ADVERTISEMENT
Monday, February 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

5 ಸುಲಭ ಮತ್ತು ರುಚಿಕರ ಸಿಹಿ ತಿನಿಸುಗಳು ರೆಸಿಪಿಗಳು ನಿಮಗಾಗಿ..!

Namratha Rao by Namratha Rao
September 29, 2021
in Cooking, Newsbeat, ಅಡುಗೆ
Share on FacebookShare on TwitterShare on WhatsappShare on Telegram

5 ಸುಲಭ ಮತ್ತು ರುಚಿಕರ ಸಿಹಿ ತಿನಿಸುಗಳು ರೆಸಿಪಿಗಳು ನಿಮಗಾಗಿ..!

1. ರುಚಿಯಾದ ಚಿರೋಟಿ

ಬೇಕಾಗುವ ‌ಸಾಮಾಗ್ರಿಗಳು

Related posts

India AI Impact Summit: Prime Minister Narendra Modi visits Jio Pavilion

ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ: ಜಿಯೋ ಪೆವಿಲಿಯನ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

February 16, 2026
What is eyesight? Are you suffering from it a lot, and if so, how can you get rid of it?

ಕಣ್ಣುದೃಷ್ಟಿ ಎಂದರೇನು? ಇದರಿಂದ ತುಂಬಾ ಸಮಸ್ಯೇಯಿಂದ ಬಳಲುತ್ತಿದ್ದಿರಾ ಹಾಗಿದ್ದರೆ ಅದರ ನಿವಾರಣೆ ಹೇಗೆ…?

February 16, 2026

ಮೈದಾ -1 ಕಪ್
ಚಿರೋಟಿ ರವೆ – 2 ಚಮಚ
ಬಿಸಿ ಎಣ್ಣೆ 1ಚಮಚ
ಚಿಟಿಕೆಯಷ್ಟು ಉಪ್ಪು

ಅಕ್ಕಿ ಹಿಟ್ಟು – 2 ಚಮಚ
ತುಪ್ಪ – 4 ಚಮಚ
ಸಕ್ಕರೆ ಪುಡಿ ಕೊನೆಯಲ್ಲಿ ಉದುರಿಸಲು
ಏಲಕ್ಕಿ ಪುಡಿ
ಕರಿಯಲು ಎಣ್ಣೆ

Saakshatv cooking recipe how to prepare sweet chirotti

ಮಾಡುವ ವಿಧಾನ

ಮೊದಲಿಗೆ ಅಕ್ಕಿ ಹಿಟ್ಟು ಮತ್ತು ತುಪ್ಪವನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಬೆರೆಸಿ ಹಾಗೆ ಇಡಿ.
ಈಗ ಮತ್ತೊಂದು ‌ಪಾತ್ರೆಯಲ್ಲಿ‌ ಮೈದಾ, ಚಿರೋಟಿ ರವೆ, ಉಪ್ಪು ಸೇರಿಸಿ ಕಲಸಿ. ಅದಕ್ಕೆ ಬಿಸಿ ಮಾಡಿದ ಎಣ್ಣೆ ಸೇರಿಸಿ. ಅಗತ್ಯವಿರುವಷ್ಟು ನೀರು ‌ಸೇರಿಸಿ ಚೆನ್ನಾಗಿ ‌ಕಲಸಿ. ಬಳಿಕ‌ ಸಣ್ಣ ಸಣ್ಣ ‌ಉಂಡೆಗಳನ್ನು ಮಾಡಿ ಚಪಾತಿಯಂತೆ ಲಟ್ಟಿಸಿಕೊಳ್ಳಿ.

ನಂತರ ಲಟ್ಟಿಸಿಕೊಂಡಿರುವ ಚಪಾತಿಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಮೇಲೆ ಅಕ್ಕಿಹಿಟ್ಟಿನೊಂದಿಗೆ ಬೆರೆಸಿರುವ ತುಪ್ಪವನ್ನು ಸವರಿ ಅದರ ಮೇಲೆ ‌ಮತ್ತೊಂದು ಚಪಾತಿ ಇಡಿ.‌ ಅದರ ಮೇಲೆ ಅಕ್ಕಿಹಿಟ್ಟಿನೊಂದಿಗೆ ಬೆರೆಸಿರುವ ತುಪ್ಪವನ್ನು ಸವರಿ ಅದರ ಮೇಲೆ ಮತ್ತೊಂದು ಚಪಾತಿಯನ್ನಿಡಿ. ಹೀಗೆ 5 ಚಪಾತಿ ಗಳನ್ನು ಒಂದರ ಮೇಲೊಂದು ಇಟ್ಟು ನಂತರ ರೋಲ್ ಮಾಡಿ.‌
ನಂತರ ಚಿಕ್ಕ ಪೂರಿ ಅಳತೆಯಲ್ಲಿ ಲಟ್ಟಿಸಿ ಕಾದ ಎಣ್ಣೆಯಲ್ಲಿ ಬಿಡಿ. ಮಧ್ಯಮ ‌ಉರಿಯಲ್ಲಿ‌ ಕರಿದು ತೆಗೆದು ಬಿಸಿ ಇರುವಾಗಲೇ ಸಕ್ಕರೆ ಏಲಕ್ಕಿ ಪುಡಿ ಉದುರಿಸಿ. ಈಗ ರುಚಿಯಾದ ‌ಚಿರೋಟಿ ಸವಿಯಲು ‌ಸಿದ್ಧವಾಗಿದೆ. ಇದನ್ನು ಹಾಲಿನ ಜೊತೆಗೆ ಅಥವಾ ಬಾದಾಮಿ ‌ಹಾಲಿನ ಜೊತೆ ಸವಿಯಬಹುದು.

5 ವಿವಿಧ ಬಗೆಯ ರುಚಿಕರ ಬೋಂಡಾಗಳ ರೆಸಿಪಿಗಳು ನಿಮಗಾಗಿ..!

2. ಗೋದಿ ಹಿಟ್ಟು ಬೆಲ್ಲದ ಹಲ್ವಾ

ಬೇಕಾಗುವ ‌ಸಾಮಾಗ್ರಿಗಳು

ಗೋದಿ ಹಿಟ್ಟು – 2 ಕಪ್
ಬೆಲ್ಲ – 1 ಕಪ್
ಬಿಸಿ ನೀರು – 1 1/2 ಕಪ್
ತುಪ್ಪ ‌- 1 ಕಪ್
ಏಲಕ್ಕಿ ಪುಡಿ – 1/4 ಚಮಚ
ಹುರಿದ ಡ್ರೈ ‌ಫ್ರೂಟ್ಸ್ – ಸ್ವಲ್ಪ

ಮಾಡುವ ವಿಧಾನ
Saakshatv cooking recipe prepare wheat jaggery halva
ಮೊದಲಿಗೆ ಪ್ಯಾನ್ ಗೆ ಅರ್ಧ ಕಪ್ ತುಪ್ಪ ಹಾಕಿ ಬಿಸಿ ಮಾಡಿ. ತುಪ್ಪ ‌ಕರಗಿದ ಬಳಿಕ ‌ಗೋದಿ ಹಿಟ್ಟನ್ನು ಹಾಕಿ‌ ಕಂದು ಬಣ್ಣಕ್ಕೆ ತಿರುಗುವ ವರೆಗೆ ಹುರಿಯಿರಿ.
ನಂತರ ಬೆಲ್ಲ ಸೇರಿಸಿ. ಬಿಸಿ ನೀರನ್ನು ನಿಧಾನವಾಗಿ ಗಂಟಿಲ್ಲದ ಹಾಗೆ ತಿರುಗಿಸುತ್ತಾ ಬೆರೆಸಿ. ಉಳಿದ ತುಪ್ಪವನ್ನು ‌ಸೇರಿಸಿ ಚೆನ್ನಾಗಿ ಬೆರೆಸಿ. ತುಪ್ಪ ಮೇಲಕ್ಕೆ ‌ತೇಲುವವರೆಗೆ ಕೈಯಾಡಿಸಿ. ಈಗ ಏಲಕ್ಕಿ ಹುಡಿ ಮತ್ತು ಹುರಿದ ಡ್ರೈ ಫ್ರೂಟ್ಸ್ ಗಳನ್ನು ಸೇರಿಸಿ. ಈಗ ರುಚಿಯಾದ ಗೋಧಿ ಹಿಟ್ಟು ‌ಬೆಲ್ಲದ ಹಲ್ವಾ ಸವಿಯಲು ಸಿದ್ಧವಾಗಿದೆ.

5 ವಿವಿಧ ಬಗೆಯ ರುಚಿಕರ ವಡೆಗಳ ರೆಸಿಪಿಗಳು

3. ಸಿಹಿಯಾದ ಬ್ರೆಡ್ ಗುಲಾಬ್ ಜಾಮೂನ್

ಬೇಕಾಗುವ ಪದಾರ್ಥಗಳು

ಸಕ್ಕರೆ – 1 ಕಪ್
ನೀರು – 1/2 ಕಪ್
ಏಲಕ್ಕಿ ಪುಡಿ – 1 1/2 ಟೀಸ್ಪೂನ್
ಡ್ರೈ ಫ್ರೂಟ್ಸ್ – ಸ್ವಲ್ಪ
ಗುಲ್ಕಂಡ್ / ರೋಸ್ ಪೆಟಲ್ ಜಾಮ್ – 1 ಚಮಚ
ಬ್ರೆಡ್ ಚೂರುಗಳು – 6
ಅಡಿಗೆ ಸೋಡಾ ಚಿಟಿಕೆಯಷ್ಟು
ಅಗತ್ಯವಿರುವಷ್ಟು ಹಾಲು

ಮಾಡುವ ವಿಧಾನ
ಪ್ಯಾನ್ ಅನ್ನು ಹೆಚ್ಚಿನ ಶಾಖದಲ್ಲಿ ಬಿಸಿ ಮಾಡಿ.ಸಕ್ಕರೆ ಮತ್ತು ನೀರು ಸೇರಿಸಿ. ಚೆನ್ನಾಗಿ ಬೆರೆಸಿ.
ಸಕ್ಕರೆ ಕರಗಿದಾಗ ಮತ್ತು ಸಿರಪ್ ಕುದಿ ಬರಲು ಪ್ರಾರಂಭವಾದಾಗ ಸಣ್ಣ ಉರಿಯಲ್ಲಿ 7-8 ನಿಮಿಷಗಳ ಕಾಲ ಕುದಿಯಲು ಬಿಡಿ. ನಂತರ ಕೆಳಗಿಳಿಸಿ.
ಏಲಕ್ಕಿ ಪುಡಿ ಸೇರಿಸಿ. ಚೆನ್ನಾಗಿ ಬೆರೆಸಿ. ಸಕ್ಕರೆ ಪಾಕ ರೆಡಿಯಾಗಿದೆ.‌
Saakshatv cooking recipes Gulabjamun
ಒಂದು ಪಾತ್ರೆಯಲ್ಲಿ ಗುಲ್ಕಂಡ್ (ಗುಲಾಬಿ ದಳಗಳ ಜಾಮ್) ತೆಗೆದುಕೊಳ್ಳಿ. ಅದಕ್ಕೆ ಡ್ರೈ ಫ್ರೂಟ್ಸ್ ( ಗೋಡಂಬಿ ಬೀಜಗಳು, ಬಾದಾಮಿ, ಪಿಸ್ತಾ) ಸೇರಿಸಿ.
ಚೆನ್ನಾಗಿ ಮಿಶ್ರ ಮಾಡಿ. ಇದನ್ನು ಸ್ವಲ್ಪ ಸಮಯದವರೆಗೆ ರೆಫ್ರಿಜರೇಟರ್ನಲ್ಲಿ ಇರಿಸಿ.

ಬ್ರೆಡ್ ತುಂಡುಗಳನ್ನು ತೆಗೆದುಕೊಳ್ಳಿ. ಬ್ರೆಡ್ ನ ಅಂಚುಗಳನ್ನು ಕತ್ತರಿಸಿ. ಈಗ ಬ್ರೆಡ್‌ ಅನ್ನು ಸಣ್ಣ ತುಂಡುಗಳನ್ನು ಮಾಡಿ ಪುಡಿ ಮಾಡಿ. ಅದಕ್ಕೆ ಅಡಿಗೆ ಸೋಡಾ ಸೇರಿಸಿ. ಹಾಲನ್ನು ಸೇರಿಸಿ ಮಿಶ್ರಣ ಮಾಡಿ.
ಬ್ರೆಡ್‌ ಗೆ ಅನುಗುಣವಾಗಿ ಹಾಲಿನ ಪ್ರಮಾಣವನ್ನು ಹೊಂದಿಸಿ. ಅರೆ ಮೃದುವಾದ ಹಿಟ್ಟನ್ನು ತಯಾರಿಸಿ. ಅಗತ್ಯವಿದ್ದರೆ ಹೆಚ್ಚು ಹಾಲು ಸೇರಿಸಿ.
ರೆಫ್ರಿಜರೇಟರ್ನಲ್ಲಿ ಇರಿಸಿದ ಮಿಶ್ರಣದ ಜೊತೆ ಬೆರೆಸಿಕೊಳ್ಳಿ.
ಈ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ತಯಾರಿಸಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಮಾಡಿಟ್ಟುಕೊಂಡ ಸಣ್ಣ ಉಂಡೆಗಳನ್ನು ಎಣ್ಣೆಯಲ್ಲಿ ಬಿಡಿ.‌ ಕಡಿಮೆ ಶಾಖದಲ್ಲಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಈಗ ಸಿಹಿಯಾದ ಗುಲಾಬ್ ಜಾಮೂನ್‌ಗಳು ಸವಿಯಲು ಸಿದ್ಧವಾಗಿದೆ.

5 ಸಿಂಪಲ್ ಮತ್ತು ಬಹಲ ಟೇಸ್ಟಿ ಅಡುಗೆ ರೆಸಿಪಿಗಳು ನಿಮಗಾಗಿ..!

4. ಗೋಧಿ ‌ಬರ್ಫಿ

ಬೇಕಾಗುವ ಸಾಮಗ್ರಿಗಳು

ಗೋಧಿ ಹಿಟ್ಟು – 1 ಕಪ್
ತುಪ್ಪ – 1/2 ಕಪ್
ಬೆಲ್ಲದ ಹುಡಿ – 1 ಕಪ್

ಮಾಡುವ ವಿಧಾನ
Saakshatv cooking tips how to prepare godhi barpi
ಮೊದಲಿಗೆ ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ. ತುಪ್ಪ ಕರಗಿದ ಬಳಿಕ ಅದಕ್ಕೆ ಸ್ವಲ್ಪ ಸ್ವಲ್ಪವೇ ಗೋಧಿ ಹಿಟ್ಟನ್ನು ಹಾಕುತ್ತಾ ಚೆನ್ನಾಗಿ ಮಿಶ್ರ ಮಾಡಿ. ಬಳಿಕ ಗೋಧಿ ಹಿಟ್ಟನ್ನು ಪರಿಮಳ ಬರುವವರೆಗೆ ಹುರಿಯುತ್ತಾ ಇರಿ. ನಂತರ ಇದಕ್ಕೆ ಬೆಲ್ಲದ ಹುಡಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಈ ಮಿಶ್ರಣ ಬಾಣಲೆಯ ತಳ ಬಿಡುವವರೆಗೆ ಚೆನ್ನಾಗಿ ಕೈಯಾಡಿಸುತ್ತಾ ಇರಿ. ಬಳಿಕ ತುಪ್ಪ ಸವರಿದ ತಟ್ಟೆಗೆ ಈ ಮಿಶ್ರಣವನ್ನು ಹಾಕಿ ಹತ್ತು ನಿಮಿಷ ಹಾಗೆಯೇ ಬಿಡಿ. ನಂತರ ಅದನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ.

5. ಕ್ಯಾರೆಟ್ ಹಲ್ವಾ

ಬೇಕಾಗುವ ಸಾಮಗ್ರಿಗಳು

ಕ್ಯಾರೆಟ್ ತುರಿ – 3 ಕಪ್
ತುಪ್ಪ – 1/4 ಕಪ್
ಸಕ್ಕರೆ -1 ಕಪ್
ಹಾಲು – 3 ಕಪ್
ಡ್ರೈ ಫ್ರೂಟ್ಸ್ – ಸ್ವಲ್ಪ
ಏಲಕ್ಕಿ ಪುಡಿ – ಚಿಟಿಕೆಯಷ್ಟು
Saakshatv cooking recipe preparation of carrot halva
ಮಾಡುವ ವಿಧಾನ
ಮೊದಲಿಗೆ ಬಾಣಲೆಯನ್ನು ಬಿಸಿ ಮಾಡಿ, ತುಪ್ಪವನ್ನು ಹಾಕಿ ಕರಗಿಸಿ. ನಂತರ ಡ್ರೈ ಫ್ರೂಟ್ಸ್ ಗಳನ್ನು ಹುರಿದು ಪಕ್ಕದಲ್ಲಿ ಇಟ್ಟುಕೊಳ್ಳಿ. ನಂತರ ಅದೇ ಬಾಣಲೆಗೆ ಕ್ಯಾರೆಟ್ ತುರಿ ಸೇರಿಸಿ ಕೆಲವು ನಿಮಿಷ ಹುರಿಯಿರಿ. ಬಳಿಕ ಇದಕ್ಕೆ ಹಾಲನ್ನು ಸೇರಿಸಿ ಬೇಯಿಸಿಕೊಳ್ಳಿ.
ಹಾಲು ಇಂಗುವವರೆಗೆ ಕ್ಯಾರೆಟ್ ತುರಿಯನ್ನು ಬೇಯಿಸಿ ಕೊಳ್ಳಿ. ನಂತರ ಇದಕ್ಕೆ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಸಕ್ಕರೆ ಕರಗಿದ ಬಳಿಕ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಈ ಮಿಶ್ರಣ ತಳ ಬಿಡುವವರೆಗೂ ಕೈಯಾಡಿಸುತ್ತಾ ಇರಿ. ನಂತರ ಏಲಕ್ಕಿ ಪುಡಿ ಮತ್ತು ಹುರಿದಿಟ್ಟುಕೊಂಡ ಡ್ರೈಫ್ರೂಟ್ಸ್ ಸೇರಿಸಿ. ಈಗ ರುಚಿಯಾದ ಕ್ಯಾರೆಟ್ ಹಲ್ವಾ ಸವಿಯಲು ಸಿದ್ಧ.

ಮಕ್ಕಳಿಗೆ ಬಲು ಇಷ್ಟವಾಗುವ 5 ಸ್ನಾಕ್ಸ್/ ತಿಂಡಿಗಳ ರೆಸಿಪಿಗಳು ನಿಮಗಾಗಿ..!

10 ಸಿಂಪಲ್ ಮತ್ತು ರುಚಿಕರ ವೆಜ್ ಬಿರಿಯಾನಿ / ಬಾತ್ ಗಳ ರೆಸಿಪಿಗಳು ನಿಮಗಾಗಿ..!

Tags: #saakshatvcookingfood recipies
ShareTweetSendShare
Join us on:

Related Posts

India AI Impact Summit: Prime Minister Narendra Modi visits Jio Pavilion

ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ: ಜಿಯೋ ಪೆವಿಲಿಯನ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

by admin
February 16, 2026
0

• ಆಕಾಶ್ ಅಂಬಾನಿ ಅವರು ಜಿಯೋದ ಎಐ ಪರಿಸರ ವ್ಯವಸ್ಥೆಯ ಬಗ್ಗೆ ಪ್ರಧಾನಮಂತ್ರಿಯವರಿಗೆ ವಿವರಿಸಿದರು • ಜಿಯೋ ಇಂಟೆಲಿಜೆನ್ಸ್ ನಿಂದ ಜಿಯೋ ಆರೋಗ್ಯ ಎಐ ವರೆಗಿನ ಅನೇಕ...

What is eyesight? Are you suffering from it a lot, and if so, how can you get rid of it?

ಕಣ್ಣುದೃಷ್ಟಿ ಎಂದರೇನು? ಇದರಿಂದ ತುಂಬಾ ಸಮಸ್ಯೇಯಿಂದ ಬಳಲುತ್ತಿದ್ದಿರಾ ಹಾಗಿದ್ದರೆ ಅದರ ನಿವಾರಣೆ ಹೇಗೆ…?

by admin
February 16, 2026
0

ಶ್ರೀ ಕಟೀಲು ದುರ್ಗಪರಮೇಶ್ವರೀ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ...

If you cut your nail and place it here, it will bring you money and also ward off the evil eye.

ಉಗುರನ್ನು ಕತ್ತರಿಸಿ ಇಲ್ಲಿ ಹಾಕಿದರೆ ಹಣದ ಮಳೆಯ ಜೊತೆಗೆ ಕೆಟ್ಟ ದೃಷ್ಟಿಯು ಕೂಡ ದೂರವಾಗುತ್ತದೆ..

by admin
February 16, 2026
0

ಇದರಲ್ಲಿ ನಿಮ್ಮ ಬೆರಳಿನ ಉಗುರನ್ನು ಕತ್ತರಿಸಿ ಹಾಕಿ ಪವಾಡ ನೋಡಿ ಇದರ ಬಗ್ಗೆ ಕನಸಿನಲ್ಲೂ ಕಲ್ಪನೆ ಮಾಡಲು ಸಾಧ್ಯವಿಲ್ಲ ಯಾವುದೇ ಕೈಯಲ್ಲಿರುವ ಬೆರಳುಗಳು ಒಂದೇ ರೀತಿ ಇಲ್ಲ,...

ishan kishan

ಶ್ರೀಲಂಕಾದಲ್ಲಿ ಹರ ಹರ ಮಹದೇವ..! ಭಾರತದಲ್ಲಿ ಓಂ ನಮಃ ಶಿವಾಯಃ..! ಪಾಕಿಸ್ತಾನದಲ್ಲಿ ಓಂ ಶಾಂತಿಃ ಶಾಂತಿಃ..ಶಾಂತಿಃ..!

by admin
February 16, 2026
0

ಶ್ರೀಲಂಕಾದಲ್ಲಿ ಹರ ಹರ ಮಹದೇವ..! ಭಾರತದಲ್ಲಿ ಓಂ ನಮಃ ಶಿವಾಯಃ..! ಪಾಕಿಸ್ತಾನದಲ್ಲಿ ಓಂ ಶಾಂತಿಃ ಶಾಂತಿಃ..ಶಾಂತಿಃ..! ಇದೆಂಥಾ ಕಾಕತಾಳೀಯ.. ಹೇಳಿ ಕೇಳಿ.. ಶ್ರೀಲಂಕಾ ಹರ ಹರ ಮಹದೇವನ...

ಸಾರಿಗೆ ಪ್ರಯಾಣಿಕರಿಗೆ ಮತ್ತೊಂದು ಬರೆ: ಕೆಎಸ್ಆರ್‌ಟಿಸಿ ಲಗೇಜ್ ದರ ದಿಢೀರ್ ಏರಿಕೆ ಇಂದಿನಿಂದ ಜಾರಿ

ಸಾರಿಗೆ ಪ್ರಯಾಣಿಕರಿಗೆ ಮತ್ತೊಂದು ಬರೆ: ಕೆಎಸ್ಆರ್‌ಟಿಸಿ ಲಗೇಜ್ ದರ ದಿಢೀರ್ ಏರಿಕೆ ಇಂದಿನಿಂದ ಜಾರಿ

by Shwetha
February 16, 2026
0

ಬೆಂಗಳೂರು: ರಾಜ್ಯದ ಜನತೆಗೆ ಸಾರಿಗೆ ಇಲಾಖೆ ಮತ್ತೊಂದು ಶಾಕ್ ನೀಡಿದೆ. ಸಾರಿಗೆ ಬಸ್ ಪ್ರಯಾಣಿಕರಿಗೆ ಮತ್ತು ಪಾರ್ಸೆಲ್ ಸೇವೆ ಬಳಸುವವರಿಗೆ ದಿಢೀರ್ ಹೊರೆ ಎನ್ನುವಂತೆ, ಕರ್ನಾಟಕ ರಾಜ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram