ಭಾರತ-ಚೀನಾ ನಡುವೆ ಮುಂದುವರಿದ ಉದ್ವಿಗ್ನತೆ

ಭಾರತ-ಚೀನಾ ನಡುವೆ ಮುಂದುವರಿದ ಉದ್ವಿಗ್ನತೆ

ಲಡಾಖ್, ಸೆಪ್ಟೆಂಬರ್‌16: ಮಾಸ್ಕೋದಲ್ಲಿ ಜೈಶಂಕರ್-ಚೀನಾದ ವಿದೇಶಾಂಗ ಸಚಿವರ ಸಭೆಯ ನಂತರವೂ ಭಾರತ-ಚೀನಾ ಗಡಿ ಉದ್ವಿಗ್ನತೆ ಮುಂದುವರೆದಿದೆ. ಲೈನ್ ಆಫ್ ಆಕ್ಚುಯಲ್ ಕಂಟ್ರೋಲ್ (ಎಲ್‌ಎಸಿ) ನಲ್ಲಿ ಈ ವರ್ಷದ ಮೇ ತಿಂಗಳಿನಿಂದ ಸಂಘರ್ಷದ ವಾತಾವರಣ ಮುಂದುವರೆದಿದೆ ಮತ್ತು ಅದು ಇನ್ನಷ್ಟು ಹದಗೆಡುತ್ತಿದೆ. ಫಿಂಗರ್ 4 ರಿಡ್ಜ್ ಪ್ರದೇಶದ ಶಿಖರಗಳಲ್ಲಿ ಭಾರತೀಯ ಪಡೆಗಳು ಹಿಡಿತ ಸಾಧಿಸಿದ್ದರೂ, ಚೀನಾ ಆ ಸ್ಥಾನಗಳನ್ನು ಮರಳಿ ಪಡೆಯಲು ವಿಭಿನ್ನ ತಂತ್ರಗಳನ್ನು ಪ್ರಯತ್ನಿಸುತ್ತಲೇ ಇದೆ. ಏತನ್ಮಧ್ಯೆ, ಭಾರತ-ಚೀನಾ ಸೈನಿಕರು ಈ ತಿಂಗಳ ಆರಂಭದಲ್ಲಿ ಉತ್ತರ ಬ್ಯಾಂಕ್ ಆಫ್ ಪಾಂಗೊಂಗ್ ಲಕ್ ಮೇಲೆ 100-200 ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಪೂರ್ವ ಲಡಾಕ್‌ನಲ್ಲಿ ಚಳಿಗಾಲದಲ್ಲೂ ಸಹ ಪೂರ್ಣ ಪ್ರಮಾಣದ ಯುದ್ಧವನ್ನು ನಡೆಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಭಾರತೀಯ ಸೇನೆ ಪ್ರತಿಪಾದಿಸಿದೆ. ಚೀನಾ ಯುದ್ಧಕ್ಕೆ ಪರಿಸ್ಥಿತಿಗಳನ್ನು ಸೃಷ್ಟಿಸಿದರೆ, ಅವರು ಉತ್ತಮವಾಗಿ ತರಬೇತಿ ಪಡೆದು ಸನ್ನದ್ಧರಾದ ಮತ್ತು ಮಾನಸಿಕವಾಗಿ ಗಟ್ಟಿಯಾದ ಭಾರತೀಯರನ್ನು ಎದುರಿಸಬೇಕಾಗುತ್ತದೆ ಎಂದು ಭಾರತೀಯ ಸೇನೆ ಹೇಳಿದೆ.

ಭಾರತದ ಕಾರ್ಯಾಚರಣೆಯ ಲಾಜಿಸ್ಟಿಕ್ಸ್ ಸಮರ್ಪಕವಾಗಿ ಸಜ್ಜಾಗಿಲ್ಲ ಮತ್ತು ಚಳಿಗಾಲದಲ್ಲಿ ಪರಿಣಾಮಕಾರಿಯಾಗಿ ಹೋರಾಡಲು ಸಾಧ್ಯವಾಗುವುದಿಲ್ಲ ಎಂದು ಚೀನಾದ ಅಧಿಕೃತ ಮಾಧ್ಯಮ ಗ್ಲೋಬಲ್ ಟೈಮ್ಸ್ ವರದಿ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಸೇನೆಯ ಉತ್ತರ ಕಮಾಂಡ್ ಕೇಂದ್ರ ಕಚೇರಿ ಈ ಸಮರ್ಥನೆಗಳನ್ನು ನೀಡಿದೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This