ನಿಂಬೆ ಹಣ್ಣು – 1 (ಎರೆಡು ಲೋಟಗಳಷ್ಟಕ್ಕೆ )
ಉಪ್ಪು
ಜೀರಿಗೆ ಪುಡಿ
ಮೆಣಸು ಪುಡಿ
ಪುದೀನ ಎಲೆ ( ಆಪ್ಷನಲ್ )
ಬೇಸಿಗೆಯಲ್ಲಿ ಬಹಳ ದಣಿವಾಗುತ್ತೆ.. ದಾಹವಾಗಿ ನೀರು ಕುಡಿಯುತ್ತಿರಬೇಕೆನ್ನಿಸುತ್ತೆ.. ಅಂತಹ ಸಂದರ್ಭದಲ್ಲಿ ಈ ರೀತಿ ನಿಂಬೂ ಶರ್ ಬತ್ ಕುಡಿಯೋದ್ರಿಂದ ಬಹಳ ಹೊತ್ತು ದಾಹವಾಗುವುದಿಲ್ಲ. ನಿಂಬೆ ಹಣ್ಣಿನ ರಸವನ್ನ ಹಿಂಡಿ , ಬೇಕಾದ ಪ್ರಮಾಣದಲ್ಲಿ ನೀರು ಸೇರಿಸಿ , ಉಪ್ಪು ಸೇರಿಸಿ , ಜೀರಿಗೆ ಮೆಣಸು ಪುಡಿ ಸೇರಿಸಿ , ಬೇಕಿದ್ದಲ್ಲಿ ಪುದೀನಾ ಎಲೆ ಸೇರಿಸಿ ಕುಡಿಯಿರಿ..