ಸಿಡ್ನಿ : ಆಸ್ಟ್ರೇಲಿಯಾದಲ್ಲಿ ಮಹಾಮಾರಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಮುಖ ಕಂಡಿದ್ದು, ನ್ಯೂ ಸೌತ್ ವೇಲ್ಸ್ ನ ಶಾಲೆಗಳನ್ನು ತೆರೆಯಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ನ್ಯೂ ಸೌತ್ ವೇಲ್ಸ್ ನ ಪ್ರೀಮಿಯರ್ ಗ್ಲಾಡಿಸ್ ಬರ್ಜೆಕ್ಲಿಯನ್ ಮಾಹಿತಿ ನೀಡಿದ್ದಾರೆ.
ಕೊರೊನಾ ಹರಡುವ ಭೀತಿ ಇರುವ ಕಾರಣ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಶಾಲೆ ಹಾಗೂ ಕಾಲೇಜುಗಳಿಗೆ ಬೀಗ ಹಾಕಲಾಗಿದೆ. ಅದರಂತೆ ಆಸ್ಟ್ರೇಲಿಯಾದಲ್ಲೂ ಶಾಲೆಗಳಿಗೆ ರಜೆ ನೀಡಲಾಗಿತ್ತು. ಆದ್ರೆ ಇದೀಗ ನ್ಯೂ ಸೌತ್ ವೇಲ್ಸ್ನಲ್ಲಿ ಕೊರೊನಾ ಕೇಸ್‌ಗಳು ಕಡಿಮೆ ಇರುವುದಿಂದ ಶಾಲೆಗಳನ್ನು ತೆರೆಯಲಾಗುತ್ತಿದೆ ಎಂದು ಪ್ರೀಮಿಯರ್ ಗ್ಲಾಡಿಸ್ ಬರ್ಜೆಕ್ಲಿಯನ್ ಹೇಳಿದ್ದಾರೆ.
ಇನ್ನು ಕಳೆದೊಂದು ತಿಂಗಳಿನಿAದ ಮುಚ್ಚಲಾಗಿದ್ದ ಶಾಲೆಗಳನ್ನು ಮೇ 11ರಿಂದ ಮತ್ತೆ ತೆರೆಯಲಾಗುತ್ತದೆ. ಕೊರೊನಾ ಕೇಸ್‌ಗಳು ಇದೇ ರೀತಿ ಕಡಿಮೆ ಇದ್ದರೆ ಇನ್ನಷ್ಟು ಶಾಲೆಗಳನ್ನು ತೆರೆಯಲು ಯೋಚನೆ ಹಾಕಿಕೊಳ್ಳಲಾಗಿದೆ.
ನ್ಯೂ ಸೌತ್ ವೇಲ್ಸ್ 74 ಲಕ್ಷ ಜನ ಸಂಖ್ಯೆ ಹೊಂದಿದ್ದು, ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಆಸ್ಟೇಲಿಯಾದ ಮೂರನೇ ರಾಜ್ಯವಾಗಿದೆ. ಆಸ್ಟ್ರೇಲಿಯಾದಲ್ಲಿ 14,782 ಕೊರೊನಾ ವೈರಸ್ ಸೋಂಕಿತರು ಇದ್ದಾರೆ. 470 ಜನರು ಇದರಿಂದ ಮರಣ ಹೊಂದಿದ್ದಾರೆ.








