ಯಡ್ರಾಮಿ: ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ವಡಗೇರಾ ಗ್ರಾಮದಲ್ಲಿ 54 ವರ್ಷದ ವ್ಯಕ್ತಿ, 30 ವರ್ಷದ ವ್ಯಕ್ತಿ ಸೇರಿ 28 ವರ್ಷದ ಯುಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸದ್ಯ ಸೋಂಕಿತರಿಗೆ ಕಲಬುರಗಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ.
ಲಾಕ್ ಡೌನ್ ಗೆ ಕ್ಯಾರೆ ಎನ್ನದ ಜನರು
ಪಟ್ಟಣದಲ್ಲಿ ಕೊರೊನಾ ಸೋಂಕು ದಿನೇದಿನೇ ಕಾಣಿಸಿಕೊಳ್ಳುತ್ತಿದ್ದರೂ, ಇಲ್ಲಿ ಲಾಕ್ ಡೌನ್ ಯಾವುದು ಲೆಕ್ಕಕ್ಕೆ ಇಲ್ಲದಂತಾಗಿದೆ. ಯಾವುದೇ ಸುರಕ್ಷತಾ/ಅಂತರ ಪಾಲಿಸದೆ ಪೊಲೀಸರ ಸಮ್ಮುಖದಲ್ಲಿಯೇ ಭರ್ಜರಿ ವಾರದ ಸಂತೆ ನಡೆಯಿತು. ಸಾರ್ವಜನಿಕು ಯಾವುದೇ ಭಯವಿಲ್ಲದೆ, ಮಾಸ್ಕ್ ಬಳಸದೆ ರಸ್ತೆ ಬದಿಯ ವ್ಯಾಪರ, ವಹಿವಾಟು ನಡೆಸುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. ಪೊಲೀಸರು ನಮಗೂ ಅವರಿಗೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ಕಂಡುಬರುತ್ತಿದೆ.








