Cooking : ವಿವಿಧ ಬಗೆಯ ಅಡುಗೆ ರೆಸಿಪಿಗಳು ನಿಮಗಾಗಿ ..!!
ಇಡ್ಲಿ ಮಿಕ್ಕಿದ್ರೆ ರುಚಿಯಾಗಿ ಉಪ್ಪಿಟ್ಟು ಮಾಡಿ..!!
ಬೇಕಾಗುವ ಪದಾರ್ಥಗಳು :
ಇಡ್ಲಿ
ಉಪ್ಪು
ಈರುಳ್ಳಿ
ಕಡಲೆಬೀಜ
ಕಡಲೆಬೇಳೆ
ಉದ್ದಿನ ಬೇಳೆ
ಸಾಸಿವೆ
ಕರಿಬೇವು
ಕೊತ್ತಂಬರಿ
ಜೀರಿಗೆ
ಅರಿಶಿಣ
ಹಸಿಮೆಣಸಿನಕಾಯಿ
ನಿಂಬೆಹಣ್ಣು
ಬಟಾಣಿ ( ಆಪ್ಷನಲ್ )
ಕ್ಯಾರೋಟ್ , ಬೀನ್ಸ್ ( ಆಪ್ಷನಲ್ )
ಎಣ್ಣೆ
ಮಾಡುವ ವಿಧಾನ : ಒಂದು ದಪ್ಪ ತಳದ ಕಡಾಯಿ ಕಾಯಿಸಿ ಅದಕ್ಕೆ ಎಣ್ಣೆ ಹಾಕಿ.. ಈಗ ಸಾಸಿವೆ ಹಾಕಿ ಸಿಡಿಯಲು ಬಿಡಿ.. ನಂತರ ಜೀರಿಗೆ , ಅರಿಶಿಣ , ಉದ್ದಿನ ಬೇಳೆ ಕಡಲೆಬೇಳೆ , ಕಡಲೆ ಬೀಜ ಒಂದರಂತೆ ಒಂದು ಹಾಕಿ ಉರಿಯುತ್ತಾ ಬನ್ನಿ.. ಅರಿಶಿಣ ಹಾಕಿ…
ಈಗ ಕರಿಬೇವು ಹಾಕಿ ನಂತರ , ಹೆಚ್ಚಿಟ್ಟ ಈರುಳ್ಳಿ ಹಾಕಿ ಕಂದು ಬಣ್ಣ ಬರುವ ತನಕ ಚನ್ನಾಗಿ ಫ್ರೈ ಮಾಡಿ.. ನಂತರ ಹೆಚ್ಚಿಟ್ಟುಕೊಂಡ ಹಸಿರು ಮೆಣಸಿನಕಾಯಿ ಹಾಕಿ ಫ್ರೈ ಮಾಡಿ ಈ ಹಂತದಲ್ಲಿ ತರಕಾರಿ ಬಯಸಿದರೆ , ಬಟಾಣಿ ಇನ್ನಿತರೇ ನಿಮ್ಮಿಷ್ಟದ ತರಕಾರಿ ಹಾಕಿ ಫ್ರೈ ಮಾಡುತ್ತಾ ಬೇಯಿಸಿಕೊಳ್ಳಿ..
ಅಗತ್ಯವಿದ್ದರೆ ಸಣ್ಣದೊಂದು ಲೋಟದಲ್ಲಿ ನೀರು ಹಾಕಿ ( ತರಕಾರಿ ಹಾಕಿದರಷ್ಟೇ ನೀರು ಹಾಕಿ , ಬೇಯಿಸುವ ಸಲುವಾಗಿ ).. ಈಗ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಿ..
ನಂತರ ಪುಡಿ ಮಾಡಿಟ್ಟುಕೊಂಡ ಇಡ್ಲಿಯನ್ನ ಬಾಣಲಿಗೆ ಹಾಕಿ ಚನ್ನಾಗಿ ಮಿಶ್ರಣ ಮಾಡಿ ಫ್ರೈ ಮಾಡುತ್ತಾ ಬನ್ನಿ.. ಮಸಾಲೆಯೆಲ್ಲವೂ ಇಡ್ಲಿ ಚೂರಿನ ಜೊತೆಗೆ ಚನ್ನಾಗಿ ಬೆರೆತ ನಂತರ 1 ನಿಮಿಷ ಮಿಶ್ರಣ ಮಾಡುತ್ತಾ ಉರಿದು ಈಗ ಗ್ಯಾಸ್ ಆಫ್ ಮಾಡಿಕೊಳ್ಳಿ.. ರುಚಿಯಾದ ಇಡ್ಲಿ ಉಪ್ಪಿಟ್ಟು ಸವಿಯಲು ಸಿದ್ಧ.
ಟೇಸ್ಟಿ ಮಸಾಲಾ ಸೋಡ , ರುಚಿ ಜೊತೆಗೆ ಜೀರ್ಣಕ್ರಿಯೆಗೆ ಉತ್ತಮ..!!
ಬೇಕಾಗುವ ಪದಾರ್ಥಗಳು
ನಿಂಬೆ ಹಣ್ಣು / ಎಳ್ಳಿಕಾಯಿ – 1
ಸೋಡಾ ( ಪ್ಯಾಕ್ಡ್ )
ಉಪ್ಪು
ಕಾಳು ಮೆಣಸು ಪುಡಿ , ಜೀರಿಗೆ ಮೆಣಸಿನ ಪುಡಿ
ಪುದೀನ ಎಲೆ
ಆರೋಗ್ಯ ಪ್ರಯೋಜನ : ಮೊದಲಿಗೆ ಮಸಲಾ ಸೋಡ ಜೀರ್ಣಕ್ರಿಯಗೆ ಬಹಳ ಉತ್ತಮ ಎಂಬುದನ್ನ ತಿಳಿಯಿರಿ.. ರುಚಿಯ ಜೊತೆಗೆ ರಿಫ್ರೆಷ್ ಮೆಂಟ್ ಕೂಡ ಸಿಗುತ್ತದೆ..
ಆರೋಗ್ಯಕರ ಮಸಾಲಾ ಸೋಡ , ಊಟ ಹೆಚ್ಚಾಯ್ತು ಎನಿಸಿದಾಗ ಅಥವ , ಮಾಂಸಾಹಾರಿ ಊಟ ಸೇವಿಸಿದ ನಂತರ ಸೇವಿಸಿದರೆ ಜೀರ್ಣಕ್ರಿಯೆ ಚನಾಗಿ ಆಗುತ್ತದೆ..
ಮಾಡುವ ವಿಧಾನ : ಮೊದಲಿಗೆ ಒಂದು ಲೋಟಕ್ಕೆ ಅರ್ಧ ನಿಂಬೆ ರಸ ಅಥವ ಎಳ್ಳಿ ಹಣ್ಣಿಸ ರಸ ಹಾಕಿ ಅದಕ್ಕೆ ಉಪ್ಪು , ಜೀರಿಗೆ , ಮೆಣಸು ಪುಡಿ ನಿಮ್ಮ ರುಚಿಗೆ ತಕ್ಕಷ್ಟು ಹಾಕಿಕೊಳ್ಳಿ… ಚೆನ್ನಾಗಿ ಮಿಶ್ರಣ ಮಾಡಿ ಒಂದು ಪುದೀನ ಎಲೆ ಹಾಕಿ ಈಗ ಚಿಲ್ಡ್ ( ಕೋಲ್ಡ್ ) ಸೋಡಾವನ್ನ ಲೋಟಕ್ಕೆ ಹಾಕುತ್ತಾ ಮತ್ತೊಂದು ಕಡೆ ಸ್ಪೂನಿನಿಂದ ಕಲಸಿ ತಕ್ಷಣವೇ ಗ್ಯಾಸ್ ಹೋಗುವ ಮುನ್ನವೇ ಕುಡಿಯುವುದು ಉತ್ತಮ..