ರುಚಿಯಾಚಿ ಮಾಡಿ ಮೂಲಂಗಿ ಪಲ್ಯ… ಟೇಸ್ಟ್ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು..!!
ಬೇಕಾಗುವ ಸಾಮಗ್ರಿಗಳು
ಮೂಲಂಗಿ ಕಾಯಿ – 1 ಬಟ್ಟಲು
ಚಿಕ್ಕದಾಗಿ ಕತ್ತರಿಸಿದ ಆಲೂಗಡ್ಡೆ 1
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಟೊಮೆಟೊ – 1
ಸಣ್ಣಗೆ ಹೆಚ್ಚಿದ ಹಸಿ ಮೆಣಸಿನ ಕಾಯಿ -2
ಎಣ್ಣೆ 1 ಚಮಚ
ಜೀರಿಗೆ 1/2 ಚಮಚ
ಸಾಸಿವೆ 1/2 ಚಮಚ
ಅರಿಶಿಣ ಪುಡಿ 1/4 ಚಮಚ
ಮೆಣಸಿನ ಪುಡಿ 1 ಟೇಬಲ್ ಚಮಚ
ಹುರಿದ ಶೇಂಗಾ ಪುಡಿ 1 ಟೇಬಲ್ ಚಮಚ
ಒಣ ಕೊಬ್ಬರಿ ಪುಡಿ 1 ಟೇಬಲ್ ಚಮಚ
ಒಣ ಮೆಣಸಿನಕಾಯಿ 1
ಕರಿಬೇವಿನ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೊದಲಿಗೆ ಮೂಲಂಗಿ ತೊಳೆದು ಕತ್ತರಿಸಿ ಇಟ್ಟುಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಅದಕ್ಕೆ ಜೀರಿಗೆ, ಸಾಸಿವೆ ಹಾಕಿ. ಸಾಸಿವೆ ಸಿಡಿದ ಬಳಿಕ ಕರಿಬೇವು, ಒಣ ಮೆಣಸಿನಕಾಯಿ ಮುರಿದು ಹಾಕಿ ಹುರಿಯಿರಿ.
ಈಗ ಈರುಳ್ಳಿ ಸೇರಿಸಿ ಕೆಂಪಗಾಗುವವರೆಗೆ ಹುರಿಯಿರಿ. ಬಳಿಕ ಅದಕ್ಕೆ ಹಸಿ ಮೆಣಸಿನ ಕಾಯಿ ಹಾಕಿ, ಆಲೂಗಡ್ಡೆ ಹಾಕಿ ಬಾಡಿಸಿ. ನಂತರ ಮೂಲಂಗಿ ಕಾಯಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಬಳಿಕ ಟೊಮೆಟೊ ಸೇರಿಸಿ.
ಈಗ ಅರಿಶಿಣ ಪುಡಿ, ಉಪ್ಪು, ಮೆಣಸಿನ ಪುಡಿ ಹಾಕಿ, 2 ಟೇಬಲ್ ಚಮಚ ನೀರು ಸೇರಿಸಿ ಟೊಮೆಟೊ ಮೃದುವಾಗುವವರೆಗೆ ಚೆನ್ನಾಗಿ ಬೇಯಿಸಿ. ನಂತರ ಶೇಂಗಾ ಪುಡಿ, ಕೊಬ್ಬರಿ ಪುಡಿ ಹಾಕಿ ಕಲಸಿ. ಮುಚ್ಚಳ ಮುಚ್ಚಿ 5 ರಿಂದ 10 ನಿಮಿಷ ಬೇಯಿಸಿ. ರುಚಿಯಾದ ಮೂಲಂಗಿ ಕಾಯಿ ಪಲ್ಯ ರೊಟ್ಟಿ ಅಥವಾ ಚಪಾತಿ ಜೊತೆ ಸವಿಯಲು ಸಿದ್ಧವಾಗಿದೆ.
cooking – food recipies – simple – tasty mulangi palya – saakshatv