ಯೂರೋಪ್ ರಾಷ್ಟಗಳು ಮತ್ತೆ `ಲಾಕ್” : ಭಾರತದ ಕಥೆ ಏನು..?
ನವದೆಹಲಿ : ವಾತಾವಣರದಲ್ಲಿ ಬದಲಾವಣೆ, ಜನರ ನಿರ್ಲಕ್ಷ್ಯದಿಂದಾಗಿ ಯುರೋಪ್ ದೇಶಗಳಲ್ಲಿ ಕೊರೊನಾ ( corona ) ಎರಡನೇ ಅಲೆ ಎದ್ದಿದೆ. ಹೀಗಾಗಿ ಜರ್ಮನಿ, ಸ್ಪೇನ್, ಯುಕೆ, ಮತ್ತು ಫ್ರಾನ್ಸ್ ನಲ್ಲಿ ಸೋಂಕಿತರ, ಸಾವಿನ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ.
ಈ ಕಾರಣಕ್ಕಾಗಿ ಈ ಯುರೋಪ್ ದೇಶಗಳಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಲಾಗಿದೆ. ಜೊತೆಗೆ ಮತ್ತೆ ಲಾಕ್ ಡೌನ್ ಜಾರಿ ಮಾಡಲಾಗಿದೆ.
ಕೊರೊನಾ ಎರಡನೇ ಅಲೆಗೆ ತತ್ತರಿಸಿರುವ ಫ್ರಾನ್ಸ್ ನಲ್ಲಿ ಮನೆಯಿಂದ ಹೊರಬರಲು ಕೂಡ ಅನುಮತಿ ಪಡೆಯಬೇಕಿದೆ. ಸ್ಪೇನ್ ನಲ್ಲಿ ರಾತ್ರಿ ಹೊತ್ತು ಮನೆಯಿಂದ ಆಚೆ ಬರದಂತೆ ತಿಳಿಸಲಾಗಿದೆ.
ಜರ್ಮನಿಯಲ್ಲಿ ಥಿಯೇಟರ್ ಸೇರಿದಂತೆ ಹಲವು ಸ್ಥಳಗಳಿಗೆ ನಿಬರ್ಂಧ ಹೇರಲಾಗಿದೆ.
ಭಾರತದಲ್ಲಿ ಮತ್ತೆ ಲಾಕ್ ಡೌನ್
ಭಾರತದಲ್ಲೂ ಕೊರೊನಾ ರಣಕೇಕೆ ಹಾಕುತ್ತಿರುವ ಹಿನ್ನೆಲೆ ದೇಶದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಇದನ್ನೂ ಓದಿ : ಜಮ್ಮು ಕಾಶ್ಮೀರ : ಮೂರು ಬಿಜೆಪಿ ಕಾರ್ಯಕರ್ತರನ್ನು ಗುಂಡಿಕ್ಕಿ ಕೊಂದ ಅಪರಿಚಿತ ಭಯೋತ್ಪಾದಕರು
ಈ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಭಾರತ ದೇಶದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಯಾವುದೇ ಪ್ರಸ್ತಾವ ಇಲ್ಲ.
ನಾವು ಈಗಾಗಲೇ ಕೊರೊನಾ ನಿಯಂತ್ರಣಕ್ಕೆ ಸಕಲ ಸಿದ್ಧತೆಯಲ್ಲಿದ್ದೇವೆ. ಹೀಗಾಗಿ ನಮ್ಮ ದೇಶದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ ಪುಲ್ವಾಮಾ ದಾಳಿ ಕುರಿತು ಪಾಕಿಸ್ತಾನ ಪಾರ್ಲಿಮೆಂಟ್ ನಲ್ಲಿ ಸಚಿವರೊಬ್ಬರ ಹೇಳಿಕೆ ವಿಚಾರ ಸಂಬಂಧ ಮಾತನಾಡಿ, ಈ ಕುರಿತು ಅಲ್ಲಿನ ಮಂತ್ರಿಗಳೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಪುಲ್ವಾಮಾ ದಾಳಿ ಕುರಿತು ಇಲ್ಲಿನ ಕಾಂಗ್ರೆಸ್ ಪಕ್ಷದವರು ಸಾಕ್ಷಿ ಕೇಳಿದ್ದರು. ಈ ಬಗ್ಗೆ ಪಾಕಿಸ್ತಾನದವರೇ ಅವರಿಗೆ ಉತ್ತರ ಕೊಟ್ಟಿದ್ದಾರೆ. ಪಾಕಿಸ್ತಾನ ಭಯೋತ್ಪಾದನಾ ಚಟುವಟಿಕೆ ಮಾಡುತ್ತಿದೆ ಅಂತ ಜಾಗತಿಕ ವೇದಿಕೆಯಲ್ಲಿ ನಾವು ಹೇಳುತ್ತಿದ್ದೆವು.
2024 ರ ವೇಳೆಗೆ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕ ಗುರಿ ಸಾಧಿಸಲಿದೆ – ಪ್ರಧಾನಿ ಮೋದಿ
ಈಗ ಅವರೇ ಬಹಿರಂಗವಾಗಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡೋದಾಗಿ ಒಪ್ಪಿಕೊಂಡಿದ್ದಾರೆ. ಭಾರತ ದೇಶ ಸಾಕಷ್ಟು ಸದೃಢ ಎಂಬುದು ಪಾಕಿಸ್ತಾನಕ್ಕೆ ತಿಳಿದಿದೆ ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel