ರಾಜ್ಯದಲ್ಲಿ ಕೊರೊನಾ ಸ್ಫೋಟ : ಇಂದು 2479 ಕೇಸ್ ಪತ್ತೆ Corona
ಬೆಂಗಳೂರು : ರಾಜ್ಯದಲ್ಲಿ ಇಂದು ಕೊರೊನಾ ಸೋಂಕು ರಣಕೇಕೆ ಹಾಕಿದೆ. ಕಳೆದ ಮೂರು ದಿನಗಳಿಂದ ಸಾವಿರದಲ್ಲಿ ನಿಂತಿದ್ದ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಇಂದು ಏಕಾಏಕಿ 2000ಕ್ಕೆ ಬಂದಿದೆ.
ಕರ್ನಾಟಕ ರಾಜ್ಯದಾದ್ಯಂತ ಇಂದು 2479 ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಈ ಕೇಸ್ ಗಳ ಪೈಕಿ ಬೆಂಗಳೂರು ನಗರದಲ್ಲಿಯೇ 2000ಕ್ಕೂ ಅಧಿಕ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ.
Data shows us that cases are doubling every 2-3 days in Karnataka!
While the Government is working on containment measures for the new wave, appeal to everyone to strictly follow 3Ms:
🔹Mask up
🔹Maintain social distance
🔹Maintain hand hygiene#COVID19 #Omicron #Karnataka pic.twitter.com/uaMEYQH9wz— Dr Sudhakar K (@DrSudhakar_) January 4, 2022
ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ. ಅಲ್ಲದೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ..
ಇಂದಿನ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ರೇಡ್ ಶೇ 2.59ಕ್ಕೆ ಏರಿಕೆಯಾಗಿದೆ. ಇನ್ನು ಇಂದು 4 ಮಂದಿ ಕೊರೊನಾಗೆ ಕೊನೆಯುಸಿರೆಳೆದಿದ್ದಾರೆ.