ಚೀನಾದ ಮೂಲಕ ಇಡೀ ವಿಶ್ವಕ್ಕೆ ವ್ಯಾಪಿಸಿ ಅಟ್ಟಹಾಸ ಮುಂದುವರೆಸಿರುವ ಕೊರೊನಾ ಜಗತ್ತಿನ ಮೂಲೆಮೂಲೆಯಲ್ಲೂ, ಗಲ್ಲಿಯಲ್ಲಿಯಲ್ಲೂ ಮರಣ ಮೃದಂಗ ಮೊಳಗಿಸಿದೆ. ಈವರೆಗೂ ವಿಶ್ವದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,74,54,129ಕ್ಕೆ ಏರಿಕೆಯಾಗಿದೆ. ಕಿಲ್ಲರ್ ಕೊರೊನಾಗೆ ಜಗತ್ತಿನಾದ್ಯಂತ ಒಟ್ಟು 6,75,764 ಮಂದಿ ಮೃತಪಟ್ಟಿದ್ದಾರೆ. ಮೂಲಗಳ ಪ್ರಕಾರ ಒಟ್ಟು 1,09,26,716 ಸೋಂಕಿತರು ಈಗಾಗಲೇ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ ಕೊರೊನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕಾ ಮೊದಲ ಸ್ಥಾನದಲ್ಲಿದ್ರೆ , ತದನಂತರದಲ್ಲಿ ಬ್ರೆಜಿಲ್ ಇದೆ.
ಅಮೆರಿಕಾದಲ್ಲಿ ಒಟ್ಟು 48,13, 647 ಜನರಲ್ಲಿ ಸೋಂಕು ಕಂಡುಬಂದಿದ್ರೆ, ಮಹಾಮಾರಿಗೆ ಬಲಿಯಾದವರ ಸಂಖ್ಯೆ 1,58,365ಕ್ಕೆ ಬಂದು ತಲುಪಿದೆ. ಇನ್ನೂ ಈವರೆಗೂ ಅಮೆರಿಕಾದಲ್ಲಿ ಗುಣಮುಖರಾದವರ ಸಂಖ್ಯೆ 23,80,217ಕ್ಕೆ ಏರಿಕೆಯಾಗಿದೆ. ಇನ್ನೂ ಬ್ರೆಜಿಲ್ ನಲ್ಲಿಯೂ ಕೊರೊನಾ ರೌದ್ರಾವತಾರ ತೋರಿದ್ದು, 27,33,677 ಜನರಲ್ಲಿ ಸೋಂಕು ಇರುವುದು ದೃಢವಾಗಿದೆ. ಒಟ್ಟು ಬಲಿಯಾದವರ ಸಂಖ್ಯೆ 94,130ರ ಗಡಿ ದಾಟಿದೆ. ಈ ದೇಶದಲ್ಲಿ ಇಲ್ಲಿಯಯವರೆಗೂ ಮಹಾಮಾರಿಯಿಂದ ಚೇತರಿಸಿಕೊಂಡವರ ಸಂಖ್ಯೆಯಲ್ಲೂ ಏರಿಕೆ ಕಂಡಿದ್ದು, 1,884,051 ಸೋಂಕಿತರು ಗುಣಮುಖರಾಗಿದ್ದಾರೆ. ಇದಾದ ನಂತರದಲ್ಲಿ ಬರುವುದೇ ಭಾರತ. ಅಂದ್ರೆ ಭಾರತ ಕೊರೊನಾ ಸೋಂಕು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ 3ನೇ ಸ್ಥಾನದಲ್ಲಿದೆ. ಇದು ನಿಜಕ್ಕೂ ಆತಂಕಕಾರಿ ವಿಚಾರ. ಭಾರತದಲ್ಲಿ 18,05,838 ಪ್ರಕರಣಗಳು ದೃಢಪಟ್ಟಿದ್ದು, 11,88,389 ಮಂದಿ ಗುಣಮುಖರಾಗಿದ್ದಾರೆ. ಈವರೆಗೂ 38,176 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.
ಹಾವೇರಿ ಜಿಲ್ಲಾ ಪಂಚಾಯತ್ ನೇಮಕಾತಿ 2025
Haveri Zilla Panchayat Recruitment 2025 : ಜಿಲ್ಲಾ ಪಂಚಾಯತ್ ಕಾರ್ಯಾಲಯ ಹಾವೇರಿ ಇಲ್ಲಿ ಖಾಲಿ ಇರುವ ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕರು ಹುದ್ದೆಯ ಭರ್ತಿಗೆ ಅರ್ಹ...