Cooking Recepies : ತರಕಾರಿಗಳಿಲ್ಲದೇ ರುಚಿಯಾಗಿ ಮಾಡಿ ನೋಡಿ ಸಾಂಬಾರ್..!!
1 ಟೀಸ್ಪೂನ್ ಹುಣಸೆಹಣ್ಣಿನ ಪೇಸ್ಟ್ ಅನ್ನು ನೀರಿನಲ್ಲಿ ಸುಮಾರು 5 ರಿಂದ 10 ನಿಮಿಷ ನೆನೆಸಿ ಫಿಲ್ಟರ್ ಮಾಡಿ ಇಡಿ.
ನಂತರ ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್ ನಲ್ಲಿ ಹೋಳು ಮಾಡಿದ ಈರುಳ್ಳಿ ಜೊತೆಗೆ 2 ಕಪ್ ನೀರು ಸೇರಿಸಿ ಬೇಯಿಸಿ.
ಕುಕ್ಕರ್‌ನಲ್ಲಿ 3 ವಿಸಿಲ್ ಹಾಕಿಸಿ. ನಂತರ ಪಾತ್ರೆಗೆ ವರ್ಗಾಯಿಸಿ.
ಇದಕ್ಕೆ ಉಳಿದ 2 ಕಪ್ ನೀರು, ಹುಣಸೆಹಣ್ಣು, ಉಪ್ಪು ಮತ್ತು ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಹುಡಿ, ಮೆಂತ್ಯ ಹುಡಿ ಮತ್ತು ಸಾಂಬಾರ್ ಮಸಾಲೆ ಸೇರಿಸಿ, ಚೆನ್ನಾಗಿ ಬೆರೆಸಿ. ಒಂದೆರಡು ನಿಮಿಷಗಳ ಕಾಲ ಮಧ್ಯಮ ಜ್ವಾಲೆಯಲ್ಲಿ ಕುದಿಸಿ. ಈಗ ಬಿಸಿ ಬಿಸಿಯಾದ ಸಾಂಬಾರ್ ಸವಿಯಲು ಸಿದ್ಧವಾಗಿದೆ.
ಈ ಸರಳವಾದ ಸಾಂಬಾರ್ ಇಡ್ಲಿ ಅಥವಾ ದೋಸೆ ಅಥವಾ ಅನ್ನದೊಂದಿಗೆ ಸವಿಯಲು ರುಚಿಕರವಾಗಿರುತ್ತದೆ.