ಕೊರೊನಾ ರಿಪೋರ್ಟ್ : ನಿನ್ನೆ 2,81,386 ಮಂದಿಗೆ ಸೋಂಕು, 3,78,741 ಮಂದಿ ಡಿಸ್ಚಾರ್ಜ್ Corona
ನವದೆಹಲಿ : ತುಂಬಾ ದಿನಗಳ ಬಳಿಕ ದೇಶದಲ್ಲಿ ಕೊರೊನಾ ಅಬ್ಬರ ತಗ್ಗಿದಂತೆ ಕಾಣುತ್ತಿದೆ. ಇದೇ ಮೊದಲ ಬಾರಿಗೆ ದೇಶದಲ್ಲಿ ದಿನವೊಂದರಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆ 3 ಲಕ್ಷ ಗಡಿಯಿಂದ ಕೆಳಗಿಳಿದಿದೆ. ಆದರೆ ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿಲ್ಲ.
ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 2,81,386 ಹೊಸ ಕೇಸ್ ಗಳು ಪತ್ತೆಯಾಗಿದ್ದು, 4,106 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 2,49,65,463 ಹಾಗೂ ಮೃತರ ಸಂಖ್ಯೆ 2,74,390ಕ್ಕೆ ಏರಿಕೆಯಾಗಿದೆ.
ನಿನ್ನೆ ದೇಶದಲ್ಲಿ 3,78,741 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್? ಆಗಿದ್ದಾರೆ. ಇದರೊಂದಿಗೆ ಒಟ್ಟು 2,11,74,076 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.ದೇಶದಲ್ಲಿನ್ನೂ 35,16,997 ಕೇಸ್ ಗಳು ಸಕ್ರಿಯವಾಗಿವೆ.