Cooking : ತುಂಬಾ ಸಿಂಪಲ್ ಆಗಿ ಮಾಡಿ ಟೇಸ್ಟಿ – ಘೀ ರೈಸ್ ..!!
Ghee Rice Recipie
ಬೇಕಾಗಿರುವ ಪದಾರ್ಥಗಳು
ನಿಮ್ಮಿಷ್ಟದ ಕ್ವಾಲಿಟಿಯ ಅಕ್ಕಿ – 2 ಕಪ್
ತುಪ್ಪ – ಒಗ್ಗರಣೆಗೆ – 7 -8 ಟೇಬಲ್ ಸ್ಪೂನ್
ಹಸಿ ಬಟಾಣಿ , ಪಲಾವ್ ಎಲೆ , 2 ಏಲಕ್ಕೆ ( ಬೇಕಿದ್ದರೆ ಚಕ್ಕೆ ಲವಂಗ – 1/1 ಅಷ್ಟೇ )
ಜೀರಿಗೆ , ಕರಿಬೇವು..
ಉಪ್ಪು
ಮಾಡುವ ವಿಧಾನ :
ಕುಕ್ಕರ್ ಗೆ ಮೊದಲಿಗೆ ತುಪ್ಪು ಹಾಪಕಿ , ಕಾಯ್ದ ನಂತರ ಜೀರಿಗೆ ಹಾಕಿ , ನಂತರ ಕರಿಬೇವು , ಪಲಾವ್ ಎಲೆ , ( ಚಕ್ಕೆ ಲವಂಗ ಬೇಕಿದ್ರೆ ) , ಬಟಾಣಿ ಹಾಕಿ ಚನ್ನಾಗಿ ಬಾಡಿಸಿಕಕೊಳ್ಳಿ.. ಬೇಕಿದ್ದಲ್ಲಿ ಗೋಡಂಬಿ , ಕಡಲೇಬೀಜ , ಬೇಕಿದ್ದರೂ ಸೇರಿಸಿಕೊಳ್ಳಿ ಒಗ್ಗರಣೆಗೆ ಆದ್ರೆ ಇದು ಆಪ್ಷನಲ್ ,, ಬೇಕಿದ್ದರೆ ಒಗ್ಗರಣೆಗೆ ಈರುಳ್ಳಿಯನ್ನೂ ಸೇರಿಸಿಕೊಳ್ಳಬಹುದು..
ನಂತರ ಅಕ್ಕಿಯನ್ನ ತೊಳೆದು ಹಾಕಿ ಅದಕ್ಕೆ ನೀರು ಉಪ್ಪು ಹಾಕಿ ಚನ್ನಾಗಿ ಕಲಸಿ ವಿಷಲ್ ಬರಿಸಿ , ಸ್ಟೀಮ್ ಇಳಿದ ನಂತರ ಕುಕ್ಕರ್ ಮುಚ್ಚಳ ತೆಗೆದು ಚನ್ನಾಗಿ ಕಲಸಿ , ಘೀ ರೈಸ್ ಸವವಿಯಲು ಸಿದ್ಧ.. ಇದಕ್ಕೆ ನಿಮ್ಮಿಷ್ಟದ ಕುರ್ಮಾ ತಯಾರು ಮಾಡಿಕೊಳ್ಳಬಹುದು.. ಚಟ್ನಿಯ ಜೊತೆಗೂ ಸವಿಯಬಹುದು.. ಇಲ್ಲದೇ ಇದ್ದರೆ , ತುಪ್ಪದ ಜೊತೆಯೂ ಸೇವಿಸಬಹುದು..