ತಲಾ 10 ಸಾವಿರ ಕೊಟ್ಟು ಆಮೇಲೆ ಲಾಕ್ ಡೌನ್ ಮಾಡಿ : ಸಿದ್ದರಾಮಯ್ಯ Siddaramaiah
ಬೀದರ್ : ಕೊರೊನಾಗೆ ಲಾಕ್ ಡೌನ್ ಪರಿಹಾರವಲ್ಲ. ಒಂದು ವೇಳೆ ಲಾಕ್ ಡೌನ್ ಮಾಡೋದಾದ್ರೆ ರಾಜ್ಯದ ಒಂದು ಕೋಟಿ ಕುಟುಂಬಗಳಿಗೆ ತಲಾ 10 ಸಾವಿರ ರುಪಾಯಿಗಳ ಅಕೌಂಟ್ ಗೆ ಜಮಾ ಮಾಡಲಿ ಎಂದು ಹೇಳಿದ್ದಾರೆ.
ಬೀದರ್ ಹಮನಾಬಾದ್ ನಲ್ಲಿ ಮಾತನಾಡಿದ ಅವರು, ಕೊರೊನಾ ತಡೆಗೆ ಲಾಕ್ ಡೌನ್ ಮಾಡುವುದು ಪರಿಹಾರ ಇಲ್ಲ. ಮೊದಲು ಈ ರೋಗ ಹೇಗೆ ಹರಡುತ್ತಿದೆ ಎಂಬುದನ್ನು ಕಂಡು ಹಿಡಿದು ಚಿಕಿತ್ಸೆ ನೀಡಬೇಕು.
ಕೊರೊನಾ ಸೋಂಕು ಕಡಿಮೆ ಆದಾಗ ಸರ್ಕಾರ ರಿಲ್ಯಾಕ್ಸ್ ಮಾಡಿದೆ. ಟೆಸ್ಟ್ ಮಾಡುವುದನ್ನೇ ಬಿಟ್ಟು ಬಿಟ್ಟಿದೆ. ಹೊರಗಡೆಯಿಂದ ಬರುವವರನ್ನು ಪರಿಶೀಲಿಸುವುದನ್ನು ಬಿಟ್ಟರು.
ಸಭೆ-ಸಮಾರಂಭಗಳನ್ನು ಮಾಡಲುಕೆ ಶುರು ಮಾಡಿದರು. ಕಡ್ಡಾಯವಾಗಿ ಎಲ್ಲರಿಗೂ ಕೊರೊನಾ ಲಸಿಕೆ ಹಾಕಬೇಕು ಎಂದು ಸಲಹೆ ನೀಡಿದರು.
ಸರ್ವ ಪಕ್ಷ ಸಭೆ ಬಗ್ಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕೆ ಸರ್ವ ಪಕ್ಷಗಳ ಸಭೆ ಕರೆದರೆ ಹೋಗುತ್ತೇವೆ. ಕರೆಯದೆ ಹೊಗಲಿಕ್ಕಾಗುತ್ತಾ ಎಂದು ಪ್ರಶ್ನಿಸಿದರು.










