ದಿನೇ ದಿನೇ ದೇಶಾದ್ಯಂತ ತನ್ನ ಕಬಂದ ಬಾಹುವನ್ನು ವ್ಯಾಪಿಸುತ್ತಲೇ ಬರುತ್ತಿರುವ ಡೆಡ್ಲಿ ಕೊರೊನಾ ಮರಣ ಮೃದಂಗಕ್ಕೆ ಈಗಾಗಲೇ 34ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ದಿನೇ ದಿನೇ ರೌದ್ರಾವತಾರ ತೋರುತ್ತಿರುವ ಮಹಾಮಾರಿ ದೇಶದಲ್ಲಿ ಒಂದೇ ದಿನ 52 ಸಾವಿರದ 123 ಜನರನ್ನು ಆವರಿಸಿದೆ. ಕಳೆದ 24 ಗಂಟೆಗಳಲ್ಲಿ 775 ಮಂದಿ ಡೆಡ್ಲಿ ಕೊರೊನಾಗೆ ಮೃತಪಟ್ಟಿದ್ದಾರೆ. ಇದೀ ತಿಂಗಳು ಅಂದ್ರೆ ಜುಲೈ 23 ರಂದು 50, 904 ಕೇಸ್ ಗಳು ಪತ್ತೆಯಾಗುವ ಮೂಲಕ ದೇಶದಲ್ಲಿ ಈವರೆಗಿನ ಗರಿಷ್ಠ ಮಟ್ಟ ಎನಿಸಿಕೊಂಡಿತ್ತು. ಅದಾದ ಬಳಿಕ ಸೋಂಕಿತರ ಪ್ರಮಾಣ ಕೊಂಚ ಕಡಿಮೆಯಾದ್ರೂ ಇದೀಗ ಮತ್ತೆ ಒಂದೇ 50ಸಾವಿರ ಸೋಂಕಿತರ ಸಂಖ್ಯೆ ಪತ್ತೆಯಾಗಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15.8 ಲಕ್ಷ ಆಗಿದ್ರೆ, ಮೃತರ ಸಂಖ್ಯೆ 34,968ಕ್ಕೆ ಬಂದು ತಲುಪಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಅಲ್ಲದೇ ಗುಣಮುಖರ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆಯಾಗ್ತಿದ್ದು, ಇಲ್ಲಿಯರೆಗೂ ದೇಶದಲ್ಲಿ ಕೊರೊನಾ ಮಹಾಮಾರಿಯಿಂದ ಚೇಕರಿಕೆ ಕಮಡವರ ಸಂಖ್ಯೆ 10, 20,582ಕ್ಕೆ ಏರಿಕೆಯಾಗಿದೆ. ಇನ್ನೂ ಈವರೆಗೂ ಸಕ್ರಿಯವಾಗಿರುವ ಕೇಸ್ ಗಳ ಸಂಖ್ಯೆ 5,28, 242ರಷ್ಟಿದೆ.
Astro-ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ
ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ ಪಂಡಿತ್ ಜ್ಞಾನೇಶ್ವರ್ ರಾವ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ...








