ಬೆಂಗಳೂರು : ಕೊರೊನಾ ಆತಂಕದ ನಡುವೆಯೂ ರಾಜ್ಯ ವಿಧಾನಸಭಾ ಅಧಿವೇಶನ ಆರಂಭವಾಗಿದೆ.
ಹೀಗಾಗಿ ವಿಧಾನಸೌಧ ಪ್ರವೇಶಿಸಲು ಎಲ್ಲರೂ ತಮಗೆ ಕೊರೊನಾ ನೆಗೆಟಿವ್ ಎಂದು ಸೂಚಿಸುವ ಐಡಿ ಟ್ಯಾಗ್ ಧರಿಸುವುದು ಕಡ್ಡಾಯ ಎಂದು ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಘೋಷಿಸಿದ್ದಾರೆ.
ಇಂದು ಕಲಾಪ ಆರಂಭವಾಗುತ್ತಿದ್ದಂತೆ ಮಾತನಾಡಿದ ಸ್ಪೀಕರ್, ಶಾಸಕರು, ಅಧಿಕಾರಿಗಳು, ಪತ್ರಕರ್ತರು ಹಾಗೂ ಸಿಬ್ಬಂದಿ ವರ್ಗಕ್ಕೂ ಕೊರೊನಾ ನೆಗೆಟಿವ್ ಐಡಿ ಕಡ್ಡಾಯ ಎಂದು ತಿಳಿಸಿದರು.
ಅಲ್ಲದೆ ಇದೇ ವೇಳೆ ಶನಿವಾರದವರೆಗೆ ಅಧಿವೇಶನ ನಡೆಯಲಿದೆ ಎಂದು ತಿಳಿಸಿ ವಿಧಾನಸೌಧದೊಳಗೆ ಪ್ರವೇಶಿಸುವ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಹೊಸ ಸುದ್ದಿಗಳನ್ನು ಇಲ್ಲಿ ಓದಿ
ಮಾತನಾಡುವಾಗ ಮಾಸ್ಕ್ ಹಾಕ್ಕೋಂಡೇ ಮಾತನಾಡಬೇಕು. ಯಾರಿಗಾದರೂ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆದ್ರೂ ನಿರ್ಲಕ್ಷ್ಯ ಮಾಡದೇ ತಪಾಸಣೆಗೊಳಗಾಗಬೇಕು ಎಂದು ಹೇಳಿದರು.







