ಬಳ್ಳಾರಿ : ಬಳ್ಳಾರಿಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಕೇಸ್ ಧೃಡವಾಗಿ. 42 ವರ್ಷದ ಮಹಿಳೆಗೆ ಕೊರೋನಾ ಸೋಂಕು ಧೃಡವಾಗಿದೆ. ಈ ಕೇಸ್ ಸೇರಿ ಜಿಲ್ಲೆಯಲ್ಲಿ 52 ಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆಗೆ ಇದೀಗ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ 42 ವರ್ಷದ ಮಹಿಳೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇದೀಗ ಅವರಿಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ. ಮಹಿಳೆಯನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಿಂದ ಕೊವೀಡ್ ಆಸ್ಪತ್ರೆಗೆ ಶೀಫ್ಟ್ ಮಾಡಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಅಲ್ಲದೆ ಕೊರೊನಾ ಬುಲಿಟಿನ್ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್, ಗಣಿನಾಡು ಬಳ್ಳಾರಿಯಲ್ಲಿ 10 ಸಾವಿರ ಕೊರೋನಾ ಟೆಸ್ಟ್ ಮಾಡಲಾಗಿದೆ. ಇದುವರೆಗೂ 10,232 ಜನರ ರಕ್ತದ ಮಾದರಿ ಮತ್ತು ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 10049 ಜನರ ವರದಿ ನೆಗೆಟಿವ್ ಬಂದಿದೆ. 51 ಜನರಿಗೆ ಪಾಸಿಟಿವ್ ಪ್ರಕರಣಗಳಿವೆ. ಇನ್ನೂ 132 ಜನರ ಲ್ಯಾಬ್ ರಿಪೋರ್ಟ್ ಬರಬೇಕಿದೆ. 27 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 23 ಪ್ರಕರಣಗಳು ಸಕ್ರಿಯವಾಗಿವೆ. 881 ಜನರು ಮಾತ್ರ ಕ್ವಾರೆಂಟೆನ್ ನಲ್ಲಿದ್ದಾರೆ. 2400 ಜನರು 28 ದಿನಗಳ ಕಾಲದ ಕ್ವಾರೆಂಟೆನ್ ಮುಗಿಸಿದ್ದಾರೆ. ಇದುವರೆಗೆ ಕೊರೊನಾ ಮಹಾಮಾರಿಗೆ ಒಬ್ಬರು ಮಾತ್ರ ಬಲಿಯಾಗಿದ್ದಾರೆ. 3 ಲಕ್ಷದ 41 ಸಾವಿರದ 377 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.








