Cooking : ಬಾಯಲ್ಲಿ ನೀರೂರಿಸುವ ಬಾದೂಷ ಮನೆಯಲ್ಲಿ ಮಾಡಿ …. ರೆಸಿಪಿ ನೋಡಿ..!!!
ಮೈದಾ ಹಿಟ್ಟು – 1 ಕಪ್
ಸಕ್ಕರೆ – 1 ಕಪ್
ತುಪ್ಪ – 5 ಚಮಚ
ಏಲಕ್ಕಿ – 3
ಅಡುಗೆ ಸೋಡಾ ಒಂದು ಪಿಂಚ್
ನಿಂಬೆರಸ – 4 ಹನಿ
ಮೊಸರು – ಸ್ವಲ್ಪ
ಹುರಿಯಲು ಎಣ್ಣೆ
ಮಾಡುವ ವಿಧಾನ:
ಮೊದಲಿಗೆ ಸಕ್ಕರೆ ಪಾಕವನ್ನು ತಯಾರಿಸಿ ಇಟ್ಟುಕೊಳ್ಳಿ. 100ml ನೀರಿಗೆ 1 ಕಪ್ ಸಕ್ಕರೆಯನ್ನು ಹಾಕಿ ಚೆನ್ನಾಗಿ ಕುದಿ ಬರೆಸಿ. ನಂತರ ಇದಕ್ಕೆ ನಿಂಬೆ ರಸ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಪಾಕ ತಯಾರಿಸಿ.
ನಂತರ ಒಂದು ಪಾತ್ರೆಯಲ್ಲಿ ತುಪ್ಪ ಮತ್ತು ಮೊಸರನ್ನು ಸೇರಿಸಿ ಚೆನ್ನಾಗಿ ಕಲಸಿ. ನಂತರ ಅದಕ್ಕೆ ಮೈದಾ ಹಿಟ್ಟನ್ನು ಬೆರೆಸಿ, ಬೇಕಾದರೆ ಸ್ವಲ್ಪ ನೀರನ್ನು ಸೇರಿಸಿ. ಬಳಿಕ ಹಿಟ್ಟನ್ನು ಚೆನ್ನಾಗಿ ನಾದಿ.
ಆನಂತರ ನಿಂಬೆ ಗಾತ್ರದ ಸಣ್ಣಸಣ್ಣ ಉಂಡೆಗಳನ್ನು ಮಾಡಿ.
ಕಡಾಯಿಯಲ್ಲಿ ಎಣ್ಣೆ ಹಾಕಿ ಬಿಸಿಮಾಡಿ. ನಂತರ ಮಾಡಿಟ್ಟುಕೊಂಡ ಹಿಟ್ಟಿನ ಉಂಡೆಗಳನ್ನು ಹೊಂಬಣ್ಣಕ್ಕೆ ಬರುವವರೆಗೆ ಹುರಿಯಿರಿ.
ನಂತರ ಇದನ್ನು ತಯಾರಿಸಿ ಇಟ್ಟುಕೊಂಡ ಸಕ್ಕರೆ ಪಾಕಕ್ಕೆ ಸ ಹಾಕಿ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಬೇಕಿದ್ದರೆ ಬಾದಾಮಿ,ಪಿಸ್ತಾ, ಗೋಡಂಬಿಗಳಿಂದ ಅಲಂಕರಿಸಿ.