ಆರೋಗ್ಯಕರ ಸ್ಮೂದಿ ರೆಸಿಪಿ
1/4 ಕಪ್ ಖರ್ಜೂರ
1 ಮಧ್ಯಮ ಗಾತ್ರದ ಪಚ್ಚು ಬಾಳೆಹಣ್ಣು
3/4 ಕಪ್ ಬಾದಾಮಿ ಹಾಲು
ಬಾಳೆಹಣ್ಣು ಮತ್ತು ಖರ್ಜೂರವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮತ್ತು ಬಾದಾಮಿ ಹಾಲಿನೊಂದಿಗೆ ಬ್ಲೆಂಡರ್ ಗೆ ಹಾಕಿ ದಪ್ಪ ದ್ರವದ ಸ್ಥಿರತೆಯನ್ನು ತಲುಪುವವರೆಗೆ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ.
1 ಕಪ್ ಕಟ್ ಮಾಡಿಟ್ಟ ಮಾವಿನ ಹಣ್ಣು
1 ಕಪ್ ಮೊಸರು
1 ಕಪ್ ಹಾಲು
1 ಟೇಬಲ್ ಸ್ಪೂನ್ ನೀರಿನಲ್ಲಿ ನೆನಸಿಟ್ಟ ಕೇಸರಿ
ಏಲಕ್ಕಿ ಪುಡಿ ಒಂದು ಚಿಟಕೆ
ಮಾವಿನ ತುಂಡುಗಳನ್ನ ಬ್ಲೆಂಡರ್ನಲ್ಲಿ ತೆಗೆದುಕೊಳ್ಳಿ, ಅದರೊಂದಿಗೆ ಮೊಸರು ಸೇರಿಸಿ.
ಇದರ ನಂತರ, ಸಕ್ಕರೆ, ಏಲಕ್ಕಿ ಪುಡಿ, ಹಾಲು ಮತ್ತು ಕೇಸರಿ ಸೇರಿಸಿ ಮತ್ತು ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ರುಬ್ಬಿ
ಸ್ಮೂತ್ ಮತ್ತು ದಪ್ಪ ಕೇಸರ್ ಮ್ಯಾಂಗೋ ಲಸ್ಸಿ ರೆಡಿ.
2 ಮಾವಿನ ಹಣ್ಣನ್ನು ತೊಳೆದು, ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿ, ಅವುಗಳನ್ನು ಬ್ಲೆಂಡರ್ ಜಾರ್ಗೆ ವರ್ಗಾಯಿಸಿ. ಅದಕ್ಕೆ ಹಾಲು ನಿಮಗೆ ಬೇಕಾದ ಪ್ರಮಾಣದಲ್ಲಿ ಬಳಸಿ..
ಸಕ್ಕರೆ ( ನಿಮ್ಮ ರುಚಿಗೆ ತಕ್ಕಷ್ಟು ಅಥವಾ ಮಾವಿನ ಸಿಹಿ ನೋಡಿಕೊಂಡು ಸಕ್ಕರೆ ಉಪಯೋಗಿಸಿ) ಮತ್ತು ಐಸ್-ಕ್ಯೂಬ್ಗಳನ್ನು ಸೇರಿಸಿ ( ಐಸ್ ಕ್ಯೂಬ್ ಗಳು ಆಪ್ಷನಲ್ )…
ನಯವಾಗಿ ನುಣ್ಣಗೆ ರುಬ್ಬಿಕೊಳ್ಳಿ.. ಸಿದ್ಧಪಡಿಸಿದ ಶೇಕ್ ಅನ್ನು ಸರ್ವಿಂಗ್ ಗ್ಲಾಸ್ಗಳಿಗೆ ಸುರಿಯಿರಿ, ಬಾದಾಮಿ ಮತ್ತು ಐಸ್ ಕ್ರೀಮ್ ಸೇರಿಸಿ ಕುಡಿಯಿರಿ..