Cooking : ಸಿಂಪಲ್ ಆಗಿ ಮಾಡಿ ಟೇಸ್ಟಿ ಟೇಸ್ಟಿ ಎಗ್ ಬುರ್ಜಿ

1 min read

ಮೀಡಿಯಮ್ ಹೈ ಫ್ಲೇಮ್ ನಲ್ಲಿ ಒ ಬಾಣಲಿಯನ್ನ ಕಾಯಲು ಇಡಿ.. ಕಾಯ್ದ ನಂತರ ಒಂದು ಚಮಚ ಎಣ್ಣೆ ಹಾಕಿ..

ಎಣ್ಣೆ ಬಿಸಿಯಾದ ನಂತರ, ½ ಕಪ್ ಕತ್ತರಿಸಿದ ಈರುಳ್ಳಿ ಸೇರಿಸಿ ಕಂದುಬಣ್ಣಕ್ಕೆ ತಿರುಗುವರೆಗೂ ಹುರಿಯಿರಿ..

2 ಟೀಚಮಚ ಚಿಕ್ಕದಾಗಿಸ ಕತ್ತರಿಸಿದ ಹಸಿರು ಮೆಣಸಿನಕಾಯಿಗಳು, 1 ಟೀಚಮಚ ಸಣ್ಣದಾಗಿ ಕೊಚ್ಚಿದ ಶುಂಠಿ ಮತ್ತು 1 ಚಮಚ ಬೆಳ್ಳುಳ್ಳಿ ಸೇರಿಸಿ ಮತ್ತು ಈರುಳ್ಳಿ ತಿಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

ಈಗ, ½ ಕಪ್ ಸಣ್ಣದಾಗಿ ಕೊಚ್ಚಿದ ಟೊಮ್ಯಾಟೊ ಸೇರಿಸಿ ಮತ್ತು ಇನ್ನೊಂದು ನಿಮಿಷ ಬೇಯಿಸಿ. ಅಡುಗೆ ಮಾಡುವಾಗ ಟೊಮ್ಯಾಟೊವನ್ನು  ಸೌತ್ ಸಹಾಯದಿಂದ ಚನ್ನಾಗಿ ಮ್ಯಾಷ್ ಮಾಡಿಕೊಳ್ಳಿ..

ನಂತರ 1 ಟೀಚಮಚ ಧನ್ಯ ಪುಡಿ, ¼ ಟೀಚಮಚ ಅರಿಶಿನ ಪುಡಿ, 2 ಟೀಚಮಚ ಪಾವ್ ಭಾಜಿ ಮಸಾಲಾ, ಮತ್ತು ½ ಟೀಚಮಚ ಕೆಂಪು ಮೆಣಸಿನ ಪುಡಿ ಸೇರಿಸಿ, ಮತ್ತು 30-40 ಸೆಕೆಂಡುಗಳ ಕಾಲ ನಿರಂತರವಾಗಿ ತಿರುಗಿಸಿ.. ಈ ವೇಳೆ ಗ್ಯಾಸ್ ಲೋ ಫ್ಲೇಮ್ ನಲ್ಲಿಡಿ.. ಈಗ ಮೊಟ್ಟೆಗಳನ್ನ ಪ್ಯಾನ್ ಒಳಗೆ ಒಡೆಯಿರಿ. ಮೊಟ್ಟೆಗಳು ಮಸಾಲಾದೊಂದಿಗೆ ಮಿಶ್ರಣವಾಗುವವರೆಗೆ  ಚನ್ನಾಗಿ ತಿರುಗಿಸಿ.. ಒಂದಷ್ಟು ಸೆಕೆಂಡ್ ಗಳು ಬೇಯಿಸಿ ಗ್ಯಾಸ್ ಆಫ್ ಮಾಡಿಕೊಳ್ಳಿ..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd