ಮುಂಬಯಿ: ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯಾವಳಿ ಭರ್ಜರಿಯಾಗಿ ಆರಂಭವಾಗಿದೆ. ಆದರೆ, ಈ ಬಾರಿಯ ಐಪಿಎಲ್ ಗೂ ಕಂಟಕ ಶುರುವಾಗುವ ಆತಂಕ ಹೆಚ್ಚಾಗುತ್ತಿದೆ.
2023ರ ಐಪಿಎಲ್ ಟೂರ್ನಿಗೆ ಈಗ ಕೊರೊನಾ ಭೀತಿ ಎದುರಾಗುತ್ತಿದೆ. ಐಪಿಎಲ್ ಪಂದ್ಯದ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾಗೆ ಕೋವಿಡ್ ಕಾಣಿಸಿಕೊಂಡಿದೆ. ಇದರ ಪರಿಣಾಮ ಕಮೆಂಟೇಟರಿಯಿಂದ ದೂರ ಉಳಿದಿದ್ದಾರೆ.
45ರ ಹರೆಯದ ಆಕಾಶ್ ಚೋಪ್ರಾ ಐಪಿಎಲ್ ಟೂರ್ನಿಯಲ್ಲಿ ಕ್ರಿಕೆಟ್ ಕಾಮೆಂಟರಿ ಮಾಡುತ್ತಿದ್ದರು. ಆದರೆ ಆಕಾಶ್ ಚೋಪ್ರಾಗೆ ಕೋವಿಡ್ ವೈರಸ್ ಕಾಣಿಸಿಕೊಂಡಿದೆ. ವೈರಸ್‌ಗೆ ಕಾಟ್ ಅಂಡ್ ಬೋಲ್ಡ್ ಆಗಿದ್ದೇನೆ. ಸಿ ವೈರಸ್ ಮತ್ತೆ ಬಾಧಿಸಿದೆ. ಆದರೆ ಮೈಲ್ಡ್ ಸಿಂಪ್ಟಸ್ ಇದೆ. ಎಲ್ಲವೂ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.
ಜಿಯೋ ಸಿನೆಮಾ ಕಮೆಂಟರಿ ತಂಡದಲ್ಲಿರುವ ಆಕಾಶ್ ಚೋಪ್ರಾ, ಇತರ ಕೆಲ ಕ್ರಿಕೆಟ್ ಕಾರ್ಯಕ್ರಮಗಳನ್ನೂ ನಡೆಸಿಕೊಡುತ್ತಿದ್ದಾರೆ. ಇದೀಗ ಜಿಯೋ ಸಿನೆಮಾ ಬ್ರಾಡ್‌ಕಾಸ್ಟರ್ ಹಾಗೂ ಐಪಿಎಲ್ ಗವರ್ನಿಂಗ್ ಕೌನ್ಸಿಲ್, ಕೋವಿಡ್ ಪ್ರಕರಣ ಪತ್ತೆಯನ್ನು ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಸಂಪೂರ್ಣ ಗುಣಮುಖರಾಗುವವರಗೆ ಟೂರ್ನಿಯಿಂದ ದೂರ ಉಳಿಯುವಂತೆ ಸೂಚಿಸಿದೆ.
ಆಟಗಾರರು ಸುರಕ್ಷತೆ, ಟೂರ್ನಿಯ ಸುಗಮವಾಗಿ ಸಾಗಲು ಕೋವಿಡ್ ವೈರಸ್‌ನಿಂದ ಸಂಪೂರ್ಣವಾಗಿ ದೂರ ಉಳಿಯಬೇಕಾಗಿದೆ. ಹೀಗಾಗಿ ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ಸೂಚಿಸಲಾಗಿದೆ. ದೇಶದಲ್ಲಿ ಪ್ರತಿ ದಿನ ಸರಾಸರಿ 3 ಸಾವಿರ ಹೊರ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಅಲ್ಲದೇ, ಕಳೆದ 24 ಗಂಟೆಗಳಲ್ಲಿ 9 ಜನ ಕೊರೊನಾಗೆ ಬಲಿಯಾಗಿದ್ದಾರೆ.








