ಮಕ್ಕಳಿಗೆ ವಕ್ಕರಿಸುತ್ತಿದೆ ಕೊರೊನಾ : ಬಾಗಲಕೋಟೆಯಲ್ಲಿ 2 ಸಾವಿರ ಮಕ್ಕಳಿಗೆ ಸೋಂಕು
ಬಾಗಲಕೋಟೆ : ಕೊರೊನಾ ಹೆಮ್ಮಾರಿ ಮಕ್ಕಳಿಗೂ ವಕ್ಕರಿಸುತ್ತಿದ್ದು, ಜಿಲ್ಲೆಯಲ್ಲಿ ಈವರೆಗೂ ಎರಡು ಸಾವಿರಕ್ಕೂ ಅಧಿಕ ಮಕ್ಕಳಿಗೆ ಸೋಂಕು ದೃಢವಾಗಿದೆ.
ಜಿಲ್ಲೆಯಲ್ಲಿ ಬರೋಬ್ಬರಿ 2062 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಇದರಲ್ಲಿ 0-10 ವರ್ಷದೊಳಗಿನ 694 ಮಕ್ಕಳಿಗೆ, 11-18 ವರ್ಷದ 1368 ಮಕ್ಕಳಲ್ಲಿ ಕೋವಿಡ್ ಕಾಣಿಸಿಕೊಂಡಿದೆ.
ಈ ಪೈಕಿ 1 ರಿಂದ 10 ವಯಸ್ಸಿನ 318 ಮಕ್ಕಳು ಗುಣಮುಖರಾಗಿದ್ದರೇ 11ರಿಂದ 18 ವಯಸ್ಸಿನ 673 ಮಕ್ಕಳು ಸೋಂಕು ಮುಕ್ತವಾಗಿದ್ದಾರೆ.
ಜಿಲ್ಲೆಯಲ್ಲಿ ಮೊದಲ ಅಲೆಯಲ್ಲಿ ಒಟ್ಟು 1160 ಮಕ್ಕಳಿಗೆ ಕರೊನಾ ಸೋಂಕು ಕಾಣಿಸಿತ್ತು.
3ನೇ ಅಲೆ ಮಕ್ಕಳಿಗೆ ಮಾರಕ ಎನ್ನುವ ಹಿನ್ನೆಲೆಯಲ್ಲಿ 3ನೇ ಅಲೆ ಬಗ್ಗೆ ಬಾಗಲಕೋಟೆ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸುತ್ತಿದೆ.
ಜಿಲ್ಲಾಡಳಿತ ಈಗಾಗಲೇ ಮೂರು ಬಾರಿ ವಿವಿಧ ಚಿಕ್ಕಮಕ್ಕಳ ತಜ್ಞ ವೈದ್ಯರ ಜೊತೆ ಸಭೆ ನಡೆಸಿದೆ.