Cooking : ರುಚಿ ಜೊತೆಗೆ ಆರೋಗ್ಯಕರವಾದ ದೊಡ್ಡ ಪತ್ರೆಯ ಬಜ್ಜಿ ಮಾಡಿ, ರೆಸಿಪಿ ನೋಡಿ…!!
ಬೇಕಾಗುವ ಸಾಮಗ್ರಿಗಳು
ದೊಡ್ಡಪತ್ರೆ ಎಲೆ – 15
ಕಡಲೆಹಿಟ್ಟು – 1 ಕಪ್
ಅಕ್ಕಿ ಹಿಟ್ಟು – 2 ಚಮಚ
ಮೆಣಸಿನ ಹುಡಿ 1 1/2 ಚಮಚ
ಓಮ 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಚಿಟಿಕೆ ಇಂಗು
ಜೀರಿಗೆ ಪುಡಿ 1/2 ಚಮಚ
ದೊಡ್ಡಪತ್ರೆ ಎಲೆಗಳನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಬಳಿಕ ಎಲೆಗಳಲ್ಲಿನ ನೀರನ್ನು ಒರೆಸಿ.
ನಂತರ ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಹುಡಿ, ಓಮ, ಇಂಗು, ಜೀರಿಗೆ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಇದಕ್ಕೆ ಅಗತ್ಯವಿರುವಷ್ಟು ನೀರು ಸೇರಿಸಿ ಕಲಸಿ.
ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ದೊಡ್ಡಪತ್ರೆ ಎಲೆಗಳನ್ನು ಸಿದ್ಧಪಡಿಸಿಕೊಂಡ ಮಿಶ್ರಣದಲ್ಲಿ ಅದ್ದಿ, ಕಾದ ಎಣ್ಣೆಯಲ್ಲಿ ಹುರಿದರೆ ಬಿಸಿಯಾದ ದೊಡ್ಡಪತ್ರೆ ಬಜ್ಜಿ ಸವಿಯಲು ರೆಡಿ. ಇದನ್ನು ಚಟ್ನಿಯ ಜೊತೆ ಸವಿಯಿರಿ.
cooking , food recipies – saakshatv









