ಮೈಸೂರು ಮೂಲದ ತೆಲುಗಿನ ಕಿರುತೆರೆಯ ಖ್ಯಾತ ನಟಿ ನವ್ಯಾ ಸ್ವಾಮಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ತೆಲಂಗಾಣದಲ್ಲಿ ಸಿನಿಮಾ ಮತ್ತು ಸೀರಿಯಲ್ ಶೂಟಿಂಗ್ ಗೆ ಅನುಮತಿ ನೀಡಲಾಗಿದೆ. ಈ ಹಿನ್ನೆಲೆ ಅಲ್ಲಿ ಸೀರಿಯಲ್ ಶೂಟಿಂಗ್ ಗಳನ್ನು ಶುರು ಮಾಡಲಾಗಿದೆ. ಇದರ ಮಧ್ಯೆ ನಾ ಪೇರು ಮೀನಾಕ್ಷಿ ಧಾರಾವಾಹಿಯಲ್ಲಿ ನಟಿಸುತ್ತಿರುವ ನವ್ಯಾ ಸ್ವಾಮಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಧಾರಾವಾಹಿ ಶೂಟಿಂಗ್ ವೇಳೆ ಬೇರೊಬ್ಬರಿಂದ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದ್ದು, ನವ್ಯಾ ಸದ್ಯ ಹೋಂ ಕ್ವಾರಂಟೈನ್ ನಲ್ಲಿದ್ದಾರೆ.
ಹಲವು ಧಾರಾವಾಹಿಗಳ ಭಾಗವಾಗಿರುವ ನವ್ಯಾ, ವಾಣಿ ರಾಣಿ, ಆರ್ಣಮನೈ ಕಿಲೈ, ರನ್ ಆಂಡ್ ಆಮೆ ಕಥಾ ಧಾರಾವಾಹಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಗುಣಲಕ್ಷಣಗಳೇನು ಕಂಡುಬರದಿದ್ದ ಕಾರಣ, ಬೇಗ ಚೇತರಿಸಿಕೊಳ್ಳಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ನವ್ಯಾಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರೊಂದಿಗೆ ಸಂಪರ್ಕದಲ್ಲಿದ್ದ ಹಲವು ಕಲಾವಿದರು, ಐಸೋಲೇಷನ್ ಗೆ ಹೋಗಲು ನಿರ್ಧರಿಸಿದ್ದಾರೆ.