Cooking : ಇನ್ಸ್ ಟೆಂಟ್ ಸ್ಟ್ರಾಬೆರ್ರಿ ಮಿಲ್ಕ್ ಶೇಕ್
(2 ಲೋಟಗಳಿಗೆ ಬೇಕಾಗುವ ಕ್ವಾಂಟಿಟಿ)
ಸ್ಟ್ರಾ ಬೆರಿ ಐಸ್ ಕ್ರೀಮ್
ಸಕ್ಕರೆ ( ಆಪ್ಷನಲ್ )
ಹಾಲು ½ ಲೀಟರ್ ( 2 ಲೋಟ )
ಐಸ್ ಕ್ಯೂಬ್ ಗಳು
ಹರ್ಶೀಸ್ ಸಿರಪ್ / ಚಕೋಲೇಟ್ ಸಿರಪ್ (ಆಪ್ಷನಲ್ )
ಮಾಡುವ ವಿಧಾನ : ಮೊದಲಿಗೆ ಮಿಕ್ಸಿ ಜಾರಿಗೆ ಹಾಲು ( ಕಾಯಿಸಿ ಸಂಪೂರ್ಣವಾಗಿ ಆರಿದ / ಫ್ರಿಡ್ಜ್ ನಲ್ಲಿಡಲಾಗಿದ್ದ ಹಾಲು ) ಹಾಕಿ.. ಒಂದು ಅಥವ ಎರೆಡು ಸ್ಕೂಪ್ ಸ್ಟ್ರಾಬೆರ್ರಿ ಐಸ್ ಕ್ರೀಮ್ ಸೇರಿಸಿಕೊಳ್ಳಿ, ಬೇಕಿದ್ದರೆ ಸಕ್ಕರೆ , ಸೇರಿಸಿ ಜೊತೆಗೆ 2 – 3 ಐಸ್ ಕ್ಯೂಬ್ ಗಳನ್ನ ಬೇಕಿದ್ದರೆ ಸೇರಿಸಿ. ಇದು ಸಹ ಆಪ್ಷನಲ್.. ಎಲ್ಲಾ ಹಾಕಿದ ನಂತರ ಜ್ಯೂಸ್ ಮೇಕರ್ ನಲ್ಲಿ ಗ್ರೈಂಡ್ ಮಾಡಿರಿ. ತೆಳು ಅಥವ ಸ್ಮೂತಿಯಂತೆ ನಿಮ್ಮಿಷ್ಟದ ಹದಕ್ಕೆ ತಯಾರಿಸಿ , ಕಡೆಯದಾಗಿ ಲೋಟಕ್ಕೆ ಹಾಕುವಾಗ ಬೇಕಿದ್ದಲ್ಲಿ ಲೋಟಕ್ಕೆ ಹರ್ಶೀಸ್ ಸಿರಪ್ ಹಾಕಿ , ನಂತರ ಐಸ್ ಕ್ಯೂಬ್ಸ್ ಅಥವ ವೆನಿಲ್ಲಾ ಐಸ್ ಕ್ರೀಮ್ / ಸ್ಟ್ರಾಬೆರ್ರಿ ಐಸ್ ಕ್ರೀಮ್ ಒಂದು ಸ್ಪೂನ್ ಸೇರಿಸಿಕೊಳ್ಳಿ.. ಬೇಸಿಗೆಗೆ ಇದು ಒಳ್ಳೆಯ ರಿಫ್ರೆಶಿಂಗ್ ಡ್ರಿಂಕ್.. ಮಕ್ಕಳಿಗೂ ತುಂಬಾ ಹಿಡಿಸುತ್ತದೆ..