ಟೇಸ್ಟಿ / ಈಸಿ ಅಡುಗೆ ರೆಸಿಪಿಗಳು ನಿಮಗಾಗಿ..!

1 min read

ಹಲಸಿನ ಹಣ್ಣಿನ ಪೂರಿ

ಬೇಕಾಗುವ ಸಾಮಗ್ರಿಗಳು

ಹಲಸಿನ ಹಣ್ಣಿನ ತೊಳೆ -1 ಕಪ್
ಗೋಧಿ ಹುಡಿ – 2 ಕಪ್
ಓಮದ ಕಾಳು – 1/2 ಟೀ ಚಮಚ
ರುಚಿಗೆ ತಕ್ಕಷ್ಟು ಉಪ್ಪು

Saakshatv cooking recipe how to prepare jackfruit poori

ಮಾಡುವ ವಿಧಾನ

ಮೊದಲಿಗೆ ಹಲಸಿನ ತೊಳೆಗಳನ್ನು ಮಿಕ್ಸಿ ಜಾರಿಗೆ ‌ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ನುಣ್ಣಗೆ ರುಬ್ಬಿದ ಹಲಸಿನ ತೊಳೆ, ಓಮ, ಗೋಧಿ ಹುಡಿ, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಪೂರಿ ಹಿಟ್ಟಿನ ಹದಕ್ಕೆ ಮಿಶ್ರಣವನ್ನು ಕಲಸಿಕೊಳ್ಳಿ. ‌ ನಂತರ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿ.
ಬಳಿಕ ಪ್ಲಾಸ್ಟಿಕ್ ಗೆ ಸ್ವಲ್ಪ ಎಣ್ಣೆ ಸವರಿ ಅದರ ಮೇಲೆ ಉಂಡೆಗಳನ್ನು ಇಟ್ಟು ಪೂರಿಗಳನ್ನು ಲಟ್ಟಿಸಿಕೊಳ್ಳಿ.
ಈಗ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಪೂರಿಗಳನ್ನು ಕಾಯಿಸಿ. ಎರಡೂ ಬದಿಯೂ ಕೆಂಪಗಾಗುವವರೆಗೆ ಹುರಿದು ತೆಗೆಯಿರಿ. ಬಿಸಿ ಬಿಸಿಯಾದ ಹಲಸಿನ ಹಣ್ಣಿನ ಪೂರಿಯನ್ನು ಚಟ್ನಿಯೊಂದಿಗೆ ಸವಿಯಿರಿ.

ಆರೋಗ್ಯಕರ ಕಾರ್ನ್ ಸೂಪ್

ಬೇಕಾಗುವ ಸಾಮಗ್ರಿಗಳು

ರೆಗ್ಯುಲರ್ ಕಾರ್ನ್ 1
ಮಿಕ್ಸಡ್ ತರಕಾರಿಗಳು 1 ಬೌಲ್
ಶುಂಠಿ ಬೆಳ್ಳುಳ್ಳಿ ಹಸಿಮೆಣಸಿನಕಾಯಿ ಪೇಸ್ಟ್ 1 ಟೀಸ್ಪೂನ್
ಬೆಣ್ಣೆ
ಉಪ್ಪು ರುಚಿಗೆ ತಕ್ಕಷ್ಟು
ಸಕ್ಕರೆ ಅಗತ್ಯವಿರುವಷ್ಟು
ಮೆಣಸಿನ ಹುಡಿ ಅಗತ್ಯವಿರುವಷ್ಟು
ನಿಂಬೆ ಅಗತ್ಯವಿರುವಷ್ಟು
Saakshatv cooking recipe how to prepare corn soup

ಮಾಡುವ ವಿಧಾನ
ಜೋಳವನ್ನು ಬೇಯಿಸಿ. ನಂತರ ಅರ್ಧದಷ್ಟು‌ ಜೋಳವನ್ನು ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ಬಳಿಕ ತರಕಾರಿಗಳನ್ನು ಬೇಯಿಸಿ. ನಂತರ ಒಂದು ಕಡಾಯಿಯನ್ನು ‌ಬಿಸಿ ಮಾಡಿ. ಅದಕ್ಕೆ ಬೆಣ್ಣೆಯನ್ನು ‌ಸೇರಿಸಿ. ಬಳಿಕ ಶುಂಠಿ ಬೆಳ್ಳುಳ್ಳಿ ಹಸಿಮೆಣಸಿನಕಾಯಿ ಪೇಸ್ಟ್ ಸೇರಿಸಿ ಫ್ರೈ ಮಾಡಿ. ಅದಕ್ಕೆ ಬೇಯಿಸಿದ ತರಕಾರಿಗಳನ್ನು ಸೇರಿಸಿ. ಆ ಬಳಿಕ ಬೇಯಿಸಿದ ಜೋಳ ಮತ್ತು ರುಬ್ಬಿದ ಜೋಳವನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಸಕ್ಕರೆ ಮೆಣಸು ಸೇರಿಸಿ ಕುದಿಸಿ. ಕೊನೆಗೆ ‌ನಿಂಬೆರಸವನ್ನು ಹಿಂಡಿ.‌
ಆರೋಗ್ಯಕರವಾದ ಕಾರ್ನ್ ಸೂಪ್ ಸವಿಯಲು ಸಿದ್ಧ.

ಗೋಧಿ ಬರ್ಫಿ

ಬೇಕಾಗುವ ಸಾಮಗ್ರಿಗಳು

1 ಕಪ್ ಗೋಧಿ
1/2 ಕಪ್ ಬೆಲ್ಲದ ಪುಡಿ
1/2 ಕಪ್ ತುಪ್ಪ
ಒಂದು ಚಿಟಿಕೆ ಏಲಕ್ಕಿ ಪುಡಿ

ಮಾಡುವ ವಿಧಾನ

 Saakshatv cooking recipe wheat barfi

ದೊಡ್ಡ ಕಡಾಯಿಯಲ್ಲಿ ತುಪ್ಪವನ್ನು ಬಿಸಿ ಮಾಡಿ. ನಂತರ ಗೋಧಿ ಹಿಟ್ಟನ್ನು ಸೇರಿಸಿ. ಗೋಧಿ ಹಿಟ್ಟು ಪರಿಮಳ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ. ಗೋಧಿ ಹಿಟ್ಟು ಹೊಂಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ನಂತರ ಕಡಾಯಿಯನ್ನು ಕೆಳಗಿಳಿಸಿ ಸ್ವಲ್ಪ ತಣ್ಣಗಾಗಲು ಬಿಡಿ. ಹಿಟ್ಟು ಇನ್ನೂ ಬೆಚ್ಚಗಿರುವಾಗ ಏಲಕ್ಕಿ ಪುಡಿ ಮತ್ತು ಬೆಲ್ಲ ಸೇರಿಸಿ. ಬೆಲ್ಲ ಕರಗಿ ಚೆನ್ನಾಗಿ ಬೆರೆಯುವವರೆಗೆ ಮಿಶ್ರಣ ಮಾಡಿ. ಬೆಲ್ಲ ಕರಗಲು ಗೋಧಿ ಹಿಟ್ಟಿನ ಬಿಸಿ ಸಾಕಾಗುತ್ತದೆ. ಅದು ತಣ್ಣಗಾಗುತ್ತಿದ್ದಂತೆ ಅತಿಯಾಗಿ ಮಿಶ್ರಣ ಮಾಡಬೇಡಿ. ಸಣ್ಣ ತಟ್ಟೆಗೆ ತುಪ್ಪವನ್ನು ಸವರಿ ಮತ್ತು ಮಿಶ್ರಣವನ್ನು ಅದಕ್ಕೆ ವರ್ಗಾಯಿಸಿ. ಅದನ್ನು ಹಾಗೆಯೇ ಬಿಡಿ.
15 ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಟ್ಟು ನಂತರ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ. ನೀವು ಅದನ್ನು ಒಂದು ವಾರದವರೆಗೆ ಗಾಳಿಯಾಡದ ಬಿಗಿಯಾದ ಪಾತ್ರೆಯಲ್ಲಿ ಸಂಗ್ರಹಿಸಬಹುದು.

ಕಡ್ಲೆಬೇಳೆ ಮಸಾಲೆ ವಡೆ

ಬೇಕಾಗುವ ಸಾಮಗ್ರಿಗಳು

ಕಡ್ಲೆಬೇಳೆ – 1 ಕಪ್
ಅಕ್ಕಿ ಹಿಟ್ಟು – 1 ಚಮಚ
ಶುಂಠಿ – 1 ಇಂಚು
ಬೆಳ್ಳುಳ್ಳಿ – 8 ರಿಂದ 10 ಎಸಳು
ಕೆಂಪು ಮೆಣಸು – 8
ಹಸಿಮೆಣಸಿನಕಾಯಿ – 2
ಕೊತ್ತಂಬರಿ ಸೊಪ್ಪು – ಸ್ವಲ್ಪ
ಅರಿಶಿನ – 1/2 ಚಮಚ
ಈರುಳ್ಳಿ – 2
ರುಚಿಗೆ ತಕ್ಕಷ್ಟು ‌ಉಪ್ಪು
Saakshatv cooking recipe masala vade
ಮಾಡುವ ವಿಧಾನ

ಕಡ್ಲೆಬೇಳೆಯನ್ನು ಚೆನ್ನಾಗಿ ತೊಳೆದು 3 – 4 ಗಂಟೆಗಳ ಕಾಲ ನೀರಿನಲ್ಲಿ ‌ನೆನೆಸಿಡಿ.
ನಂತರ ಮಿಕ್ಸಿ ಜಾರಿನಲ್ಲಿ ಶುಂಠಿ, ಬೆಳ್ಳುಳ್ಳಿ, ಕೆಂಪು ಮೆಣಸು, ಹಸಿಮೆಣಸಿನಕಾಯಿ, ನೆನೆಸಿರುವ ಕಡ್ಲೆಬೇಳೆಯನ್ನು ಸೇರಿಸಿ ತರಿತರಿಯಾಗಿ ರುಬ್ಬಿ.‌
ನಂತರ ಈ ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಾಯಿಸಿ.‌ ಇದಕ್ಕೆ ಚಿಕ್ಕದಾಗಿ ಹೆಚ್ಚಿರುವ ‌ಈರುಳ್ಳಿ, ಕೊತ್ತಂಬರಿ ಸೊಪ್ಪು, ಅರಿಶಿನ, ಉಪ್ಪು ‌ ಎಲ್ಲವನ್ನೂ ‌ಸೇರಿಸಿ ಚೆನ್ನಾಗಿ ಕಲಸಿ. ನಂತರ ಚಿಕ್ಕ ಚಿಕ್ಕ ಉಂಡೆಗಳನ್ನು ‌ಮಾಡಿ‌ ಕೈಯಲ್ಲಿ ತಟ್ಟಿ. ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ‌ಮಾಡಿ ಅದರಲ್ಲಿ ಮಸಾಲ ವಡೆಯನ್ನು ಚೆನ್ನಾಗಿ ಹುರಿದು ತೆಗೆಯಿರಿ.
ಈಗ ರುಚಿಯಾದ ಮಸಾಲ ವಡೆ ಸವಿಯಲು ಸಿದ್ಧವಾಗಿದೆ.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd