ವೈದ್ಯರಿಗೂ ಕೊರೊನಾ ಕಂಟಕ; ಹೋಟೆಲ್ ಸೀಲ್‍ಡೌನ್ |ಕೊರೊನಾ ಹೆಮ್ಮಾರಿ

ಮಂಗಳೂರು: ಕೊರೊನಾ ಆರ್ಭಟಕ್ಕೆ ಸಾಮಾನ್ಯ ಜನತೆ ಇರಲಿ, ಮಂಗಳೂರಿನ ವೈದ್ಯರೂ ಕೂಡ ತತ್ತರಿಸಿ ಹೋಗಿದ್ದಾರೆ.
ನಗರದ ಪ್ರಮುಖ ಖಾಸಗಿ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳ 8 ಮಂದಿ ತಜ್ಞ ವೈದ್ಯರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಆಸ್ಪತ್ರೆಗಳ 58 ವೈದ್ಯರನ್ನು ಕ್ವಾರಂಟೈನ್ ಮಾಡಲಾಗಿದೆ.
58 ಮಂದಿ ವೈದ್ಯರು ಕ್ವಾರಂಟೈನ್‍ಗೆ ಒಳಗಾಗಿರುವುದು ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆಗೂ ತೊಂದರೆಯಾಗಿದೆ ಎನ್ನಲಾಗಿದೆ.
ಇದೇ ವೇಳೆ, ಮಂಗಳೂರಿನ ಖಾಸಗಿ ಹೋಟೆಲ್ ಮಾಲೀಕ ಹಾಗೂ ಆತನ ಮಗನಿಗೂ ಕೋವಿಡ್-19 ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಹೋಟೆಲ್‍ನ್ನು ಸೀಲ್‍ಡೌನ್ ಮಾಡಿದೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This