ಬಾಗಲಕೋಟೆ ನಗರದಲ್ಲಿ ಕೊರೊನಾ ಕರಣಕೇಕೆ ಮುಂದುವರೆದಿದ್ದು ಇಂದು ಮತ್ತೆ ಇಬ್ಬರಿಗೆ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 35 ಕ್ಕೇರಿಕೆ ಏರಿಕೆಯಾಗಿದೆ. ಇಂದು ಸೋಂಕು ಪತ್ತೆಯಾದ ಇಬ್ಬರು ಸಂಬಂಧದಲ್ಲಿ ಅತ್ತಿಗೆ, ಮೈದುನ ಆಗಿದ್ದಾರೆ. 28 ವಯಸ್ಸಿನ ಮಹಿಳೆ p.655 ಹಾಗೂ 29 ವಯಸ್ಸಿನ ಯುವಕ P.656 ಗೆ ಸೋಂಕು ದೃಢಪಟ್ಟಿದೆ. ನಿನ್ನೆಯಷ್ಟೆ ಈ ಕುಟುಂಬದ p.367 ಹಾಗೂ 368 ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ರು. ಬೆಳಗಾಗುವಷ್ಟರಲ್ಲಿ ಕುಟಬದ ಇನ್ನಿಬ್ಬರಿಗೆ ಸೋಂಕು ದೃಢವಾಗಿ ಕೋವಿಡ್ ಆಸ್ಪತ್ರೆ ಸೇರಿದ್ದಾರೆ. ಇಬ್ಬರೂ ಬಾಗಲಕೋಟೆ ನಗರದ ಕಂಟೈನ್ಮೆಂಟ್ ಪ್ರದೇಶದವರು. P.367 ಹಾಗೂ 368 ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿದೆ. ಇನ್ನು 367 ಹಾಗೂ 368 ಇವರಿಗೆ p.186 ರ ನಾಲ್ಕು ವರ್ಷ ಬಾಲಕನ ದ್ವಿತೀಯ ಸಂಪರ್ಕದಿಂದ ಬಂದಿತ್ತು. ಇದೀಗ p. 367 ಹಾಗೂ 368 ಅವರ ಕುಟುಂಬದ ಇನ್ನಿಬ್ಬರಿಗೆ ಸೋಂಕು ಬಂದಿದೆ. ಹೀಗಾಗಿ ಒಂದೇ ಕುಟುಂಬದಲ್ಲಿ ಸೋಂಕಿತರ ಸಂಖ್ಯೆ ನಾಲ್ಕಕ್ಕೇರಿದೆ. ಕಳೆದ 17 ದಿನಗಳಿಂದ ಬಾಗಲಕೋಟೆ ನಗರದಲ್ಲಿ ಯಾವುದೇ ಕೇಸ್ ಪತ್ತೆ ಆಗಿರಲಿಲ್ಲ. ಇದೀಗ ಆ ಕಂಟೈನ್ಮೆಂಟ್ ಪ್ರದೇಶದ ನಿಮಯ ಸಡಿಲಿಸಬೇಕು ಅನ್ನೋವಷ್ಟರಲ್ಲಿ ಇಂದು ಅದೇ ಪ್ರದೇಶದ ಇನ್ನಿಬ್ಬರಿಗೆ ಸೋಂಕು ದೃಢವಾಗಿದೆ. ಆತಂಕ ಅಂದ್ರೆ ಇಂದು ಪಾಸಿಟಿವ್ ಬಂದಿರುವ ಇಬ್ಬರಿಗೂ ಈ ಮೊದಲು ನೆಗಟಿವ್ ಅಂತ ವರದಿ ಬಂದಿತ್ತು. ಇದೀಗ ಪಾಸಿಟಿವ್ ಅಂತ ದೃಢಪಟ್ಟಿದ್ದು ಆತಂಕ ಮೂಡಿಸಿದೆ…
ಹಲವು ದಿನಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದರೂ ಐದು ನಿಮಿಷದಲ್ಲಿ ಪರಿಹರಿಸಲು ಐದು ರೂಪಾಯಿಯ ನಾಣ್ಯ ಸಾಕು…
ಹಲವು ದಿನಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದರೂ ಐದು ನಿಮಿಷದಲ್ಲಿ ಪರಿಹರಿಸಲು ಐದು ರೂಪಾಯಿಯ ನಾಣ್ಯ ಸಾಕು. Even if you are in financial trouble for many...