Cooking : ಆಪಲ್ ಮಿಲ್ಕ್ ಶೇಕ್
(2 ಲೋಟಗಳಿಗೆ ಬೇಕಾಗುವ ಕ್ವಾಂಟಿಟಿ)
ಆಪಲ್ 1 ಅಥವ 2
ಸಕ್ಕರೆ ರುಚಿಗೆ ತಕ್ಕಷ್ಟು
ಹಾಲು ½ ಲೀಟರ್ ( 2 ಲೋಟ )
ಐಸ್ ಕ್ಯೂಬ್ ಗಳು
ಮಾಡುವ ವಿಧಾನ : ಮೊದಲಿಗೆ ಮಿಕ್ಸಿ ಜಾರಿಗೆ ಹಾಲು ( ಕಾಯಿಸಿ ಸಂಪೂರ್ಣವಾಗಿ ಆರಿದ / ಫ್ರಿಡ್ಜ್ ನಲ್ಲಿಡಲಾಗಿದ್ದ ಹಾಲು ) ಹಾಕಿ.. ಒಂದು ಅಥವ ಎರೆಡು ಆಪಲ್ ಮೀಡಿಯಮ್ ಸೈಜ್ ಗಳಲ್ಲಿ ಕಟ್ ಹಾಡಿ ಹಾಕಿ.. ನಿಮ್ಮ ರುಚಿಗೆ ಅನುಗುಣವಾಗಿ ಸಕ್ಕರೆ ಸೇರಿಸಿಕೊಳ್ಳಿ. ಜೊತೆಗೆ 2 – 3 ಐಸ್ ಕ್ಯೂಬ್ ಗಳನ್ನ ಬೇಕಿದ್ದರೆ ಸೇರಿಸಿ. ಇದು ಸಹ ಆಪ್ಷನಲ್..
ಎಲ್ಲಾ ಹಾಕಿದ ನಂತರ ಜ್ಯೂಸ್ ಮೇಕರ್ ನಲ್ಲಿ ಗ್ರೈಂಡ್ ಮಾಡಿರಿ. ತೆಳು ಅಥವ ಸ್ಮೂತಿಯಂತೆ ನಿಮ್ಮಿಷ್ಟದ ಹದಕ್ಕೆ ತಯಾರಿಸಿ , ಕಡೆಯದಾಗಿ ಲೋಟಕ್ಕೆ ಹಾಕುವಾಗ ಬೇಕಿದ್ದಲ್ಲಿ ಲೋಟಕ್ಕೆ ಹರ್ಶೀಸ್ ಸಿರಪ್ ಹಾಕಿ , ನಂತರ ಐಸ್ ಕ್ಯೂಬ್ಸ್ ಅಥವ ವೆನಿಲ್ಲಾ ಐಸ್ ಕ್ರೀಮ್ ಒಂದು ಸ್ಪೂನ್ ಸೇರಿಸಿಕೊಳ್ಳಿ.. ಬೇಸಿಗೆಗೆ ಇದು ಒಳ್ಳೆಯ ರಿಫ್ರೆಶಿಂಗ್ ಡ್ರಿಂಕ್.. ಮಕ್ಕಳಿಗೂ ತುಂಬಾ ಹಿಡಿಸುತ್ತದೆ..