ಜೋಳದ ತೆನೆ ಬಣವೆಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಜೋಳದ ತೆನೆಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ಈ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಹರಿಣಾಪುರ ಗ್ರಾಮದಲ್ಲಿ ನಡೆದಿದೆ. ಆಕಸ್ಮಿಕ ಬೆಂಕಿಗೆ ಜೋಳದ ತೆನೆ ಬಣವೆಗಳು ಸುಟ್ಟು ಕರಕಲಾಗಿವೆ. ಗ್ರಾಮದ ಮಲ್ಲಪ್ಪ ಸೋಮನಕಟ್ಟಿ ಎಂಬ ರೈತರಿಗೆ ಸೇರಿದ ಜೋಳದ ತೆನೆಗಳು ಸುಟ್ಟು ಹೋಗಿವೆ. ಎರಡು ಜೋಳದ ಬಣವೆಗಳು ಬೆಂಕಿ ಕೆನ್ನಾಲಗೆಯಲ್ಲಿ ಹೊತ್ತಿ ಉರಿದಿವೆ. ಘಟನೆಯಲ್ಲಿ ಸುಮಾರು 5 ಲ7 ರೂ. ಮೌಲ್ಯದ ಜೋಳ ನಾಶವಾಗಿದೆ. ಘಟನೆಗೆ ಕಣ್ಣೀರು ಸುರಿಸಿರುವ ರೈತ, ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.








