ಜಮ್ಮು ಕಾಶ್ಮೀರ : ಮೂರು ಬಿಜೆಪಿ ಕಾರ್ಯಕರ್ತರನ್ನು ಗುಂಡಿಕ್ಕಿ ಕೊಂದ ಅಪರಿಚಿತ ಭಯೋತ್ಪಾದಕರು Terrorist killed bjp workers
ಕುಲ್ಗಾಮ, ಅಕ್ಟೋಬರ್30: ಆಘಾತಕಾರಿ ಘಟನೆಯೊಂದರಲ್ಲಿ, ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಅಪರಿಚಿತ ಭಯೋತ್ಪಾದಕರು ಗುರುವಾರ ಮೂರು ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾರ್ಯಕರ್ತರನ್ನು ಗುಂಡಿಕ್ಕಿ ಕೊಂದಿದ್ದಾರೆ. Terrorist killed bjp workers
ಅವರ ಮೇಲೆ ಈ ದಾಳಿ ನಡೆದಿದ್ದು ಜಿಲ್ಲೆಯ ಖಾಜಿಗುಂಡ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ . ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೈ.ಕೆ. ಪೋರಾದ ಗ್ರಾಮವೊಂದರಲ್ಲಿ ರಾತ್ರಿ 8.20 ರ ಸುಮಾರಿಗೆ ಭಯೋತ್ಪಾದಕರ ಅಪರಾಧ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
2024 ರ ವೇಳೆಗೆ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕ ಗುರಿ ಸಾಧಿಸಲಿದೆ – ಪ್ರಧಾನಿ ಮೋದಿ
ಗಾಯಗೊಂಡಿದ್ದ, ಬಿಜೆಪಿ ಕಾರ್ಯಕರ್ತರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರನ್ನು ಮೃತಪಟ್ಟಿರುವುದಾಗಿ ಘೋಷಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ವೈಕೆಪೋರಾ (ಬಿಜೆಪಿ ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ), ಫಿಡಾ ಹುಸೇನ್ ಯಾತೂ, ಸೋಫತ್ದೇವ್ಸರ್, ಉಮರ್ ರಶೀದ್ ಬೀಗ್ ರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಏತನ್ಮಧ್ಯೆ, ಶ್ರೀನಗರದಲ್ಲಿ ಬಿಜೆಪಿ ವಕ್ತಾರರು ಈ ಹತ್ಯೆಯನ್ನು ಖಂಡಿಸಿದ್ದು ಅದನ್ನು ಅನಾಗರಿಕ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ, ಕಾರಿನಲ್ಲಿದ್ದಾಗ ಭಯೋತ್ಪಾದಕರು ಅವರ ಮೇಲೆ ಗುಂಡು ಹಾರಿಸಿದರು ನಂತರ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಫಿಡಾ ಅವರು ಸ್ಥಳದಲ್ಲೇ ಸಾವನ್ನಪ್ಪಿದರೆ ಇನ್ನಿಬ್ಬರು ನಂತರ ಸಾವನ್ನಪ್ಪಿದರು.
ಭದ್ರತಾ ಪಡೆಗಳ ಜಂಟಿ ತಂಡವು ದಾಳಿಕೋರರನ್ನು ಬಂಧಿಸಲು ಇಡೀ ಪ್ರದೇಶವನ್ನು ಸುತ್ತುವರೆದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ