ಇಡೀ ರಾಜ್ಯದಲ್ಲಿ ಇಂದು ಮತ್ತೆ ಕೊರೊನಾ ಹಾವಳಿ ಮುಂದುವರೆದಿದ್ದು, ದಾವಣಗೆರೆಯಲ್ಲೂ ಕೊರೊನಾ ಸ್ಫೋಟವಾಗಿದೆ. ಇಂದು ಜಿಲ್ಲೆಯಲ್ಲಿ 108 ಹೊಸದಾಗಿ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, ಜಿಲ್ಲೆಯ ಜನರ ಆತಂಕವನ್ನು ಹೆಚ್ಚಿಸಿದೆ. ಇನ್ನೂ ಕೊರೊನಾ ಮರಣ ಮೃದಂಗಕ್ಕೆ ಸಾವಿನ ಸಂಖ್ಯೆಯೂ ದಿನೇ ದಿನೇ ಏರುತ್ತಲೇ ಇದ್ದು, ಇಂದು ನಾಲ್ವರು ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 2209 ಜನರಲ್ಲಿ ಸೋಂಕು ಇರುವುದು ಧೃಢವಾಗಿದೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಒಟ್ಟು 52 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಇಂದು ಮೃತರ ಪೈಕಿ, ಓರ್ವ 63 ವರ್ಷದ ವ್ಯಕ್ತಿ, 59 ವರ್ಷದವರು, 80 ವರ್ಷದ ವೃದ್ಧೆ ಹಾಗೂ 55 ವರ್ಷದವರಾಗಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ಈವರೆಗೂ 188 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 1390 ಕೇಸ್ ಗಳು ಇನ್ನೂ ಸಕ್ರಿಯವಾಗಿವೆ.
Astrology : ಗುಣಪಡಿಸುವ ಮಂತ್ರಗಳು! ಈ ಮಂತ್ರಗಳನ್ನು 108 ಬಾರಿ ಪಠಿಸಿದರೆ ಅಥವಾ ಬೆಳಕಿನ ರೂಪದಲ್ಲಿ ಕೇಳಿದರೆ ಬಾರದ ಯಾವುದೇ ಕಾಯಿಲೆ ದೂರವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?
ಗುಣಪಡಿಸುವ ಮಂತ್ರಗಳು! ಈ ಮಂತ್ರಗಳನ್ನು 108 ಬಾರಿ ಪಠಿಸಿದರೆ ಅಥವಾ ಬೆಳಕಿನ ರೂಪದಲ್ಲಿ ಕೇಳಿದರೆ ಬಾರದ ಯಾವುದೇ ಕಾಯಿಲೆ ದೂರವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಕೆಳಗೆ ತಿಳಿಸಲಾದ...