Corona Report : ದೇಶದಲ್ಲೀಗ 7,60,019 ಕೇಸ್ ಗಳು ಮಾತ್ರ ಆಕ್ಟೀವ್
ನವದೆಹಲಿ : ದೇಶದಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ಹೊಸ ಕೇಸ್ ಗಳು ಕಡಿಮೆಯಾಗುತ್ತಿದ್ದು, ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಪರಿಣಾಮ ದೇಶದಲ್ಲಿ ಚೇತರಿಕೆ ಪ್ರಮಾಣ ಶೇ. 96.16ಕ್ಕೆ ಏರಿಕೆಯಾಗಿದ್ದು, 7,60,019 ಕೇಸ್ ಗಳು ಮಾತ್ರ ಆಕ್ಟೀವ್ ಆಗಿವೆ.
ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 60,753 ಸೋಂಕಿತರು ಪತ್ತೆಯಾಗಿದ್ದು, 1,647 ಮಂದಿ ಹೆಮ್ಮಾರಿಗೆ ಬಲಿಯಾಗಿದ್ದಾರೆ.
ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,98,23,546 ಹಾಗೂ ಮೃತರ ಸಂಖ್ಯೆ 3,85,137ಕ್ಕೆ ಏರಿಕೆಯಾಗಿದೆ.
ಇಲ್ಲಿಯವರೆಗೆ 2,86,78,390 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.