ADVERTISEMENT
Wednesday, January 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

5 ಸುಲಭ ಹಾಗೂ ರುಚಿಕರ ಬಾತ್ ಗಳ ರೆಸಿಪಿಗಳು ನಿಮಗಾಗಿ..!

Namratha Rao by Namratha Rao
September 15, 2021
in Cooking, Newsbeat, ಅಡುಗೆ
Share on FacebookShare on TwitterShare on WhatsappShare on Telegram

5 ಸುಲಭ ಹಾಗೂ ರುಚಿಕರ ಬಾತ್ ಗಳ ರೆಸಿಪಿಗಳು ನಿಮಗಾಗಿ..!

1. ಮಸಾಲಾ ರೈಸ್ ಬಾತ್

Related posts

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವಸ್ತ್ರ ಸಂಹಿತೆ ಜಾರಿ: ಸಾಂಪ್ರದಾಯಿಕ ಉಡುಗೆ ಕಡ್ಡಾಯ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವಸ್ತ್ರ ಸಂಹಿತೆ ಜಾರಿ: ಸಾಂಪ್ರದಾಯಿಕ ಉಡುಗೆ ಕಡ್ಡಾಯ

January 21, 2026
ಫೈನಲ್‌ಗೆ ಎಂಟ್ರಿ ಪಡೆಯಲು RCBಗೆ ಇನ್ನೆಷ್ಟು ಗೆಲುವು ಬೇಕು?

ಫೈನಲ್‌ಗೆ ಎಂಟ್ರಿ ಪಡೆಯಲು RCBಗೆ ಇನ್ನೆಷ್ಟು ಗೆಲುವು ಬೇಕು?

January 21, 2026

ಬೇಕಾಗುವ ಸಾಮಗ್ರಿಗಳು

ಅನ್ನ – 3 ಕಪ್
ಗಿಂಜರ್-ಗಾರ್ಲಿಕ್ ಪೇಸ್ಟ್ – 2 ಚಮಚ
ಚಿಲ್ಲಿ ಪೇಸ್ಟ್ – 1 ಚಮಚ
ತೆಂಗಿನಕಾಯಿ ಹಾಲು – 1/2 ಕಪ್
ಬೀನ್ಸ್ – 10
ಬಟಾಣಿ – 1/4 ಕಪ್
ಕಾರ್ನ್ 1/4 ಕಪ್
ಆಲೂಗಡ್ಡೆ – 1
ಎಣ್ಣೆ – 2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
Saakshatv cooking recipe how to prepare masala rice bath
ಮಾಡುವ ವಿಧಾನ

ಮೊದಲಿಗೆ ಬೀನ್ಸ್, ಆಲೂಗಡ್ಡೆಗಳನ್ನು ಚಿಕ್ಕದಾಗಿ ‌ಕತ್ತರಿಸಿ ಬೇಯಿಸಿಕೊಳ್ಳಿ. ನಂತರ ಬಟಾಣಿ, ಕಾರ್ನ್ ಗಳನ್ನು ಬೇಯಿಸಿ ಇಟ್ಟುಕೊಳ್ಳಿ. ನಂತರ ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಗಿಂಜರ್-ಗಾರ್ಲಿಕ್ ಪೇಸ್ಟ್, ಚಿಲ್ಲಿ ಪೇಸ್ಟ್ ಸೇರಿಸಿ ಚೆನ್ನಾಗಿ ಬೆರೆಸಿ. 3 ನಿಮಿಷಗಳ ಕಾಲ ಕೈಯಾಡಿಸಿ. ನಂತರ ಇದಕ್ಕೆ ತೆಂಗಿನಕಾಯಿ ಹಾಲು, ಬಟಾಣಿ, ಕಾರ್ನ್, ಬೀನ್ಸ್, ಆಲೂಗಡ್ಡೆ, ಉಪ್ಪು ಸೇರಿಸಿ. ಚೆನ್ನಾಗಿ ಕುದಿಯಲು ಪ್ರಾರಂಭವಾದಾಗ ಅದಕ್ಕೆ ಬೇಯಿಸಿಟ್ಟುಕೊಂಡ ಅನ್ನವನ್ನು ಮಿಶ್ರ ಮಾಡಿ. 10 ನಿಮಿಷ
ಆವಿಯಲ್ಲಿ ಬೇಯಲು ಬಿಡಿ. ಈಗ ರುಚಿಕರವಾದ ಮಸಾಲಾ ರೈಸ್ ಬಾತ್ ಸವಿಯಲು ಸಿದ್ಧವಾಗಿದೆ.

 

2. ಹಸಿರು ವೆಜ್ ಪುಲಾವ್

ಬೇಕಾಗುವ ಸಾಮಾಗ್ರಿಗಳು

ಬಾಸ್ಮತಿ ಅಕ್ಕಿ – 2 ಕಪ್
ಕ್ಯಾರೆಟ್ – 3
ಬೀನ್ಸ್ 8
ಬಟಾಟೆ – 2
ಬಟಾಣಿ ನೆನೆಸಿದ್ದು – 1/2 ಕಪ್
ಸೋಯಾ ಬಾಲ್ – ಸ್ವಲ್ಪ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
‌ಜೀರಿಗೆ – 1/2 ಚಮಚ
ಕರಿಬೇವು – ಸ್ವಲ್ಪ
ಮೆಂತೆ ಪೌಡರ್ – 1/2 ಚಮಚ
ರುಚಿಗೆ ತಕ್ಕಷ್ಟು ‌ಉಪ್ಪು

ಮಸಾಲೆಗೆ

ಕೊತ್ತಂಬರಿ ಸೊಪ್ಪು – 1/2 ಕಟ್
ಪುದಿನ ಸೊಪ್ಪು – 1/4 ಕಟ್
ಹಸಿಮೆಣಸಿನ ಕಾಯಿ – 15
ಈರುಳ್ಳಿ – 2
ಟೊಮೆಟೊ – 1
ತೆಂಗಿನಕಾಯಿ ತುರಿ – 1/2 ಕಪ್
ಚಕ್ಕೆ – 2 ತುಂಡು
ಲವಂಗ – 2
ಏಲಕ್ಕಿ – 2
ಪಲಾವ್ ಎಲೆ – 1
ಮೊಗ್ಗು – 1
Saakshatv cooking recipe how to prepare green vegetables pulav
ಮಾಡುವ ವಿಧಾನ

ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಪುದಿನ ಸೊಪ್ಪು, ಹಸಿಮೆಣಸಿನಕಾಯಿ, ಈರುಳ್ಳಿ, ಟೊಮೆಟೊ, ತೆಂಗಿನ ಕಾಯಿ ತುರಿ, ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ಮೊಗ್ಗುಗಳನ್ನು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿ.

ಮೊದಲಿಗೆ ‌ಅಕ್ಕಿಯನ್ನು ಚೆನ್ನಾಗಿ ತೊಳೆದು ‌ ನೆನೆಸಿಡಿ. ಕ್ಯಾರೆಟ್, ಬೀನ್ಸ್, ಬಟಾಟೆಗಳನ್ನು ಚಿಕ್ಕದಾಗಿ ಕತ್ತರಿಸಿ‌ ಇಟ್ಟುಕೊಳ್ಳಿ. ನಂತರ ಕುಕ್ಕರ್ ಗೆ 2 ಚಮಚ ಎಣ್ಣೆ ಸೇರಿಸಿ ಬಿಸಿ ಮಾಡಿ. ಅದಕ್ಕೆ ‌ಜೀರಿಗೆ, ಕರಿಬೇವು, ಮೆಂತೆ ಪೌಡರ್ ಸೇರಿಸಿ‌. ಪರಿಮಳ ಬಂದ ಮೇಲೆ ಕತ್ತರಿಸಿದ ತರಕಾರಿ ಸೇರಿಸಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಇದಕ್ಕೆ ರುಬ್ಬಿದ ಮಸಾಲೆ ಸೇರಿಸಿ 5 ನಿಮಿಷ ಚೆನ್ನಾಗಿ ಬೆರೆಸಿ. ಈಗ ಅಕ್ಕಿಯನ್ನು ಹಾಕಿ, ಅಗತ್ಯವಿರುವಷ್ಟು ನೀರನ್ನು ಸೇರಿಸಿ. ಉಪ್ಪನ್ನು ಬೆರೆಸಿ. ಕುಕ್ಕರ್ ಮುಚ್ಚಳ ಮುಚ್ಚಿ 2 ವಿಸಲ್‌ ಕೂಗಿಸಿ. ರುಚಿಯಾದ ಬಿಸಿ ಬಿಸಿಯಾದ ಹಸಿರು ವೆಜ್ ಪಲಾವ್ ಸವಿಯಲು ಸಿದ್ಧವಾಗಿದೆ.

 

3. ತವಾ ಪಲಾವ್

ಬೇಕಾಗುವ ಸಾಮಗ್ರಿಗಳು

ಬಾಸುಮತಿ ಅಕ್ಕಿ – 2 ಕಪ್
ಬ್ಯಾಡಗಿ ಮೆಣಸು – 5 – 6
ಬೆಳ್ಳುಳ್ಳಿ – 7 – 8ಎಸಳು
ಜೀರಿಗೆ – 1 ಚಮಚ
ಗರಂ ಮಸಾಲಾ -1 ಚಮಚ
ಪಾವಭಾಜಿ ಮಸಾಲಾ -1 ಚಮಚ
ಈರುಳ್ಳಿ -2
ಟೊಮೇಟೊ -2
ಹಸಿಮೆಣಸಿನಕಾಯಿ -3
ಶುಂಠಿ -1 ಚಮಚ
ಬೀನ್ಸ್ – 5
ಕ್ಯಾರೆಟ್ -1
ದೊಣ್ಣೆ ಮೆಣಸು -1
ಆಲೂಗಡ್ಡೆ -1
ಎಣ್ಣೆ – 1 ಚಮಚ
ಬೆಣ್ಣೆ – 1 ಚಮಚ
Saakshatv cookingrecipe tava pulav

ಮಾಡುವ ವಿಧಾನ

ಮೊದಲಿಗೆ ಬಾಸುಮತಿ ಅಕ್ಕಿಯಿಂದ ಉದುರಾಗಿ ಅನ್ನ ಮಾಡಿಟ್ಟುಕೊಳ್ಳಿ. ನಂತರ ಬ್ಯಾಡಗಿ ಮೆಣಸನ್ನು ನೀರಲ್ಲಿ 10 ನಿಮಿಷಗಳ ಕಾಲ ನೆನೆಸಿಡಿ. ಬೆಳ್ಳುಳ್ಳಿ, ಜೀರಿಗೆ, ಪಾವಭಾಜಿ ಮಸಾಲಾ, ಗರಂ ಮಸಾಲಾ ಒಟ್ಟಿಗೆ ಸೇರಿಸಿ ಮಿಕ್ಸಿ ಗೆ ಹಾಕಿ ನಯವಾದ ಪೇಸ್ಟ್ ಮಾಡಿಟ್ಟುಕೊಳ್ಳಿ.
ನಂತರ ತವಾಗೆ ಒಂದು ಚಮಚ ಎಣ್ಣೆ ಒಂದು ಚಮಚ ಬೆಣ್ಣೆ ಸೇರಿಸಿ ಬಿಸಿ ಮಾಡಿ. ನಂತರ ಜೀರಿಗೆ,ಶುಂಠಿ, ಹಸಿಮೆಣಸು, ಎಲ್ಲ ತರಕಾರಿ ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ಅದಕ್ಕೆ ಬ್ಯಾಡಗಿ ಮೆಣಸಿನಕಾಯಿ ಪೇಸ್ಟ್, ಉಪ್ಪು, ಮಾಡಿಟ್ಟುಕೊಂಡ ಪಾವಭಾಜಿ ಮಸಾಲಾ ಸೇರಿಸಿ ಬೆರೆಸಿ. ನಂತರ ಅದಕ್ಕೆ ಅನ್ನವನ್ನು ಸೇರಿಸಿ ಕಲಸಿ. ರುಚಿಯಾದ ತವಾ ಪಲಾವ್ ಸವಿಯಲು ಸಿದ್ಧವಾಗಿದೆ.

 

4. ರೈಸ್ ಬಾತ್

ಅನ್ನ – 1 ಕಪ್
ಕಡಲೆಬೀಜ – 2 ಚಮಚ
ಗೋಡಂಬಿ – 6
ಸಾಸಿವೆ – 1 ಚಮಚ
ಜೀರಿಗೆ – 1 ಚಮಚ
ಕಡಲೆಬೇಳೆ -1 ಚಮಚ
ಕರಿಬೇವು – ಸ್ವಲ್ಪ
ಕೊತ್ತಂಬರಿಸೊಪ್ಪು – ಸ್ವಲ್ಪ
ಈರುಳ್ಳಿ-1
ಹಸಿಮೆಣಸು-2
ಕ್ಯಾರೆಟ್-1
ಬೀನ್ಸ್-3
ಕ್ಯಾಪ್ಸಿಕಂ -1
ನಿಂಬೆ ಹಣ್ಣಿನ ರಸ-2 ಚಮಚ
ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು


ಮೊದಲಿಗೆ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ‌ ಮಾಡಿ. ನಂತರ ಸಾಸಿವೆ ಸೇರಿಸಿ. ‌ಅದು ಸಿಡಿದ ಬಳಿಕ ಜೀರಿಗೆ, ಕಡಲೆಬೇಳೆ, ಕಡಲೆಬೀಜ, ಗೋಡಂಬಿ ಸೇರಿಸಿ 2 ನಿಮಿಷ ಹುರಿಯಿರಿ. ಈಗ ಅದಕ್ಕೆ ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸು, ಈರುಳ್ಳಿ ಹಾಕಿ ಹುರಿಯಿರಿ. ಈರುಳ್ಳಿ ಕೆಂಪಗಾದ ಬಳಿಕ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ ಸೇರಿಸಿ ಚೆನ್ನಾಗಿ ಕೈಯಾಡಿಸಿ. ನಂತರ ಉಪ್ಪನ್ನು ಸೇರಿಸಿ ಮಿಶ್ರ ಮಾಡಿ. ಬಳಿಕ ಇದಕ್ಕೆ ಅನ್ನವನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಈಗ ನಿಂಬೆ ಹಣ್ಣಿನ ರಸವನ್ನು ಸೇರಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಈಗ ರುಚಿಯಾದ ರೈಸ್ ಬಾತ್ ಸವಿಯಲು ಸಿದ್ಧವಾಗಿದೆ.

 

5. ಆಲೂಗಡ್ಡೆ ಪಲಾವ್

ಬೇಕಾಗುವ ಪದಾರ್ಥಗಳು

ಆಲೂಗಡ್ಡೆ – 1
ಅಕ್ಕಿ – 1 ಕಪ್
ಜೀರಿಗೆ – 1 ಚಮಚ
ತುಪ್ಪ – 2 ಚಮಚ
ಲವಂಗ – 2
ರುಚಿಗೆ ತಕ್ಕಷ್ಟು ಉಪ್ಪು
ಏಲಕ್ಕಿ – 2
ಪಲಾವ್ ಎಲೆ – 2
ಮೆಣಸಿನ ಪುಡಿ – 1/2 ಚಮಚ
ನೀರು
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ

ಮೊದಲಿಗೆ ಅಕ್ಕಿಯನ್ನು ತೊಳೆದು ನೀರನ್ನು ಸೋಸಿ ಇಡಿ. ನಂತರ ಆಲೂಗಡ್ಡೆಗಳನ್ನು ‌ಚಿಕ್ಕದಾಗಿ ಕತ್ತರಿಸಿ.
ಬಳಿಕ ಒಂದು ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ. ನಂತರ ಅದಕ್ಕೆ ಜೀರಿಗೆ, ಏಲಕ್ಕಿ, ದಾಲ್ಚಿನಿ, ಲವಂಗ ಹಾಕಿ 1 ನಿಮಿಷ ಹುರಿಯಿರಿ.ನಂತರ ಇದಕ್ಕೆ ಆಲೂಗಡ್ಡೆ ಹಾಗೂ ಅಕ್ಕಿಯನ್ನು ಸೇರಿಸಿ ಹುರಿಯಿರಿ.
ಬಳಿಕ ಇದಕ್ಕೆ ಮೆಣಸಿನ ಪುಡಿ, ಉಪ್ಪು ನೀರನ್ನು ಸೇರಿಸಿ 15 ನಿಮಿಷಗಳ ಕಾಲ ಬೇಯಿಸಿ. ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಬಿಸಿಯಾದ ಆಲೂಗಡ್ಡೆ ಪಲಾವ್ ಸವಿಯಲು ಸಿದ್ಧವಾಗಿದೆ.

Tags: #saakshatvcookingfood recipies
ShareTweetSendShare
Join us on:

Related Posts

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವಸ್ತ್ರ ಸಂಹಿತೆ ಜಾರಿ: ಸಾಂಪ್ರದಾಯಿಕ ಉಡುಗೆ ಕಡ್ಡಾಯ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವಸ್ತ್ರ ಸಂಹಿತೆ ಜಾರಿ: ಸಾಂಪ್ರದಾಯಿಕ ಉಡುಗೆ ಕಡ್ಡಾಯ

by Shwetha
January 21, 2026
0

ಉಡುಪಿಯ ಪ್ರಸಿದ್ಧ ಶ್ರೀ ಕೃಷ್ಣ ಮಠಕ್ಕೆ ಆಗಮಿಸುವ ಭಕ್ತರಿಗೆ ಇನ್ನು ಮುಂದೆ ಸಾಂಪ್ರದಾಯಿಕ ವಸ್ತ್ರ ಧಾರಣೆ ಕಡ್ಡಾಯವಾಗಲಿದೆ. ಧಾರ್ಮಿಕ ಪರಂಪರೆ, ಸಂಸ್ಕೃತಿ ಹಾಗೂ ಮಠದ ಗೌರವವನ್ನು ಕಾಪಾಡುವ...

ಫೈನಲ್‌ಗೆ ಎಂಟ್ರಿ ಪಡೆಯಲು RCBಗೆ ಇನ್ನೆಷ್ಟು ಗೆಲುವು ಬೇಕು?

ಫೈನಲ್‌ಗೆ ಎಂಟ್ರಿ ಪಡೆಯಲು RCBಗೆ ಇನ್ನೆಷ್ಟು ಗೆಲುವು ಬೇಕು?

by Shwetha
January 21, 2026
0

2026ರ ಮಹಿಳಾ ಪ್ರೀಮಿಯರ್ ಲೀಗ್‌ (WPL)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಗೆಲುವಿನ ಸರಣಿ ಮುಂದುವರೆದಿದೆ. ಸ್ಮೃತಿ ಮಂಧಾನ ಅವರ ನಾಯಕತ್ವದಲ್ಲಿ ಆಡುತ್ತಿರುವ RCB ಈವರೆಗೆ...

ಶಬರಿಮಲೆ ತೀರ್ಥಯಾತ್ರೆ  ಸಂಪನ್ನ – ಭಕ್ತಿಭಾವದಿಂದ ಅಂತ್ಯಗೊಂಡ ಅಯ್ಯಪ್ಪ ಋತು

ಶಬರಿಮಲೆ ತೀರ್ಥಯಾತ್ರೆ ಸಂಪನ್ನ – ಭಕ್ತಿಭಾವದಿಂದ ಅಂತ್ಯಗೊಂಡ ಅಯ್ಯಪ್ಪ ಋತು

by Shwetha
January 21, 2026
0

ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಈ ವರ್ಷದ ವಾರ್ಷಿಕ ತೀರ್ಥಯಾತ್ರೆಯ ಋತು ನಿನ್ನೆ ಭಕ್ತಿಭಾವಪೂರ್ಣವಾಗಿ ಅಂತ್ಯಗೊಂಡಿದೆ. ಸಾವಿರಾರು ಭಕ್ತರ ಸಾಕ್ಷಿಯಾಗಿ, ಸಾಂಪ್ರದಾಯಿಕ...

ರಾಜ್ಯ ರಾಜಕೀಯದ ಬಗ್ಗೆ ನಮ್ಮ ಮನೆಯಲ್ಲೇ 2 ಗಂಟೆ ಚರ್ಚೆ ನಡೆದಿದೆ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ

ರಾಜ್ಯ ರಾಜಕೀಯದ ಬಗ್ಗೆ ನಮ್ಮ ಮನೆಯಲ್ಲೇ 2 ಗಂಟೆ ಚರ್ಚೆ ನಡೆದಿದೆ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ

by Shwetha
January 21, 2026
0

ಬೆಂಗಳೂರು: ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುವಂತಹ ಹೇಳಿಕೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮತ್ತು ದಲಿತ...

ಅಮಾನತು ಮಾತ್ರವಲ್ಲ ಡಿಸ್ ಮಿಸ್ ಕೂಡ ಮಾಡ್ತೀವಿ ರಾಮಚಂದ್ರ ರಾವ್‌ಗೆ ನಡುಕ ಹುಟ್ಟಿಸಿದ ಗೃಹ ಸಚಿವರು‌

ಅಮಾನತು ಮಾತ್ರವಲ್ಲ ಡಿಸ್ ಮಿಸ್ ಕೂಡ ಮಾಡ್ತೀವಿ ರಾಮಚಂದ್ರ ರಾವ್‌ಗೆ ನಡುಕ ಹುಟ್ಟಿಸಿದ ಗೃಹ ಸಚಿವರು‌

by Shwetha
January 21, 2026
0

ಬೆಂಗಳೂರು: ಪೊಲೀಸ್ ಇಲಾಖೆಯ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವಂತಹ ಗಂಭೀರ ಆರೋಪಕ್ಕೆ ಗುರಿಯಾಗಿರುವ ಸಿಐಡಿ ಡಿಜಿಪಿ ರಾಮಚಂದ್ರ ರಾವ್ ಅವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram