ಬಳ್ಳಾರಿ : ಗಣಿನಾಡು ಬಳ್ಳಾರಿಯಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದೆ. ಆದೋನಿ ಮೂಲದ 62 ವರ್ಷದ ವ್ಯಕ್ತಿಯ ಸಾವು ಆಗಿದೆ. ಸೋಂಕಿತನು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದನು. ಮೃತ ವ್ಯಕ್ತಿ ಕಿಡ್ನಿ ವೈಫಲ್ಯದಿಂದ ಸಹ ಬಳಲುತ್ತಿದ್ದನು. ಇದೇ ಜೂ.17ರಂದು ವಿಮ್ಸ್ ಗೆ ದಾಖಲಾಗಿದ್ದನು. ಅನಿಯಂತ್ರಿತ ಡಯಾಬಿಟೀಸ್ ಸಹ ಸಾವಿಗೆ ಕಾರಣ ಎಂದು ಹೇಳಾಗಿದೆ. ಇಂದು ನಸುಕಿನಲ್ಲಿ ಸಾವನ್ನಪ್ಪಿದ್ದಾನೆ. ಇದೀಗ ಬಳ್ಳಾರಿಯಲ್ಲಿ ಕೊರೊನಾಗೆ ಮೂರನೆ ಬಲಿಯಾಗಿದೆ ಬಳ್ಳಾರಿ ಜಿಲ್ಲಾಧಿಕಾರಿ ನಕುಲ್ ಅಧಿಕೃತ ಹೇಳಿದ್ದಾರೆ.