ವಿಶ್ವಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ಮಹಾ ಮಾರಿ ದೇಶದಲ್ಲೂ ರಣಕೇಕೆ ಹಾಕ್ತಿದೆ. ತಮಿಳುನಾಡಿನಲ್ಲಿ ಕೊರೊನಾ ಆರ್ಭಟ ಜೋರಾಗಿಯೇ ಇದೆ. ದಿನೇ ದಿನೇ ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರತಿನಿತ್ಯ ಸಾವಿರಾರು ಮಂದಿಗೆ ಕೊರೊನಾ ಒಕ್ಕರಿಸುತ್ತಿದೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 5875 ಜನರಲ್ಲಿ ಸೋಂಕು ಇರುವುದು ಧೃಡವಾಗಿದ್ದು, ಒಂದೇ ದಿನ 98 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ತಮಿಳುನಾಡಿನಲ್ಲಿ ಈವರೆಗೂ ಸೋಂಕಿತರ ಸಂಖ್ಯೆ 2,57,613 ರ ಗಡಿ ದಾಟಿದ್ರೆ, ಸಾವಿನ ಸಂಖ್ಯೆ 4132ಕ್ಕೇರಿಕೆಯಾಗಿದೆ. ಮತ್ತೊಂದೆಡೆ ಗುಣಮುಖರ ಸಂಖ್ಯೆಯೂ ಹೆಚ್ಚಾಗಿದ್ದು, ಕಳೆದ 24 ಗಂಟಗಳಲ್ಲಿ 5517 ಮಂದಿ ಗುಣಮುಖರಾಗಿದ್ದಾರೆ.