Cooker Blast : ಕುಕ್ಕರ್ ಬ್ಲಾಸ್ ಆರೋಪಿ ಶಾರೀಕ್ ಗೆ ನಾಳೆ ಸರ್ಜರಿ
ಬೆಂಗಳೂರು : ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಶಾರೀಕ್ ಗೆ ನಾಳೆ ಸರ್ಜರಿ ನಡೆಯಲಿದೆ..
ಶಾರೀಕ್‌ಗೆ ಮಂಗಳೂರಿನಲ್ಲಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಬೆಂಗಳೂರಿಗೆ ಕರೆ ತರಲಾಗಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಾಂಬ್ ಸ್ಫೋಟದ ತೀವ್ರತೆಗೆ ಶಾರೀಕ್ ನ ಎರಡು ಕೈ ಮತ್ತು ಎದೆ ಭಾಗದಲ್ಲಿ ಗಂಭೀರ ಗಾಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಸರ್ಜನ್ ಕೆ.ಟಿ ರಮೇಶ್ ನೇತೃತ್ವದಲ್ಲಿ ಚಿಕಿತ್ಸೆ ನೀಡಲು ಎನ್‌ಐಎ ಮುಂದಾಗಿದೆ.
ಚಿಕಿತ್ಸೆ ನಡೆದು 7 ದಿನದ ಬಳಿಕ ಶಾರೀಕ್ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದ್ದು, ನಂತರ ಹೆಚ್ಚಿನ ವಿಚಾರಣೆಯನ್ನು ಎನ್‌ಐಎ ತಂಡ ನಡೆಸಲಿದೆ.