ಹಿರಿಯ IAS ಅಧಿಕಾರಿ ವಿರುದ್ಧ ಧಾರ್ಮಿಕ ಮಂತಾತರ ಪ್ರಚೋದನೆ , ಹಿಂದೂ ಧರ್ಮದ ಅಪಪ್ರಚಾರ ಆರೋಪ
ಕಾನ್ಪುರದ ಐಎಎಸ್ ಅಧಿಕಾರಿಯೋರ್ವ ಧಾರ್ಮಿಕ ಮತಾಂತರವನ್ನು ಉತ್ತೇಜಿಸುತ್ತಿದ್ದು , ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ ಮಾಡ್ತಿರೋ ಆರೋಪ ಕೇಳಿಬಂದಿದೆ. ಹೌದು ಕಾನ್ಪುರದ ಹಿರಿಯ ಐಎಎಸ್ ಅಧಿಕಾರಿ ಇಫ್ತಿಖರುದ್ದೀನ್ ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ ಮಾಡುತ್ತಿರೋದಾಗಿ ಮಠ ಮಂದಿರ ಸಮನ್ವಯ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷ ಭೂಪೇಶ್ ಅವಸ್ಥಿ ಆರೋಪ ಮಾಡಿದ್ದಾರೆ. ಪ್ರಸ್ತುತ ಯುಪಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಮೊಹಮ್ಮದ್ ಇಫ್ತಿರಖುದ್ದೀನ್ ಹಿಂದೂ ಧರ್ಮದ ಬಗ್ಗೆ ಅಪಪ್ರಚಾರ ಮಾಡ್ತಿರೋ ಆರೋಪಕ್ಕೆ ಸಾಕ್ಷಿಯಾಗಿ ವೀಡಿಯೋವನ್ನೂ ಕೂಡ ಅವಸ್ಥಿ ಅವರು ಬಿಡುಗಡೆ ಮಾಡಿದ್ದಾರೆ.
ಈ ವಿಡಿಯೋ ಕ್ಲಿಪ್ ನಲ್ಲಿ ಐಎಎಸ್ ಅಧಿಕಾರಿ ಕಾನ್ಪುರದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾರೆ. ಮೌಲಾನಾ ಧಾರ್ಮಿಕ ಪ್ರವಚನಗಳನ್ನು ಕೇಳುತ್ತಿರುವಾಗ ಐಎಎಸ್ ಅಧಿಕಾರಿಯೊಂದಿಗೆ ನೆಲದ ಮೇಲೆ ಇನ್ನೂ ಹಲವರ ಗುಂಪು ಕುಳಿತುಕೊಂಡಿರುವುದು ವಿಡಿಯೋದಲ್ಲಿ ಗೊತ್ತಾಗುತ್ತದೆ. ಈ ವೇಳೆ ಇಫ್ತಿರಖುದ್ದೀನ್ ಧಾರ್ಮಿಕ ಮತಾಂತರದ ಬಗ್ಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಏತನ್ಮಧ್ಯೆ, ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ. ಡಿಜಿ ಸಿಬಿಸಿಐಡಿ ಜಿಎಲ್ ಮೀನಾ ಅವರು ಇದರ ನೇತೃತ್ವವನ್ನು ವಹಿಸಿಕೊಂಡಿದ್ದಾರೆ. ಎಸ್‌ಐಟಿ ತನ್ನ ವರದಿಯನ್ನು ಏಳು ದಿನಗಳಲ್ಲಿ ಯುಪಿ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಗೃಹ ಇಲಾಖೆ ಹೇಳಿದೆ. ಆದರೆ, ಯಾವಾಗ ವಿಡಿಯೋ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ವೀಡಿಯೊದಲ್ಲಿ, ಇಫ್ತ್ಖರುದ್ದೀನ್ ಇಸ್ಲಾಂ ಅನ್ನು ಅಳವಡಿಸಿಕೊಳ್ಳುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾತನಾಡಿರುವುದು ಗೊತ್ತಾಗಿದೆ.