ಸೌತೇಕಾಯಿಯ ಜ್ಯೂಸ್ ( Cucumber Juice )
ಸೌತೆಕಾಯಿ – 1
ಪುದಿನಾ ಎಲೆಗಳು – ಸ್ವಲ್ಪ
ನೀರು – 1 ಕಪ್
ನಿಂಬೆ – 1
ಉಪ್ಪು ಚಿಟಿಕೆ
ಸೌತೆಕಾಯಿಯ ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿ ಇಟ್ಟುಕೊಳ್ಳಿ. ನಂತರ ಇದನ್ನು ಮಿಕ್ಸಿ ಜಾರಿನಲ್ಲಿ ಹಾಕಿ. ಇದಕ್ಕೆ ಸಣ್ಣದಾಗಿ ಕತ್ತರಿಸಿದ ಪುದೀನ ಎಲೆಗಳ ಚೂರು, ಉಪ್ಪು, ನಿಂಬೆ ರಸ ಮತ್ತು ನೀರು ಸೇರಿಸಿ 5ನಿಮಿಷ ಚೆನ್ನಾಗಿ ಗ್ರೈಂಡ್ ಮಾಡಿ.
ಬಳಿಕ ಈ ಮಿಶ್ರಣವನ್ನು ಸೋಸಿ, ಬೇಕಿದ್ದರೆ ಐಸ್ ಕ್ಯೂಬ್ ಸೇರಿಸಿ ಕುಡಿಯಿರಿ. ಸೌತೆಕಾಯಿ ಜ್ಯೂಸ್, ಬಿಸಿಲಿನ ದಾಹ ತಣಿಸುವ ಜೊತೆಗೆ ದೇಹಕ್ಕೆ ಕೂಡ ತುಂಬಾ ತಂಪು ಮತ್ತು ಆರೋಗ್ಯಕರ.
ಕ್ಯಾರೋಟ್ ಜ್ಯೂಸ್..!! ( Carrot Juice )
ಬೇಕಾಗಿರುವ ಸಾಮಗ್ರಿಗಳು :
ಕ್ಯಾರೆಟ್ – 4-5
ಶುಂಠಿ – 1 ಇಂಚು
ನಿಂಬೆ ಹಣ್ಣು – 1
ಪೆಪ್ಪರ್ ಪೌಡರ್ ಸ್ವಲ್ಪ,
ಪುದೀನ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ :
ಮೊದಲು ಕ್ಯಾರೆಟ್ ಗಳನ್ನು ಚೆನ್ನಾಗಿ ತೊಳೆದುಕೊಂಡು, ಅದರ ಸಿಪ್ಪೆಯನ್ನು ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಅದನ್ನು ಜ್ಯೂಸರ್ ನಲ್ಲಿ ಹಾಕಿ, ನೀರು, ಶುಂಠಿ, ನಿಂಬೆ ಹಣ್ಣಿನ ರಸ ಮತ್ತು ಪುದೀನಾ ಸೇರಿಸಿ ಚೆನ್ನಾಗಿ ರುಬ್ಬಿ.
ನಂತರ ಒಂದು ಪಾತ್ರೆಗೆ ರುಬ್ಬಿದ ಮಿಶ್ರಣವನ್ನು ಸೋಸಿ. ಇದಕ್ಕೆ ಪೆಪ್ಪರ್ ಪೌಡರ್, ಉಪ್ಪು ಅನ್ನು ಹಾಕಿ ಚೆನ್ನಾಗಿ ಕಲಸಿ. ಈಗ ಕುಡಿಯಲು ಆರೋಗ್ಯಕರವಾದ ಕ್ಯಾರೆಟ್ ಜ್ಯೂಸ್ ರೆಡಿ.
ಬಾಳೆ ಹಣ್ಣಿನ ಮಿಲ್ಕ್ ಶೇಕ್ ( Bananna Milk shake )
ಮೊದಲನೇ ವಿಧಾನಕ್ಕೆ ಬೇಕಾದ ಪದಾರ್ಥಗಳು
ಪಚ್ಚು ಬಾಳೆ ಹಣ್ಣು -2
ಗಟ್ಟಿ ಹಾಲು -2 ಕಪ್
ಸಕ್ಕರೆ – 2 ಟೇಬಲ್ ಸ್ಪೂನ್ ( ನಿಮ್ಮ ರುಚಿಗೆ ತಕ್ಕಷ್ಟು)
ಮಾಡುವ ವಿದಾನ – ಮೊದಲಿಗೆ ಒಂದು ಜ್ಯೂಸ್ ಮೇಕರ್ ಗೆ 2 ಪಚ್ಚು ಬಾಳೆಹಣ್ಣುಗಳನ್ನ ರಫ್ ಆಗಿ ಕಟ್ ಮಾಡಿ ಹಾಕಿ. ಅದಕ್ಕೆ ಹಾಲು ಹಾಕಿ. ಬಳಿಕ ಸಕ್ಕರೆ ಹಾಕಿ ನಂತರ ಜಾರಿನ ಮುಚ್ಚಳ ಮುಚ್ಚಿ ಮೊದಲಿಗೆ 1 ರೌಂಡ್ ಹಾಗೇ ರಫ್ ಆಗಿ ಗ್ರೈಂಡ್ ಮಾಡಿ. ನಂತರ ಮತ್ತೆ ಒಂದು 10 ಸೆಕೆಂಡ್ಸ್ ರುಬ್ಬಿ. ಬಾಳೆ ಹಣ್ಣು ಬೇಗ ನುಣ್ಣಗಾಗುವುದ್ರಿಂದ ಅದು ಬೇಗ ಲೋಳೆಯಂತಾಗುವ ಚಾನ್ಸ್ ಸ್ ತುಂಬಾನೆ ಇರುತ್ತೆ ಹೀಗಾಗಿ ನೋಡಿಕೊಂಡು ರುಬ್ಬಬೇಕು. ಇದಾದ ಬಳಿಕ ಹಾಲು ತೆಗೆದುಕೊಂಡಿದ್ದ ಕಪ್ ನಲ್ಲಿ 2 ಕಪ್ ನೀರು ಹಾಕಿ ಮತ್ತೊಮ್ಮೆ 10 ಸೆಕೆಂಡ್ ಗ್ರೈಂಡ್ ಮಾಡಿ ಟೆಕ್ಚರ್ ಸ್ಮೂತಿ ರೀತಿಯಲ್ಲಿ ಇರುತ್ತೆ. ಈಗ ಒಂದು ಗ್ಲಾಸ್ ಗೆ ಹಾಕಿ ನಿಮಗೆ ಬೇಕಿದ್ರೆ, ಅದರ ಜೊತೆಗೆ ಐಸ್ ಕ್ಯೂಬ್ಸ್ ಹಾಕಿ ಕುಡಿಯಬಹುದು.
2ನೇಯ ವಿಧಾನ
ಪಚ್ಚು ಬಾಳೆ ಹಣ್ಣು -2
ಗಟ್ಟಿ ಹಾಲು -2 ಕಪ್
ಸಕ್ಕರೆ – 2 ಟೇಬಲ್ ಸ್ಪೂನ್
ಏಲಕ್ಕಿ – 2-3 ಏಲಕ್ಕಿ
ಕಾಮ ಕಸ್ತೂರಿ ಬೀಜ / ತಂಪಿನ ಬೀಜ
ಪೆಪ್ಪರ್ ಪೌಡರ್.
ಒಂದು ಜ್ಯೂಸ್ ಮೇಕರ್ ಗೆ 2 ಪಚ್ಚು ಬಾಳೆಹಣ್ಣುಗಳನ್ನ ರಫ್ ಆಗಿ ಕಟ್ ಮಾಡಿ ಹಾಕಿ. ಅದಕ್ಕೆ ಹಾಲು ಹಾಕಿ. ಬಳಿಕ ಸಕ್ಕರೆ ಹಾಕಿ ನಂತರ ಜಾರಿನ ಮುಚ್ಚಳ ಮುಚ್ಚಿ ಮೊದಲಿಗೆ ಒಂದು ಸುತ್ತು ರುಬ್ಬಿ. ನಂತರ ಏಲಕ್ಕೆ ಚಚ್ಚಿ ಪುಡಿ ಹಾಕಿ, ನಂತರ ಹಾಲು ಹಾಕಿದ ಕಪ್ ನಲ್ಲಿ 2.30 ಇಂದ 3 ಕಪ್ ನೀರನ್ನ ಹಾಕಿ ಗ್ರೈಂಡ್ ಮಾಡಿ 10 -15 ಸೆಕೆಂಡ್ ಗಳ ವರೆಗೆ. ಬಳಿಕ ನೆನೆಯಿಟ್ಟ ಕಾಮಕಸ್ತೂರಿ ಬೀಜವನ್ನ 1 ಚಿಕ್ಕ ಚಮಚ ಒಂದು ಗ್ಲಾಸ್ ಗೆ ಹಾಗಿ ಅದಕ್ಕೆ ಜ್ಯೂಸ್ ನ ಮಿಶ್ರಣ ಹಾಕಿ. ಐಸ್ ಕ್ಯೂಬ್ಸ್ ಇಷ್ಟ ಇದ್ರೆ ಹಾಕಿಕೊಳ್ಳಬಹುದು. ನಂತರ ಇದಕ್ಕೆ ಪೆಪ್ಪರ್ ಪೌಡರ್ ಹಾಕಿ ಸವೆಯಿರಿ. ಇದೇನಪ್ಪ ವಿಚಿತ್ರ ಪೆಪ್ಪರ್ ಪೌಡರ್ ಆ ಅಂತ ಯೋಚನೆ ಮಾಡ್ಬೇಡಿ ಒಂದ್ ಸಲ ಟ್ರೈ ಮಾಡಿ ನೀವೇ ಡೆಫಿನೇಟ್ಲಿ ಇಷ್ಟ ಪಡ್ತೀರ.
3ನೇಯ ವಿಧಾನ
ಪಚ್ಚು ಬಾಳೆ ಹಣ್ಣು -2
ಗಟ್ಟಿ ಹಾಲು -2 ಕಪ್
ಸಕ್ಕರೆ – 2 ಟೇಬಲ್ ಸ್ಪೂನ್
ವೆನ್ನಿಲ್ಲಾ ಎಸೆನ್ಸ್
ಮೊದಲೆರೆಡು ವಿದಾನಗಳಂತೆಯೇ ಬಾಳೆಹಣು, ಸಕ್ಕರೆ, ಹಾಲು ಹಾಕಿ ಒಂದು ರೌಂಡ್ ಗ್ರೈಂಡ್ ಮಾಡಿ. ಬಳಿಕ ಇದಕ್ಕೆ 2 ಕಪ್ ಗಳಷ್ಟು ನೀರನ್ನ ಹಾಕಿ 2 ಡ್ರಾಪ್ ವೆನಿಲ್ಲಾ ಎಸೆನ್ಸ್ ಹಾಕಿ. ಈ ಹೌಂತದಲ್ಲಿ ಐಸ್ ಕ್ಯೂಬ್ಸ್ ನ ಬೇಕಿದ್ರೆ ಇದರ ಜೊತೆಗೆ ಹಾಕಿ ಗ್ರೈಂಡ್ ಮಾಡಬಹುದು. ಇದು ಆಪ್ಶನಲ್. ಗ್ರೈಂಡ್ ಮಾಡಿದ ನಂತರ ಬಾಳೆಹಣ್ಣಿನ ಜ್ಯೂಸ್ ಅನ್ನ ಗ್ಲಾಸ್ ಗೆ ಹಾಕಿ ಸವಿಯಿರಿ ಎಂಜಾಯ್ ಮಾಡಿ.
ತಪ್ಪದೇ ಈ 3 ವಿದಾನದಲ್ಲಿ ಬಾಳೆಹಣ್ಣಿನ ಜ್ಯೂಸ್ ಮನೆಯಲ್ಲೇ ಟ್ರೈ ಮಾಡಿ. ನಿಮಗೆ 100 % ಇಷ್ಟ ಆಗುತ್ತೆ.
ಕಲ್ಲಂಗಡಿ ಜ್ಯೂಸ್ ( Water melon Juice )
ತಯಾರಿಸುವ ವಿಧಾನ
ಮೊದಲಿಗೆ, ಕಲ್ಲಂಗಡಿ ಹಣ್ಣನ್ನು ತೊಳೆದು ತುಂಡುಗಳಾಗಿ ಕತ್ತರಿಸಿ.
ಕತ್ತರಿಸಿದ ನಂತರ, ಕಲ್ಲಂಗಡಿ ಹಣ್ಣಿನ ಹಸಿರು ಸಿಪ್ಪೆಯನ್ನು ತೆಗೆದು ಬೇರ್ಪಡಿಸಿ.
ಈಗ ಉಳಿದ ಕೆಂಪು ಬಣ್ಣವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಈಗ ಎಲ್ಲಾ ಕಲ್ಲಂಗಡಿ ಹಣ್ಣುಗಳ ಸಣ್ಣ ತುಂಡುಗಳನ್ನು ಮಿಕ್ಸರ್ ನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
ಈಗ ಅದನ್ನು ಸೋಸಿ. ನಂತರ ರಸದ ರುಚಿಯನ್ನು ಹೆಚ್ಚಿಸಲು, ಅದಕ್ಕೆ ಒಂದು ನಿಂಬೆಯ ರಸವನ್ನು ಹಿಸುಕಿ. ಬಳಿಕ ಐಸ್ ಕ್ಯೂಬ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬೇಕಿದ್ದರೆ ಪುದೀನ ಎಲೆಗಳನ್ನು ಸೇರಿಸ ಬಹುದು. ಸಿಹಿ ಬೇಕಿದ್ದರೆ ಸಕ್ಕರೆ ಸೇರಿಸಿ.
ಈಗ ಕಲ್ಲಂಗಡಿ ಹಣ್ಣಿನ ಕೋಲ್ಡ್ ಜ್ಯೂಸ್ ಸಿದ್ಧವಾಗಿದೆ.

cooking , food recipies , juices , saakshatv









