಬೆಳಗಿ ಪೂಜೆ ಸಲ್ಲಿಸಿದ್ದಾರೆ.
ನಾಳೆ ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಅಡಿಗಲ್ಲು ಸಮಾರಂಭ ನೇರವೆರಿಸಲಿದ್ದಾರೆ. ಈ ಹಿನ್ನೆಲೆ ತಮ್ಮ ಕಲಾಕೃತಿಯಲ್ಲಿ ಕಾಲವಿದ ಮೋದಿಯವರ ಚಿಕ್ಕ ಮೂರ್ತಿ ಕೂಡ ತಯಾರಿಸಿ ಆ ಮಂದಿರದ ಮೇಲೆ ಇಟ್ಟಿದ್ದಾರೆ.